ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವಿನ ರಹಸ್ಯ ಬಹಿರಂಗ: ಭಾರತಕ್ಕೂ ಇದಕ್ಕೂ ಸಂಬಂಧ!

By BK Ashwin  |  First Published Jul 31, 2023, 2:26 PM IST

ಆಸ್ಟ್ರೇಲಿಯಾದ ಕಡಲತೀರದಲ್ಲಿ ಕೊಚ್ಚಿಹೋದ ನಿಗೂಢ ವಸ್ತುವಿನ ಮೂಲ ಬಹಿರಂಗವಾಗಿದ್ದು, ಇದು ಭಾರತೀಯ ರಾಕೆಟ್‌ವೊಂದರ ಅವಶೇಷ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


ಸಿಡ್ನಿ (ಜುಲೈ 31, 2023): ಆಸ್ಟ್ರೇಲಿಯಾದ ಕಡಲತೀರದಲ್ಲಿ ಕೊಚ್ಚಿಹೋದ ನಿಗೂಢ ವಸ್ತುವಿನ ಮೂಲ ಕೊನೆಗೂ ಬಹಿರಂಗಗೊಂಡಿದೆ. ಈ ನಿಗೂಢ ವಸ್ತು ಭಾರತದ ಚಂದ್ರಯಾನ - 3 ನ ಅವಶೇಷಗಳು ಎಂದು ನೆಟ್ಟಿಗರು ಚರ್ಚೆ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ನಿಗೂಢ ವಸ್ತು ಸಾಕ್ಟು ಸದ್ದು ಮಾಡಿತ್ತು. ಅಲ್ಲದೆ, ಈ ವಸ್ತುವು ಮಿಲಿಟರಿ ಮೂಲವನ್ನು ಹೊಂದಿರಬಹುದು ಅಥವಾ ಮಲೇಷ್ಯಾ ಏರ್‌ಲೈನ್ಸ್‌ ವಿಮಾನ MH370 ನ ಕಣ್ಮರೆಗೆ ಸಂಬಂಧಿಸಿರಬಹುದು ಎಂದು ನೆಟ್ಟಿಗರು ಊಹಿಸಿದ್ದರು.

ಆಸ್ಟ್ರೇಲಿಯಾದ ಕಡಲತೀರದಲ್ಲಿ ಕೊಚ್ಚಿಹೋದ ನಿಗೂಢ ವಸ್ತುವಿನ ಮೂಲ ಬಹಿರಂಗವಾಗಿದ್ದು, ಇದು ಭಾರತೀಯ ರಾಕೆಟ್‌ವೊಂದರ ಅವಶೇಷ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಬೃಹತ್ ಬಾರ್ನಾಕಲ್-ಎನ್‌ಕ್ರಸ್ಟೆಡ್ ಸಿಲಿಂಡರ್ ಅನ್ನು ಜುಲೈ ಮಧ್ಯ ಭಾಗದಲ್ಲಿ ದೂರದ ಜೂರಿಯನ್ ಬೇ ಬಳಿ ಮೊದಲು ಗುರುತಿಸಲಾಯಿತು. ಇದು ಪಶ್ಚಿಮ ಆಸ್ಟ್ರೇಲಿಯದ ಪರ್ತ್‌ನಿಂದ ಉತ್ತರಕ್ಕೆ 2 ಗಂಟೆಗಳ ಪ್ರಯಾಣದ ಕರಾವಳಿ ಪ್ರದೇಶವಾಗಿದೆ.

Tap to resize

Latest Videos

undefined

ಇದನ್ನು ಓದಿ: ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು ಪತ್ತೆ? ನಿಗೂಢ ವಸ್ತು ಬಗ್ಗೆ ನೆಟ್ಟಿಗರ ಚರ್ಚೆ

ಈ ನಿಗೂಢ ವಸ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ ಮೂರನೇ ಹಂತದ ಅವಶೇಷ ಆಗಿರಬಹುದು ಎಂದು ಆಸ್ಟ್ರೇಲಿಯ ಬಾಹ್ಯಾಕಾಶ ಸಂಸ್ಥೆ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಪಿಎಸ್‌ಎಲ್‌ವಿ ಉಡಾವಣಾ ವಾಹನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ವಹಿಸುತ್ತದೆ ಎಂದು ಆಸ್ಟ್ರೇಲಿಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಸುಮಾರು ಎರಡು ಮೀಟರ್ (ಆರು ಅಡಿ) ಎತ್ತರದ ಮತ್ತು ಮೇಲಿನಿಂದ ತೂಗಾಡುತ್ತಿರುವ ಕೇಬಲ್‌ಗಳನ್ನು ಹೊಂದಿರುವ ವಸ್ತುವನ್ನು ಶೇಖರಣೆಯಲ್ಲಿ ಇರಿಸಲಾಗಿದೆ.

ಈ ಮಧ್ಯೆ, ಎರಡೂ ದೇಶಗಳ ಅಧಿಕಾರಿಗಳು "ವಿಶ್ವಸಂಸ್ಥೆಯ ಬಾಹ್ಯಾಕಾಶ ಒಪ್ಪಂದಗಳ ಅಡಿಯಲ್ಲಿ ಬಾಧ್ಯತೆಗಳನ್ನು ಪರಿಗಣಿಸುವುದು ಸೇರಿದಂತೆ ಮುಂದಿನ ಹಂತಗಳನ್ನು ನಿರ್ಧರಿಸಲು ಹೆಚ್ಚಿನ ದೃಢೀಕರಣವನ್ನು ಒದಗಿಸಲು" ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಆಸ್ಟ್ರೇಲಿಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಇದನ್ನೂ ಓದಿ: Chandrayaan 3: ಇಸ್ರೋಗೆ ಮತ್ತಷ್ಟು ಯಶಸ್ಸು: ಐದನೇ ಭೂಕಕ್ಷೆ ಪೂರ್ಣ; ಚಂದ್ರನಿಗೆ ಮತ್ತಷ್ಟು ಹತ್ತಿರವಾಗ್ತಿದೆ ನೌಕೆ

ಆಸ್ಟ್ರೇಲಿಯಾದಲ್ಲಿ ಈ ರೀತಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಅವಶೇಷ, ಕಸ ಕಂಡುಬಂದಿರುವುದು ಇದು ಮೊದಲ ಬಾರಿಗೆ ಅಲ್ಲ. ಕಳೆದ ಆಗಸ್ಟ್‌ನಲ್ಲಿ, ನ್ಯೂ ಸೌತ್ ವೇಲ್ಸ್‌ನ ಕುರಿಗಾಯಿಯೊಬ್ಬರು ಎಲಾನ್‌ ಮಸ್ಕ್‌ನ ಸ್ಪೇಸ್‌ಎಕ್ಸ್ ಮಿಷನ್‌ಗಳಲ್ಲಿ ಒಂದರ ಸುಟ್ಟುಹೋದ ಭಾಗವನ್ನು ತನ್ನ ಗದ್ದೆಯಿಂದ ಹೊರಗೆ ಕಂಡುಕೊಂಡಿದ್ದರು.

ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಬೇ ಬಳಿಯ ಕಡಲತೀರದಲ್ಲಿ ಪತ್ತೆಯಾದ ನಿಗೂಢ ವಸ್ತುವು ಕುತೂಹಲವನ್ನು ಕೆರಳಿಸಿದೆ.ಇದು ಇಸ್ರೋ ಇತ್ತೀಚೆಗೆ ಉಡಾವಣೆ ಮಾಡಿದ ಚಂದ್ರಯಾನ-3 ಮಿಷನ್‌ನ ಭಾಗವಾಗಿರಬಹುದು ಎಂದು ಹಲವರು ಊಹಿಸಿದ್ದರು. ಆಸ್ಟ್ರೇಲಿಯ ಬಾಹ್ಯಾಕಾಶ ಸಂಸ್ಥೆ ಪ್ರಸ್ತುತ ಈ ವಸ್ತುವಿನ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಅದರ ಮೂಲವನ್ನು ನಿರ್ಧರಿಸಲು ಇತರೆ ದೇಶಗಳಿಂದ ಸಹಾಯ ಪಡೆಯುತ್ತಿದೆ. 

ಇದನ್ನೂ ಓದಿ: ಈರುಳ್ಳಿ ಬೇಗ ಕೊಳೆವುದನ್ನು ತಪ್ಪಿಸಲು ವಿಕಿರಣ ಚಿಕಿತ್ಸೆ; ಗಾಮಾ ಕಿರಣ ಹರಿಸಿ ಆಯಸ್ಸು ಹೆಚ್ಚಿಸಲು ಪ್ಲ್ಯಾನ್‌

"ನಾವು ಪ್ರಸ್ತುತ ಪಶ್ಚಿಮ ಆಸ್ಟ್ರೇಲಿಯದ ಜುರಿಯನ್ ಕೊಲ್ಲಿಯ ಸಮುದ್ರತೀರದಲ್ಲಿರುವ ಈ ವಸ್ತುವಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದೇವೆ. ವಸ್ತು ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನದಿಂದ ಬಂದಿರಬಹುದು ಮತ್ತು ಹೆಚ್ಚಿನ ಮಾಹಿತಿ ಒದಗಿಸಲು ಸಾಧ್ಯವಾಗುವ ಜಾಗತಿಕ ಇತರೆ ದೇಶಗಳೊಂದಿಗೆ ಹಾಗೂ ಸಂಸ್ಥೆಗಳೊಂದಿಗೆ ನಾವು ಸಂಪರ್ಕ ಹೊಂದಿದ್ದೇವೆ’’ ಎಂದು ಆಸ್ಟ್ರೇಲಿಯ ಬಾಹ್ಯಾಕಾಶ ಸಂಸ್ಥೆ ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ ವೈರಲ್‌ ಆಗ್ತಿದ್ದಂತೆ ಕುತೂಹಲಕಾರಿ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ನಾನಾ ವಿಚಾರಗಳಿಗೆ ಹೋಲಿಸಿದ್ದರು.

ಇದನ್ನೂ ಓದಿ: ಇನ್ನು ಕೆಲ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ ಕಾರಿನ ಗಾತ್ರದ ಉಪಗ್ರಹ; ಜನರ ಜೀವ, ಮೂಲಸೌಕರ್ಯಕ್ಕೂ ಅಪಾಯ!

click me!