ಸೂರ್ಯನಿಂದ ಬೇರ್ಪಟ್ಟ ಬೃಹತ್‌ ಭಾಗ..! ಖಗೋಳ ವಿಜ್ಞಾನಿಗಳಿಗೆ ತೀವ್ರ ಅಚ್ಚರಿ

By Kannadaprabha News  |  First Published Feb 11, 2023, 7:58 AM IST

ಸೂರ್ಯನಿಂದ ಬೃಹತ್‌ ಭಾಗ ಬೇರ್ಪಟ್ಟಿದ್ದು, ಖಗೋಳ ವಿಜ್ಞಾನಿಗಳಿಗೆ ತೀವ್ರ ಅಚ್ಚರಿಯಾಗಿದೆ. ಅಲ್ಲದೆ, ಉಪಗ್ರಹ ಸಂವಹನದ ಮೇಲೆ ಪರಿಣಾಮ ಬೀರಲಿದ್ಯಾ ಎಂಬ ಅನುಮಾನವೂ ಮೂಡಿದೆ. 


ನ್ಯೂಯಾರ್ಕ್ (ಫೆಬ್ರವರಿ 11, 2023): ಸೂರ್ಯನಿಂದ ಬೃಹತ್‌ ಭಾಗವೊಂದು ಬೇರ್ಪಟ್ಟಿದ್ದು, ಇದು ಸೂರ್ಯನ ಉತ್ತರ ಧ್ರುವದಲ್ಲಿ ಸುರುಳಿಯಾಕಾರದಲ್ಲಿ ಸುತ್ತತೊಡಗಿದೆ ಎಂಬುದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಪತ್ತೆಹಚ್ಚಿದೆ. ಇದು ಖಗೋಳ ವಿಜ್ಞಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಅಲ್ಲದೆ, ಇದರಿಂದ ಭೂಮಿಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಬಗ್ಗೆ ಅಧ್ಯಯನ ಆರಂಭವಾಗಿದೆ.

11 ವರ್ಷ ಹಿಂದೆ ಇಂಥ ವಿದ್ಯಮಾನ ನಡೆದಿದ್ದರೂ, ಈಗ ಹಿಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಬೃಹತ್‌ ಭಾಗ ಸೂರ್ಯನಿಂದ ಬೇರ್ಪಟ್ಟಿದೆ. ಜತೆಗೆ ಸೂರ್ಯನಿಂದ ಈವರೆಗೂ ಬಿಡುಗಡೆಯಾಗುತ್ತಿದ್ದ ಸೌರಜ್ವಾಲೆಗಳು ಭೂಮಿಯಲ್ಲಿನ ಸಂವಹನದ ಮೇಲೆ ಪರಿಣಾಮ ಬೀರುತ್ತಿದ್ದವು. ಆದರೆ ಈ ಸಲ ಬೇರ್ಪಟ್ಟಭಾಗದಿಂದ ಬೃಹತ್‌ ಸೌರಜ್ವಾಲೆಗಳು ಏಳುತ್ತಿವೆ. ಇದು ಉಪಗ್ರಹಗಳಿಂದ ಬರುವ ಸಂವಹನ ತರಂಗಗಳ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದೇ ಎಂಬುದರ ಕುರಿತಾಗಿ ಅಧ್ಯಯನಗಳು ನಡೆಯುತ್ತಿವೆ.

Tap to resize

Latest Videos

undefined

ಇದನ್ನು ಓದಿ: ಇಂಚಿಂಚೂ ಭೂಮಿ ಜಾಲಾಡುವ ‘ನಿಸಾರ್‌’ ಉಪಗ್ರಹ ಸಿದ್ಧ: ಇಸ್ರೋ ಸಾಧನೆ

ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಸೆರೆಹಿಡಿರುವ ಈ ವಿಡಿಯೋವನ್ನು ಹವಾಮಾನ ತಜ್ಞೆ ಡಾ.ತಮೀಹಾ ಸ್ಕೋವ್‌ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸೂರ್ಯನಿಂದ ಬೇರ್ಪಟ್ಟಿರುವ ಭಾಗವೊಂದು ಸೂರ್ಯನ ಉತ್ತರ ಧ್ರುವದಲ್ಲಿ ಸುರುಳಿಯಾಕಾರದಲ್ಲಿ ಸುತ್ತುತ್ತಿದೆ ಎಂದು ಹೇಳಿದ್ದಾರೆ.

ಪೋಲಾರ್ ವೋರ್ಟೆಕ್ಸ್ ಬಗ್ಗೆ ಮಾತನಾಡಿ! ಉತ್ತರದ ಪ್ರಾಮುಖ್ಯತೆಯ ವಸ್ತುವು ಮುಖ್ಯ ತಂತುಗಳಿಂದ ದೂರ ಸರಿದಿದೆ ಮತ್ತು ಈಗ ನಮ್ಮ ನಕ್ಷತ್ರದ ಉತ್ತರ ಧ್ರುವದ ಸುತ್ತಲೂ ಬೃಹತ್ ಧ್ರುವ ಸುಳಿಯಲ್ಲಿ ಪರಿಚಲನೆ ಮಾಡುತ್ತಿದೆ. ಇಲ್ಲಿ 55 ಡಿಗ್ರಿಗಿಂತ ಹೆಚ್ಚಿನ ಸೂರ್ಯನ ವಾತಾವರಣದ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು ಪರಿಣಾಮಗಳನ್ನು ಅತಿಯಾಗಿ ಹೇಳಲಾಗುವುದಿಲ್ಲ..! " ಎಂದು ಡಾ ಸ್ಕೋವ್ ಕಳೆದ ವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 1337 ವರ್ಷಗಳಲ್ಲೇ ಭೂಮಿಗೆ ಅತಿ ಸಮೀಪ ಬರಲಿರುವ ಚಂದ್ರ! ಇಂದೇ ಈ ಖಗೋಳ ಕೌತುಕ

Talk about Polar Vortex! Material from a northern prominence just broke away from the main filament & is now circulating in a massive polar vortex around the north pole of our Star. Implications for understanding the Sun's atmospheric dynamics above 55° here cannot be overstated! pic.twitter.com/1SKhunaXvP

— Dr. Tamitha Skov (@TamithaSkov)

ಈ ಹಿಂದೆ ಘಟಿಸಿದ್ದರೂ ಕುತೂಹಲ:
ಈ ರೀತಿಯ ಘಟನೆಗಳು ಈ ಹಿಂದೆಯೂ ಘಟಿಸಿದ್ದರೂ ಸಹ ಈ ಬಾರಿ ನಡೆದಿರುವ ಈ ಬೇರ್ಪಡುವಿಕೆ ವಿಜ್ಞಾನಿಗಳ ಕುತೂಹಲವನ್ನು ಹೆಚ್ಚಿಸಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ‘ಸೂರ್ಯನ ಆಂತರಿಕ ಚಲನೆಯಿಂದಾಗಿ ಉಂಟಾಗುವ ಗುರುತ್ವಾಕರ್ಷಣೆಯ ಬದಲಾವಣೆಯಿಂದ ಪ್ರತಿ 11 ವರ್ಷಗಳಿಗೆ ಸೂರ್ಯನ ಉತ್ತರ ಭಾಗದಲ್ಲಿ 55 ಡಿಗ್ರಿ ಅಕ್ಷಾಂಶ ಪ್ರದೇಶದಲ್ಲಿ ಈ ರೀತಿಯ ಸೌರಜ್ವಾಲೆಗಳು ಕಂಡುಬರುತ್ತವೆ. ಈ ಬಾರಿ ಅತಿ ದೊಡ್ಡ ಪ್ರಮಾಣದಲ್ಲಿ ಸೌರಜ್ವಾಲೆ ಚಾಚಿರುವುದು ಕುತೂಹಲ ಮೂಡಿಸಿದೆ’ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಹ್ಯಾಕಾಶ ವಿಜ್ಞಾನಿಗಳು ಈಗ ಈ ವಿಚಿತ್ರ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಮತ್ತು ಸ್ಪಷ್ಟವಾದ ಚಿತ್ರವನ್ನು ಪ್ರಸ್ತುತಪಡಿಸಲು ವಿಶ್ಲೇಷಿಸುತ್ತಿದ್ದಾರೆ. ನಮ್ಮ ನೆಚ್ಚಿನ ನಕ್ಷತ್ರವನ್ನು 24 / 7 ಮೇಲ್ವಿಚಾರಣೆ ಮಾಡಲಾಗಿದ್ದರೂ, ಈ ತಿಂಗಳು ಭೂಮಿಯ ಮೇಲಿನ ಸಂವಹನವನ್ನು ಅಡ್ಡಿಪಡಿಸಿದ ಅನೇಕ ಶಕ್ತಿಶಾಲಿ ಜ್ವಾಲೆಗಳಂತಹ ಆಶ್ಚರ್ಯಗಳನ್ನು ಅದು ನೀಡುತ್ತಲೇ ಇರುತ್ತದೆ.

Asianet News Dialogues: 'ಐನ್‌ಸ್ಟೈನ್‌ ಸಾಪೇಕ್ಷತಾ ಸಿದ್ಧಾಂತ ತಪ್ಪಾಗಿದೆ, ಅದನ್ನು ಸಂಪೂರ್ಣ ಬದಲಾಯಿಸಬೇಕು'

ಕಳಚಿದ ‘ತುಂಡು’
- ಸೂರ್ಯನ ಉತ್ತರ ಭಾಗದಲ್ಲಿ ಪ್ರತಿ 11 ವರ್ಷಕ್ಕೊಮ್ಮೆ ಏಳುವ ಸೌರಜ್ವಾಲೆ
- ಈ ಬಾರಿ ಹಿಂದೆಂದಿಗಿಂತ ತೀವ್ರ ಜ್ವಾಲೆ: ಬೇರ್ಪಟ್ಟ ಅತಿದೊಡ್ಡ ಸೌರಮಾರುತ
- ಇದರಿಂದ ಭೂಮಿಯ ಮೇಲೇನು ಪರಿಣಾಮ ಎಂಬುದು ಇನ್ನೂ ಸ್ಪಷ್ಟವಿಲ್ಲ
- ಸಾಮಾನ್ಯವಾಗಿ ಸೌರಜ್ವಾಲೆಗಳಿಂದ ಉಪಗ್ರಹ ಸಂವಹನದ ಮೇಲೆ ಪರಿಣಾಮ
- ಈ ಸಲ ಭಾರಿ ಜ್ವಾಲೆ ಬೇರ್ಪಟ್ಟಿರುವುದರಿಂದ ದುಷ್ಪರಿಣಾಮವಾಗುವ ಆತಂಕ

ಇದನ್ನೂ ಓದಿ: ಭಾರತದ ನಟ ದೇವ್‌ ಜೋಶಿ ಸೇರಿ 8 ಕಲಾವಿದರಿಗೆ ಉಚಿತ ಚಂದ್ರ ಪ್ರವಾಸ..!

click me!