ಚಂದ್ರಯಾನ-3ರ ಯಶಸ್ವಿ ಉಡಾವಣೆ ಬಳಿಕ ಇಸ್ರೋ ಹಾಗೂ ಭಾರತೀಯ ವಿಜ್ಞಾನಿಗಳು ಮತ್ತೊಂದು ಸಾಧನೆ ಮಾಡಿದ್ದಾರೆ. ಶ್ರೀಹಕರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಪಿಎಸ್‌ಎಲ್‌ಲಿ ರಾಕೆಟ್, ಸಿಂಗಾಪುರದ 7 ಸ್ಯಾಟಲೈಟ್ ಹೊತ್ತು ನಭಕ್ಕೆ ಹಾರಿದೆ.
ಶ್ರೀಹರಿಕೋಟಾ(ಜು.30) ಮಹತ್ವಾಕಾಂಕ್ಷಿ ಚಂದ್ರಯಾನ 3 ಯಶಸ್ವಿ ಉಡಾವಣೆ ಮಾಡಿರುವ ಇಸ್ರೋ ಇದೀಗ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಪ್ರಕ್ರಿಯೆ ಸಿದ್ದತೆಯಲ್ಲಿದೆ. ಇದರ ನಡುವೆ ಇಸ್ರೋ ವಿಜ್ಞಾನಿಗಳು ಮತ್ತೊಂದು ಸಾಧನೆ ಮಾಡಿದ್ದರೆ. ಇಸ್ರೋ ಹಾಗೂ ಸಿಂಗಾಪೂರ ಸರ್ಕಾರ ಜಂಟಿಯಾಗಿ ಅಭಿವೃದ್ದಿಪಡಿಸಿದ ಭೂಮಿ ಪರಿಶೀಲನಾ ಉಪಗ್ರಹ ಸೇರಿದಂತೆ 7 ಉಪಗ್ರಹಗಳನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಈ ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡಲಾಗಿದೆ.
ಸಿಂಗಾಪುರದ ಡಿಎಸ್-ಎಸ್‌ಎಆರ್ ಉಪಗ್ರಹ ಮತ್ತು ಇತರೆ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಉಪಗ್ರಹ ಉಡಾವಣೆಗೆ ಖಾಸಗಿಯವರಿಗೂ ಅವಕಾಶ ಒದಗಿಸುವ ಇಸ್ರೋದ ನ್ಯೂಸ್ಪೇಸ್ ಇಂಡಿಯಾ ಅಡಿಯಲ್ಲಿ ಉಡಾವಣೆ ಮಾಡಲಾಗಿದೆ. ಒಟ್ಟು 7 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ- ಸಿ56 ರಾಕೆಟ್ ಶ್ರೀಹರಿಕೋಟಾದ ಮೊದಲ ಲಾಂಚ್‌ಪ್ಯಾಡ್‌ನಿಂದ ಇಂದು ಬೆಳಗ್ಗೆ 6.30ಕ್ಕೆ ನಭಕ್ಕೆ ಹಾರಿದೆ. ಬಳಿಕ ಈ ಉಪಗ್ರಹಗಳನ್ನು ನಿಯರ್ ಈಕ್ವೆಟೋರಿಯಲ್ ಕಕ್ಷೆಯಲ್ಲಿ (ಭೂಮಿಯಿಂದ ಸುಮಾರು 535 ಕಿ.ಮೀ. ದೂರ) ಸ್ಥಾಪಿಸಲಾಗುತ್ತದೆ. ಡಿಎಸ್-ಎಸ್‌ಆರ್ ಉಪಗ್ರಹವನ್ನು ಎಸ್‌ಟಿ ಎಂಜಿನಿಯರಿಂಗ್ ಸಂಸ್ಥೆಯ ಜೊತೆ ಸೇರಿ ಸಿಂಗಾಪುರದ ಭದ್ರತಾ ಇಲಾಖೆ ನಿರ್ಮಾಣ ಮಾಡಿದ್ದು, ಇದು ಭದ್ರತೆ, ಲೊಕೇಶನ್ ಸೇರಿದಂತೆ ಹಲವು ಮಾಹಿತಿಯನ್ನು ಒದಗಿಸಲಿದೆ.
undefined
Chandrayaan 3: ಇಸ್ರೋಗೆ ಮತ್ತಷ್ಟು ಯಶಸ್ಸು: ಐದನೇ ಭೂಕಕ್ಷೆ ಪೂರ್ಣ; ಚಂದ್ರನಿಗೆ ಮತ್ತಷ್ಟು ಹತ್ತಿರವಾಗ್ತಿದೆ ನೌಕೆ
ಸಿಂಗಾಪುರದ 7 ಉಪಗ್ರಹಗಳನ್ನು ಯಶಸ್ವಿಯಾಗಿ ಇಸ್ರೋ ಉಡಾವಣೆ ಮಾಡಿದ ಬೆನ್ನಲ್ಲೇ ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನ್ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಭಾರತ ಹಾಗೂ ಸಿಂಗಾಪುರ ಜಂಟಿಯಾಗಿ ಅಭಿವೃದ್ಧಿಪಡಿಸಿದ ಉಪಗ್ರಹಗಳ ಉಡಾವಣೆಯನ್ನು ಇಸ್ರೋ ಮಾಡಿದೆ. ಈ ಮೂಲಕ ಭಾರತ ಹಾಗೂ ಸಿಂಗಾಪುರದ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದಿದೆ. ಭಾರತ ಹಾಗೂ ಸಿಂಗಾಪುರ ಬಾಹ್ಯಾಕಾಶ ಜಂಟಿ ಯೋಜನೆ ಇಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಿಂಗಾಪುರದಲ್ಲಿರುವ ಭಾರತದ ಹೈಕಮಿಷನ್ ಬಣ್ಣಿಸಿದೆ.
Lift-off images.
More in our Instagram account isro.dos pic.twitter.com/dAUmD8mNoN
ಈ ಉಡ್ಡಯನ ಇದೇ ತಿಂಗಳು ನಡೆಯುತ್ತಿರುವ ಇಸ್ರೋದ 2ನೇ ಉಡಾವಣೆಯಾಗಿದೆ. ಇದಕ್ಕೂ ಮೊದಲು ಜು.14ರಂದು ಚಂದ್ರಯಾನ-3 ನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.ಚಂದ್ರಯಾನ-3 ನೌಕೆ ಮುಂದಿನ ಹಂತದಲ್ಲಿ ಆ.1ರಂದು ಮಧ್ಯರಾತ್ರಿ 12 ಗಂಟೆಯಿಂದ 1 ಗಂಟೆಯ ಅವಧಿಯಲ್ಲಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಪ್ರಕ್ರಿಯೆ ನಡೆಸಲಾಗುವುದು. ಈ ಪ್ರಕ್ರಿಯೆ ಬಳಿಕ ನೌಕೆಯು ಭೂಮಿಯನ್ನು ಸುತ್ತುವರೆಯುವುದನ್ನು ಬಿಟ್ಟು, ಚಂದ್ರನ ಕಡೆಗೆ ಪ್ರಯಾಣ ಬೆಳೆಸಲಿದೆ. ಹೀಗೆ ಚಂದ್ರನ ಕಕ್ಷೆಯ ಸುತ್ತ ಕೆಲ ದಿನಗಳ ಕಾಲ ಸುತ್ತಲಿರುವ ನೌಕೆಯನ್ನು ಬಳಿಕ ಆ.23ರಂದು ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್‌್ಟಲ್ಯಾಂಡ್ ಮಾಡುವ ಗುರಿಯನ್ನು ಇಸ್ರೋ ಹಾಕಿಕೊಂಡಿದೆ.
Video: ಕಡುಕತ್ತಲ ದಾರಿಯಲ್ಲಿ ಚಂದ್ರನೂರಿಗೆ ಭಾರತದ ಯಾನ, ಟೆಲಿಸ್ಕೋಪ್‌ನಲ್ಲಿ ಸೆರೆಯಾಯ್ತು ಚಂದ್ರಯಾನ!
ಇದುವರೆಗೂ ವಿಶ್ವದ ಯಾವುದೇ ದೇಶ ಕೂಡಾ ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ತಮ್ಮ ನೌಕೆಯನ್ನು ಕಳುಹಿಸಿಲ್ಲ. ಹೀಗಾಗಿ ಭಾರತದ ಚಂದ್ರಯಾನ 3 ನೌಕೆಯ ಕುರಿತು ಜಾಗತಿಕ ಮಟ್ಟದಲ್ಲಿ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.