ಪ್ರಖರ ಬೆಳಕು ಉತ್ಪಾದಿಸುವ ಕ್ವಾಂಟಮ್‌ ಡಾಟ್‌ ಶೋಧಿಸಿದ ಮೂವರು ಅಮೆರಿಕಾ ವಿಜ್ಞಾನಿಗಳಿಗೆ ನೊಬೆಲ್

By Kannadaprabha News  |  First Published Oct 5, 2023, 10:58 AM IST

 ಅತ್ಯಂತ ಪ್ರಖರ ಬೆಳಕನ್ನು ಹೊರಹೊಮ್ಮಿಸುವ ಅತ್ಯಂತ ಚಿಕ್ಕ ಕಣವಾದ 'ಕ್ವಾಂಟಮ್‌ ಡಾಟ್ಸ್‌'ನ ಅಭಿವೃದ್ಧಿಯ ಬಗ್ಗೆ ಅಧ್ಯಯನ ನಡೆಸಿದ ಅಮೆರಿಕದ ಮೂವರು ವಿಜ್ಞಾನಿಗಳಿಗೆ ರಸಾಯನ ಶಾಸ್ತ್ರದ ನೊಬೆಲ್‌ ಲಭ್ಯವಾಗಿದೆ.


ಸ್ಟಾಕ್‌ಹೋಮ್‌: ಅತ್ಯಂತ ಪ್ರಖರ ಬೆಳಕನ್ನು ಹೊರಹೊಮ್ಮಿಸುವ ಅತ್ಯಂತ ಚಿಕ್ಕ ಕಣವಾದ 'ಕ್ವಾಂಟಮ್‌ ಡಾಟ್ಸ್‌'ನ ಅಭಿವೃದ್ಧಿಯ ಬಗ್ಗೆ ಅಧ್ಯಯನ ನಡೆಸಿದ ಅಮೆರಿಕದ ಮೂವರು ವಿಜ್ಞಾನಿಗಳಿಗೆ ರಸಾಯನ ಶಾಸ್ತ್ರದ ನೊಬೆಲ್‌ ಲಭ್ಯವಾಗಿದೆ.

ಎಂಐಟಿಯ ಮೌಂಗಿ ಬವೆಂಡಿ, ಕೊಲಂಬಿಯ ವಿಶ್ವವಿದ್ಯಾಲಯದ (Columbia University) ಲೂಯಿಸ್‌ ಬ್ರಸ್‌ ಮತ್ತು ನ್ಯಾನೋಕ್ರಿಸ್ಟಲ್ಸ್‌ ಟೆಕ್ನಾಲಜಿ ಸಂಸ್ಥೆಯ ಅಲೆಕ್ಸಿ ಎಕಿಮೋವ್‌ ಅವರಿಗೆ ಈ ಬಾರಿಯ ಪ್ರಶಸ್ತಿ ಸಿಕ್ಕಿದೆ. ಈ ಮೂವರು ವಿಜ್ಞಾನಿಗಳು ಎಲೆಕ್ಟ್ರಾನಿಕ್ಸ್‌ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಾಗುವ ಅತ್ಯಂತ ಪ್ರಖರ ಬೆಳಕನ್ನು ಉತ್ಪಾದಿಸುವ ಕ್ವಾಂಟಮ್‌ ಚುಕ್ಕಿಗಳ ಬಗ್ಗೆ ಅಧ್ಯಯನ ನಡೆಸಿದ್ದರು.

Tap to resize

Latest Videos

undefined

ಆಕಸ್ಮಿಕವಾಗಿ 'ಮಮ್ಮಿ' ಆದವನಿಗೆ 128 ವರ್ಷಗಳ ಬಳಿಕ ಅಂತ್ಯಕ್ರಿಯೆ ಭಾಗ್ಯ

ಈ ಕ್ವಾಂಟಮ್‌ ಚುಕ್ಕಿಗಳು (quantum dots) ಕೆಲವೇ ಕೆಲವು ಅಣುಗಳಷ್ಟು ವ್ಯಾಸವನ್ನು ಹೊಂದಿದ್ದು, ಇವು ಈಗಾಗಲೇ ಟೆಲಿವಿಷನ್‌ ಪರದೆ ಮತ್ತು ಎಲ್‌ಇಡಿ ಲ್ಯಾಂಪ್‌ಗಳಲ್ಲಿ ಬಳಕೆಯಾಗುತ್ತಿದೆ. ಇವು ರಸಾಯನ ಪ್ರಕ್ರಿಯೆಗಳನ್ನು ವೇಗಗೊಳಿಸಲಿವೆ ಮತ್ತು ಇವುಗಳ ಸ್ಪಷ್ಟವಾದ ಬೆಳಕು ಟ್ಯೂಮರ್‌ ಕೋಶಗಳನ್ನು ವೈದ್ಯರಿಗೆ ಸ್ಪಷ್ಟವಾಗಿ ತೋರಿಸುತ್ತವೆ. ಕ್ವಾಂಟಮ್‌ ಡಾಟ್ಸ್‌ನಲ್ಲಿರುವ ಎಲೆಕ್ಟ್ರಾನ್‌ಗಳು ನಿರ್ಬಂಧಿತ ಚಲನೆಯನ್ನು ಹೊಂದಿದ್ದು, ಇದು ಅವುಗಳು ನಿರ್ದಿಷ್ಟ ಪ್ರಮಾಣದಲ್ಲಿ ಬೆಳಕನ್ನು ಹೀರಿಕೊಂಡು, ಅತ್ಯಂತ ಪ್ರಖರ ಬೆಳಕನ್ನು ಉತ್ಪಾದಿಸುತ್ತವೆ’ ಎಂದು ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ (Swedish Academy of Sciences) ಹೇಳಿದೆ.

ಪತಿ ರಿಷಿಗಾಗಿ ಮೊದಲ ಬಾರಿ ರಾಜಕೀಯ ವೇದಿಕೆ ಏರಿದ ಇನ್ಪಿ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ

80 ವರ್ಷದ ಬ್ರಸ್‌ ಹಾಗೂ 78 ವರ್ಷದ ಎಕಿಮೋವ್‌ ಕ್ವಾಂಟಮ್‌ ಡಾಟ್ಸ್‌ ತಂತ್ರಜ್ಞಾನದಲ್ಲಿ ಹೆಚ್ಚಿನ ಕೆಲಸ ಮಾಡಿದ್ದರೆ, 68 ವರ್ಷದ ಬವೆಂಡಿ ಇದರ ಬಳಕೆಯನ್ನು ಪ್ರಸ್ತುತವಾಗಿಸುವ ಕಾರ್ಯದಲ್ಲಿ ಹೆಚ್ಚಿನ ಕೆಲಸ ಮಾಡಿದ್ದಾರೆ.

ಪ್ರಣಯ ನಗರಿಗೆ ಹೊಸ ಹಾವಳಿ : ಮೆಟ್ರೋ ಏರ್‌ಪೋರ್ಟ್‌ ಹೊಟೇಲ್‌ ಥಿಯೇಟರ್ ಎಲ್ಲೆಂದರಲ್ಲಿ ತಿಗಣೆಗಳ ದರ್ಬಾರ್‌

ಮಾಹಿತಿ ಸೋರಿಕೆ:

ರಸಾಯನ ಶಾಸ್ತ್ರ ನೊಬೆಲ್‌ ಪ್ರಶಸ್ತಿ (Nobel Prize in Chemistry) ಘೊಷಣೆಯಾಗುವ ಮೊದಲೇ ಇದು ಸೋರಿಕೆಯಾಗಿದ್ದಲ್ಲೇ ಇದನ್ನು ಹಲವು ಪತ್ರಿಕೆಗಳು ವರದಿ ಮಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಗೊತ್ತಿರಲಿಲ್ಲ ಎಂದು ಬವೆಂಡಿ ಹೇಳಿದ್ದಾರೆ. ನೊಬೆಲ್‌ ಪ್ರಶಸ್ತಿಗೆ ಒಂದು ವರ್ಷ ಮೊದಲೇ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಅಲ್ಲದೇ ನಾಮ ನಿರ್ದೇಶನಗೊಂಡವರ ಹೆಸರನ್ನು 50 ವರ್ಷಗಳವರೆಗೆ ಗೌಪ್ಯವಾಗಿಡಲಾಗುತ್ತದೆ.

ತಾನೇ ಹೆಣೆದ ಬಲೆಗೆ ಬಿದ್ದ ಚೀನಾ ಸಬ್‌ಮರೀನ್‌: ಚೀನಾ ನೌಕಾಪಡೆಯ ಸಿಬ್ಬಂದಿ ಸೇರಿ 55 ಜನ ಬಲಿ

click me!