ಭಾರತದ ಗಗನಯಾನಕ್ಕೆ ನಾಸಾ ಸಹಕಾರ: ಕ್ಯಾಥರಿನ್‌ ಲ್ಯೂಡರ್ಸ್‌

By Kannadaprabha NewsFirst Published Dec 14, 2022, 9:40 AM IST
Highlights

ಭಾರತದಲ್ಲಿ ಕೈಗೊಂಡಿರುವ ಗಗನಯಾನ ಮತ್ತು ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕಾಗಿ ಇಸ್ರೋ ಜತೆ ಡೇಟಾ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಮುಂದಾದ ನಾಸಾ 

ಬೆಂಗಳೂರು(ಡಿ.14):  ಮಾನವ ಸಹಿತ ಚಂದ್ರಯಾನಕ್ಕೆ ವಿವಿಧ ಹಂತಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಗಗನಯಾತ್ರಿಗಳ ಸಂಪರ್ಕಕ್ಕೆ 4ಜಿ ಮತ್ತು 5ಜಿ ತಂತ್ರಜ್ಞಾನ ಅಳವಡಿಸುವ ಕಾರ್ಯಗಳು ನಡೆಯುತ್ತಿವೆ ಎಂದು ನಾಸಾದ ಬಾಹ್ಯಾಕಾಶ ಕಾರ್ಯಾಚರಣೆ ನಿರ್ದೇಶನಾಲಯದ ಸಹಾಯಕ ನಿರ್ವಾಹಕಿ ಕ್ಯಾಥರಿನ್‌ ಲ್ಯೂಡರ್ಸ್‌ ತಿಳಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಂಗಳವಾರ ನಡೆದ ಮಾನವ ಬಾಹ್ಯಾಕಾಶ ಸಂಶೋಧನೆ ಕುರಿತ ವಿಚಾರ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಅರ್ಧದಶಕದ ಬಳಿಕ ಮತ್ತೆ ನಾಸಾ ಚಂದ್ರನ ಬಳಿಕ ಮನುಷ್ಯನ ಕಳುಹಿಸಲು ‘ಆರ್ಟೆಮಿಸ್‌ ಮೂನ್‌ ಮಿಷನ್‌’ ಯೋಜನೆ ರೂಪಿಸಿದೆ. ಸುಧಾರಿತ ತಂತ್ರಜ್ಞಾನಗಳಿದ್ದು, ಚಂದ್ರನ ಮೇಲ್ಮೆನ ಪರಿಣಾಮಕಾರಿಯಾಗಿ ಅಧ್ಯಯನ ಸಾಧ್ಯವಾಗಲಿದೆ. 1972ರ ಅಪೊಲೊ ಮಿಷನ್‌ಗಿಂತ ಆರ್ಟೆಮಿಸ್‌ ಮಿಷನ್‌ ಸಾಕಷ್ಟು ಭಿನ್ನವಾಗಿದೆ. ಒಟ್ಟು 3 ಹಂತಗಳಲ್ಲಿ ಚಂದ್ರನನ್ನು ಮಾನವ ಕಳಿಸಲಾಗುವುದು. ಮೊದಲು ಮಾನವ ಪ್ರತಿಕೃತಿಗಳನ್ನಷ್ಟೆಚಂದ್ರನಲ್ಲಿಗೆ ಕಳುಹಿಸಲಾಗುತ್ತಿದೆ, ನಂತರ ಮಾನವರು ಚಂದ್ರನ ಕಕ್ಷೆ ಸುತ್ತಲಿದ್ದು ಆ ಬಳಿಕ ಪರಿಣಾಮಗಳ ಅಧ್ಯಯನ ನಡೆಸಿ 2025ರಲ್ಲಿ ಮಾನವ ಸಹಿತ ಚಂದ್ರಯಾನ ಕೈಗೊಳ್ಳಲಾಗುತ್ತಿದೆ. ಗಗನಯಾತ್ರಿಗಳ ಸಂಪರ್ಕಕ್ಕೆ ನೆರವಾಗುವಂತೆ ಚಂದ್ರನಲ್ಲಿ 4ಜಿ ಮತ್ತು 5ಜಿ ನೆಟ್‌ವರ್ಕ್ ತಂತ್ರಜ್ಞಾನ ಅಳವಡಿಸುವ ಕಾರ್ಯ ಸಾಗಿದೆ ಎಂದರು.

Artemis mission: 50 ವರ್ಷ ಬಳಿಕ ಮತ್ತೆ ಚಂದ್ರಯಾನದ ಕನಸಿಗೆ ಅಮೆರಿಕದ ನಾಸಾ ಯಶಸ್ವಿ ಮುನ್ನುಡಿ

ಭಾರತದಲ್ಲಿ ಕೈಗೊಂಡಿರುವ ಗಗನಯಾನ ಮತ್ತು ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕಾಗಿ ಇಸ್ರೋ ಜತೆ ಡೇಟಾ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ನಾಸಾ ಮುಂದಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಎರಡು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಮುಂದಿನ ದ್ವೈವಾರ್ಷಿಕ ಸಭೆ ನಡೆಯಲಿದ್ದು, ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.
 

click me!