ರಾಖಿ ಸಾವಂತ್ ಪತಿ ಆದಿಲ್ ಖಾನ್ ವಿರುದ್ಧ ಅತ್ಯಾಚಾರ ಆರೋಪ; ಮೈಸೂರಿನಲ್ಲಿ FIR ದಾಖಲು

By Shruthi Krishna  |  First Published Feb 12, 2023, 3:58 PM IST

ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು ಅತ್ಯಾಚಾರ ಆರೋಪದಡಿ ಆದಿಲ್ ವಿರುದ್ಧ ಮೈಸೂರಿನಲ್ಲಿ FIR  ದಾಖಲಾಗಿದೆ.



ಬಾಲಿವುಡ್ ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದಂಪತಿಯ ವಿವಾಹ ರಂಪಾಟ ಇನ್ನೂ ಮುಗಿದಿಲ್ಲ. ದಿನಕ್ಕೊಂದು ಹೇಳಿಕೆ ನೀಡುತ್ತಾ ಆದಿಲ್ ವಿರುದ್ಧ ಕಿಡಿ ಕಾರುತ್ತಿದ್ದಾರೆ ರಾಖಿ ಸವಾಂತ್. ಅನೈತಿಕ ಸಂಬಂಧ, ಹಣ ಕದ್ದ ಆರೋಪ ಸೇರಿದಂತೆ ಆದಿಲ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿ ಜೈಲಿಗೂ ಕಳುಹಿಸಿದ್ದಾರೆ ರಾಖಿ. ಇದೀಗ ಆದಿಲ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು ಅತ್ಯಾಚಾರ ಆರೋಪದಡಿ ಆದಿಲ್ ವಿರುದ್ಧ ಮೈಸೂರಿನಲ್ಲಿ FIR ಕೂಡ ದಾಖಲಾಗಿದೆ.

ಇರಾನಿ ಮೂಲದ ಯುವತಿ ಆದಿಲ್ ಖಾನ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ದೂರು ನೀಡಿದ್ದಾರೆ. ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಾಖಿ ಸಾವಂತ್ ದಾಖಲಿಸಿರುವ ವಂಚನೆ ಪ್ರಕರಣದಲ್ಲಿ ಆದಿಲ್ ಈಗಾಗಲೇ ಜೈಲು ಸೇರಿದ್ದಾರೆ. ಸದ್ಯ ಆದಿಲ್ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಆದಿಲ್ ವಿರುದ್ಧ ದಾಖಲಾಗಿರುವುದು ಎರಡನೇ ಎಫ್‌ಐಆರ್ ಆಗಿದೆ.

Tap to resize

Latest Videos

undefined

ಖಾಸಗಿ ಫೋಟೋ ಕಳುಹಿಸಿ ಬ್ಲಾಕ್‌ಮೇಲ್ ಮಾಡ್ತಿದ್ದ

ಮೈಸೂರಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾಗ ಆದಿಲ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಎಫ್ ಐ ಆರ್‌ನಲ್ಲಿ ಆರೋಪಿಸಿದ್ದಾರೆ. ಐದು ತಿಂಗಳ ಹಿಂದೆ ಆತನನ್ನು ಮದುವೆಯಾಗುವಂತೆ ಬೇಡಿಕೆ ಇಟ್ಟೆ ಆದರೆ ಅದನ್ನು ತಿರಸ್ಕರಿಸಿದ. ಆತ ಅನೇಕ ಹುಡುಗಿಯರೊಂದಿಗೆ ಇದೇ ರೀತಿಯ ಸಂಬಂಧವನ್ನು ಹೊಂದಿದ್ದಾನೆ ಎಂದು ಇರಾನಿ ಮೂಲದ ಯುವತಿ ಆರೋಪ ಮಾಡಿದ್ದಾರೆ. ಅಷ್ಟೆಯಲ್ಲದೇ ಆಕೆಯ ಖಾಸಗಿ ಫೋಟೋಗಳನ್ನು ಕಳುಹಿಸಿ ಯಾವುದೇ ದೂರು ನೀಡದಂತೆ ಬೆದರಿಕೆ ಮತ್ತು ಬ್ಲಾಕ್ ಮೇಲ್ ಮಾಡಿದ್ದ ಎಂದು ಯುವತಿ ಹೇಳಿದ್ದಾರೆ. ಇದೀಗ ಐಪಿಸಿ ಸೆಕ್ಷನ್ 376, 417,420, 504 ಮತ್ತು 506 ಅಡಿಯಲ್ಲಿ ಆದಿಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಲವ್ ಜಿಹಾದ್‌ನಲ್ಲಿ ಸಿಲುಕಿಕೊಳ್ಳುವ ಹುಡುಗಿಯರಿಗೆ ದೊಡ್ಡ ಪಾಠವಿದು; ರಾಖಿ ಸಾವಂತ್ ಮಾಜಿ ಪತಿ ರಿತೇಶ್

ಆದಿಲ್ ವಿರುದ್ಧ ರಾಖಿ ಆರೋಪಗಳ ಸುರಿಮಳೆ

ಆದಿಲ್ ಮತ್ತು ರಾಖಿ ಸಾವಂತ್ ಇಬ್ಬರೂ ಒಂದು ವರ್ಷಗಳಿಂದ ಒಟ್ಟಿಗೆ ಕೈ ಕೈ ಹಿಡಿದು ಓಡಾಡುತ್ತಿದ್ದರು. ಸದಾ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗಷ್ಟೆ ಇಬ್ಬರೂ ಮದುವೆ ಆಗಿರುವುದಾಗಿ ಬಹಿರಂಗ ಪಡಿಸಿದರು. ಫೋಟೋಗಳನ್ನು ರಿವೀಲ್ ಮಾಡುವ ಮೂಲಕ ಮದುವೆಯಾಗಿರುವುದಾಗಿ ಹೇಳಿದರು. ಆದರೆ ಮದುವೆ ಅನೌನ್ಸ್ ಮಾಡಿ ಕೆಲವೇ ದಿನಕ್ಕೆ ರಾಕಿ ಸಾವಂತ್ ಪತಿ ವಿರುದ್ಧ ಆರೋಪಗಳ ಸುರಿಮಳೆಗೈದರು. ಆದಿಲ್ ಮೋಸ ಮಾಡಿದ ಎಂದು ಕಣ್ಣೀರು ಹಾಕುತ್ತಾ ಮಾಧ್ಯಮಕ ಮುಂದೆ ಹಾಜರಾದರು. 

ಹಣಕ್ಕಾಗಿ ರಾಖಿ ಸಾವಂತ್ ಬೆತ್ತಲೆ ಫೋಟೋ, ವಿಡಿಯೋ ಮಾರಾಟ; ಪತಿ ವಿರುದ್ಧ ಹೊಸ ಆರೋಪ?

ತನ್ನ ತಾಯಿ ಆಸ್ಪತ್ರೆಯಲ್ಲಿದ್ದಾಗ ಅವರನ್ನು ನೋಡಿಕೊಳ್ಳಲು ಆದಿಲ್‌ಗೆ ಹಣ ಕೊಟ್ಟಿದೆ ಆದರೆ ಆತ ಹಣ ಕದ್ದು ಹೋಗಿದ್ದಾನೆ, ತಾಯಿಯ ಚಿಕಿತ್ಸೆಗೆ ಸರಿಯಾಗಿ ಹಣ ನೀಡಿಲ್ಲ ಎಂದು ಹೇಳಿದರು. ಬಳಿಕ ಆದಿಲ್‌ಗೆ ಅನೈತಿಕ ಸಂಬಂಧವಿದೆ, ಆತ ಮತ್ತೋರ್ವ ಯುವತಿಯನ್ನು ಪ್ರೀತಿಸುತ್ತೀದ್ದಾನೆ, ಆಕೆಯ ಜೊತೆಯೇ ಇದ್ದಾನೆ ಅವರಿಬ್ಬರ ಹೋಟೆಲ್ ಬಿಲ್‌ಗಳು ತನ್ನ ಬಳಿ ಎಂದು ಹೇಳಿದ್ದರು. ಬಳಿಕ ತನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಸಾಲು ಸಾಲು ಆರೋಪಗಳನ್ನು ಮಾಡಿ ಬಳಿಕ ಪತಿ ವಿರುದ್ಧ ದೂರು ದಾಖಲಿಸಿದ್ದರು. ರಾಖಿ ಸಾವಂತ್ ದೂರಿನ ಮೇರೆಗೆ ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರ ಕಿತ್ತಾಟ ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ.   

click me!