ಆನೆಗಳ ಸರಣಿ ಸಾವು: ಸಕ್ರೆಬೈಲು ಆನೆ ಬಿಡಾರಕ್ಕೆ ದೆಹಲಿ ತಜ್ಞರು

By Kannadaprabha NewsFirst Published Oct 21, 2019, 10:37 AM IST
Highlights

ಸಕ್ರೆಬೈಲು ಆನೆ ಬಿಡಾರದಲ್ಲಿ  ಆನೆಗಳ ಸರಣಿ ಸಾವಾಗುತ್ತಿದ್ದು ಈ ನಿಟ್ಟಿನಲ್ಲಿ ಸ್ಥಳಕ್ಕೆ ತಜ್ಷರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

ಶಿವಮೊಗ್ಗ [ಅ.21]:  ರಾಜ್ಯದ ವಿವಿಧ ಆನೆ ಬಿಡಾರಗಳಲ್ಲಿ ಆನೆಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸೂಚನೆ ಮೇರೆಗೆ ಮೂವರು ತಜ್ಞರ ತಂಡವೊಂದು ಇಲ್ಲಿನ ಸಕ್ಕರೆಬೈಲು ಆನೆ ಬಿಡಾರಕ್ಕೆ  ಭೇಟಿ ನೀಡಿ ಪರಿಶೀಲಿಸಿತು. 

ದೆಹಲಿಯಿಂದ ಡಾ. ಅಶ್ರಫ್‌, ಕಲೈವಣ್ಣನ್‌ ಮತ್ತು ರಾಚಪ್ಪ ಎಂಬ ಮೂವರು ತಜ್ಞರನ್ನು ಒಳಗೊಂಡ ತಂಡ ಭೇಟಿ ನೀಡಿತು. ಅಲ್ಲಿರುವ ವ್ಯವಸ್ಥೆಯ ಬಗ್ಗೆ, ಆನೆಗಳ ಕುರಿತು ನಿಗಾ ವಹಿಸುವ ಕುರಿತು ಕೂಡ ಮಾಹಿತಿ ಸಂಗ್ರಹಿಸಿತು. 

ಬೆಂಗಳೂರಿನಿಂದ ಇನ್ನೊಂದು ತಂಡ ಇಲ್ಲಿಗೆ ಭೇಟಿ ನೀಡಲಿದ್ದು, ವಿವರವಾಗಿ ಪರಿಶೀಲನೆ ನಡೆಸಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತೀಚೆಗೆ ಇಲ್ಲಿ ಸಾವು ಕಂಡ ನಾಗಣ್ಣ ಎಂಬ ಆನೆಯ ಸಾವಿಗೆ ಹರ್ಪೀಸ್‌ ಎಂಬ ರೋಗ ಕಾರಣವಾಗಿದೆ ಎಂಬ ಮಾಹಿತಿ ಹೊರ ಬಂದ ಮೇಲೆ ಈ ಆನೆ ಬಿಡಾರದ ಕುರಿತು ಇನ್ನಷ್ಟು ಗಮನ ಹರಿಸಲಾಗುತ್ತಿದೆ.

 

click me!