ಇನ್ನು ಕೆಲ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ ಕಾರಿನ ಗಾತ್ರದ ಉಪಗ್ರಹ; ಜನರ ಜೀವ, ಮೂಲಸೌಕರ್ಯಕ್ಕೂ ಅಪಾಯ!

By BK Ashwin  |  First Published Jul 15, 2023, 1:18 PM IST

ಸಣ್ಣ ಕಾರಿನ ಗಾತ್ರದಲ್ಲಿರುವ ಅಯೋಲಸ್ ವಾರಗಳಲ್ಲಿ ಭೂಮಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.


ನವದೆಹಲಿ (ಜುಲೈ 15, 2023): ನಿಷ್ಕ್ರಿಯಗೊಂಡ ಬಾಹ್ಯಾಕಾಶ ನೌಕೆಯಾದ ಸಣ್ಣ ಕಾರಿನ ಗಾತ್ರದಲ್ಲಿರುವ ಅಯೋಲಸ್ ವಾರಗಳಲ್ಲಿ ಭೂಮಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ತಿಳಿಸಿದೆ. 1.3 ಟನ್ ತೂಕದ ಅಯೋಲಸ್ ಉಪಗ್ರಹದ ಇಂಧನ ಖಾಲಿಯಾಗಿದ್ದು ಮತ್ತು ಅದು ಭೂಮಿಯ ಕಡೆಗೆ ಬೀಳುತ್ತಿದೆ ಎಂದು ಇಎಸ್‌ಎ ಎಚ್ಚರಿಕೆ ನೀಡಿದೆ. ದಿನಕ್ಕೆ 1 ಕಿ.ಮೀ. ನಷ್ಟು ವೇಗದಲ್ಲಿ ಬರುತ್ತಿದೆ ಎಂದೂ ತಿಳಿದುಬಂದಿದೆ.

ಹೆಚ್ಚಿನ ಅಯೋಲಸ್ ಉಪಗ್ರಹದ ಭಾಗಗಳು ವಾತಾವರಣದಲ್ಲಿ ಸುಟ್ಟುಹೋಗುತ್ತದೆ. ಆದರೆ ಕೆಲವು ಅವಶೇಷಗಳು ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಭೂಮಿಯ ಮೇಲ್ಮೈಯನ್ನು ತಲುಪಬಹುದು. ಈ ಉಪಗ್ರಹದ ಇಂಧನ ಖಾಲಿಯಾಗುತ್ತಿದೆ ಮತ್ತು ದಿನಕ್ಕೆ 1 ಕಿಮೀ ನಷ್ಟು ವೇಗದಲ್ಲಿ ಭೂಮಿಯ ಕಡೆಗೆ ಬೀಳುತ್ತಿದೆ ಎಂದೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳುತ್ತದೆ. 

Tap to resize

Latest Videos

undefined

ಇದನ್ನು ಓದಿ: ಇನ್ನು 2 ವರ್ಷದಲ್ಲಿ ಇಂಟರ್ನೆಟ್‌ ಅಂತ್ಯ, ಆರ್ಥಿಕತೆ ಮೇಲೆ ತೀವ್ರ ಪರಿಣಾಮ: ಇದರ ಹಿಂದಿದೆ ಅಚ್ಚರಿಯ ಕಾರಣ!

ಈ ಹಿನ್ನೆಲೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಬಾಹ್ಯಾಕಾಶ ನೌಕೆಯನ್ನು ಅದರ ಉಪಗ್ರಹದಲ್ಲಿ ಉಳಿದಿರುವ ಇಂಧನವನ್ನು ಬಳಸಿಕೊಂಡು ಅದನ್ನು ದೂರದ ಪ್ರದೇಶದ ಕಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದೆ ಎಂದೂ ವರದಿಯಾಗಿದೆ. ಹಾಗೆ, ಇಎಸ್‌ಎ ಇಂತಹ ಪ್ರಯತ್ನ ಮಾಡುತ್ತಿರುವುದು ಇದೇ ಮೊದಲು ಎಂದೂ ತಿಳಿದುಬಂದಿದೆ.

"ಈ ನೆರವಿನ ಮರು-ಪ್ರವೇಶದ ಪ್ರಯತ್ನವು 1990 ರ ದಶಕದ ಅಂತ್ಯದಲ್ಲಿ ಯೋಜಿಸಲ್ಪಟ್ಟ ಮತ್ತು ವಿನ್ಯಾಸಗೊಳಿಸಲಾದ ಮಿಷನ್‌ಗಾಗಿ ಸುರಕ್ಷತಾ ನಿಯಮಗಳನ್ನು ಮೀರಿ ಹೋಗುತ್ತದೆ. ಒಮ್ಮೆ ಇಎಸ್‌ಎ ಮತ್ತು ಕೈಗಾರಿಕಾ ಪಾಲುದಾರರು ಜೀವಕ್ಕೆ ಅಥವಾ ಮೂಲಸೌಕರ್ಯಕ್ಕೆ ಆಗಿರುವ ಕನಿಷ್ಠ ಅಪಾಯವನ್ನು ಮತ್ತಷ್ಟು ಕಡಿಮೆ ಮಾಡಲು ಸಾಧ್ಯ ಎಂದು ಕಂಡುಕೊಂಡ ನಂತರ, ಈ ಪ್ರಕ್ರಿಯೆ ಆರಂಭವಾಗಿದೆ” ಎಂದೂ ಇಎಸ್‌ಎಯ ಬಾಹ್ಯಾಕಾಶ ಅವಶೇಷಗಳ ಕಚೇರಿಯ ಮುಖ್ಯಸ್ಥ ಟಿಮ್ ಫ್ಲೋರೆರ್ ಹೇಳಿಕೆಯನ್ನು ಉಲ್ಲೇಖಿಸಿ ಸ್ಕೈ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: ಸತ್ತರೂ ಹೊತ್ತುಕೊಂಡು ರಕ್ಷಿಸಿದ್ದ ಮರಿ ಕೋತಿಯನ್ನೇ ತಿಂದ ಹೆತ್ತ ತಾಯಿ: ಕಾರಣ ಕಂಡುಕೊಂಡ ಸಂಶೋಧಕರೇ ಶಾಕ್‌!

ಉಪಗ್ರಹ ಅಯೋಲಸ್ 5 ವರ್ಷಗಳ ಕಾಲ 320 ಕಿಮೀ ಎತ್ತರದಲ್ಲಿ ಭೂಮಿಯ ಕಕ್ಷೆಯಲ್ಲಿ ಸುತ್ತಿದೆ. ಹವಾಮಾನ ಮುನ್ಸೂಚನೆಗಳನ್ನು ಸುಧಾರಿಸಲು ಅಯೋಲಸ್ ವಾತಾವರಣದಲ್ಲಿ ಗಾಳಿಯನ್ನು ಅಳೆಯುತ್ತಿತ್ತು ಎಂದೂ ಈ ವರದಿ ಹೇಳಿದೆ. ಆದರೂ, ಅದರ ಇಂಧನವು ಬಹುತೇಕ ಖರ್ಚಾಗಿದೆ ಮತ್ತು ಭೂಮಿಯ ಗುರುತ್ವಾಕರ್ಷಣೆ ಹಾಗೂ ಸೌರ ಚಟುವಟಿಕೆಯ ಕಾರಣದಿಂದಾಗಿ ಭೂಮಿಯ ವಾತಾವರಣವು ಬಾಹ್ಯಾಕಾಶ ನೌಕೆಯನ್ನು ಕೆಳಕ್ಕೆ ಎಳೆಯುತ್ತಿದೆ ಎಂದೂ ತಿಳಿದುಬಂದಿದೆ.

ಅಯೋಲಸ್ 280 ಕಿ.ಮೀ ಎತ್ತರವನ್ನು ತಲುಪಿದ ನಂತರ ಜರ್ಮನಿಯಲ್ಲಿನ ಮಿಷನ್ ಕಂಟ್ರೋಲ್ ಹಲವಾರು ದಿನಗಳವರೆಗೆ ಕುಶಲತೆಯ ಸರಣಿಯನ್ನು ಪ್ರಾರಂಭಿಸುತ್ತದೆ ಮತ್ತು ಅದನ್ನು 150 ಕಿಲೋಮೀಟರ್ ಕಡಿಮೆ ಕಕ್ಷೆಗೆ ಇಳಿಸುತ್ತದೆ. ಹಾಗೂ, ಈ ಉಪಗ್ರಹದ ಪಥದಲ್ಲಿ ಕೊನೆಯ ಕ್ಷಣಲ್ಲಿ ಬದಲಾವಣೆ ಮಾಡಿದ್ರೆ, ಭೂಮಿ ಮತ್ತು ವಸತಿ ಪ್ರದೇಶಗಳಿಂದ ದೂರವಿರುವ ಸಾಗರಕ್ಕೆ ಅಯೋಲಸ್‌ ಅನ್ನು ಧುಮುಕುವಂತೆ ಮಾಡುವುದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗೆ ದಾರಿ ಮಾಡಿಕೊಡುತ್ತದೆ ಎಂದೂ ಸ್ಕೈ ನ್ಯೂಸ್ ವರದಿ ಹೇಳಿದೆ.

ಇದನ್ನೂ ಓದಿ: ಇನ್ಮುಂದೆ ಡೇಟಾ ದುರ್ಬಳಕೆ ಮಾಡಿದ್ರೆ ಬರೋಬ್ಬರಿ 250 ಕೋಟಿ ರೂ. ದಂಡ: ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಆದರೆ, ಈ ಬಾಹ್ಯಾಕಾಶ ನೌಕೆ ಭೂಮಿಗೆ ಬೀಳುವ ನಿಖರವಾದ ಸಮಯವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದೂ ESA ಎಚ್ಚರಿಕೆ ನೀಡಿದೆ. 

ಇದನ್ನೂ ಓದಿ; ವಿಶ್ವದ ಉಗಮ ಅರಿಯಲು ಯುರೋಪ್‌ನ ಯೂಕ್ಲಿಡ್‌ ಟೆಲಿಸ್ಕೋಪ್‌ ಉಡಾವಣೆ

click me!