ಭೂ ವೀಕ್ಷಣಾ PSLV-C49 ಉಪಗ್ರಹ ಉಡಾವಣೆ ಯಶಸ್ವಿ; ಇಸ್ರೋ ಸಾಧನೆಗೆ ಮತ್ತೊಂದು ಗರಿ!

By Suvarna News  |  First Published Nov 7, 2020, 5:27 PM IST

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಇಸ್ರೋ  ಇದೀಗ ಮೊದಲ ಉಪಗ್ರಹ ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಭೂ ವೀಕ್ಷಣಾ PSLV-C49 ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.


ಶ್ರೀಹರಿಕೋಟ(ನ.07):  ಕೊರೋನಾ ಕಾರಣದಿಂದ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ISRO) ಕಾರ್ಯಚಟುವಟಿಕೆಗಳು ಕೆಲ ಕಾಲ ಸ್ಥಗಿತಗೊಂಡಿತ್ತು. ಆದರೆ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡ ಬಳಿಕ ISRO ಮತ್ತೆ ಮಿಂಚಿನ ವೇಗದಲ್ಲಿ ಕಾರ್ಯರಂಭ ಮಾಡಿದೆ. ಇದೀಗ ಕೊರೋನಾ ಹಾಗೂ ಲಾಕ್‌ಡೌನ್ ಸಂಕಷ್ಟದ ಬಳಿಕ ಇದೇ ಮೊದಲ ಬಾರಿಗೆ ಇಸ್ರೋ  PSLV-C49 ಉಪಗ್ರಹ ಉಡಾವಣೆ ಯಶಸ್ವಿಯಾಗಿ ಮಾಡಿದೆ.

 

lifts off successfully from Satish Dhawan Space Centre, Sriharikota pic.twitter.com/dWCBbKty8F

— ISRO (@isro)

Latest Videos

undefined

ಚಂದ್ರನ ಮೇಲೆ ಇಟ್ಟಿಗೆ ತಯಾರಿ: ಬೆಂಗಳೂರು ವಿಜ್ಞಾನಿಗಳ ಸಂಶೋಧನೆ!

ಭೂ ವೀಕ್ಷಣೆ ಉಪಗ್ರಹ EOS01 ಸೇರಿದಂತೆ 10 ಉಪಗ್ರಹಗಳನ್ನೊಳಗೊಂಡ   PSLV-C49 ಉಪಗ್ರಹ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಕಾಶ ಉಡಾವಣ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಲಾಯಿತು.

successfully separated from fourth stage of and injected into orbit pic.twitter.com/2u5jBPGNQD

— ISRO (@isro)

ಚಂದ್ರಯಾನ 2 : ಇಸ್ರೋ ಕಳಿಸಿದ್ದ ರೋವರ್ ಸುರಕ್ಷಿತ ರೀತಿಯಲ್ಲಿ ಪತ್ತೆ..!

PSLV-C49 ಉಪಗ್ರಹ ಉಡಾವಣೆಗೆ 26 ಗಂಟೆಗಳ ಕೌಂಟ್‌ಡೌನ್ ನೀಡಲಾಗಿತ್ತು. ಈ ಕೌಂಟ್‌ಡೌನ್ ಬಳಿಕ ಮಧ್ಯಾಹ್ನ 3.12ಕ್ಕೆ   PSLV-C49 ಉಪಗ್ರಹ ಹೊತ್ತ ರಾಕೆಟ್ ನಭೋಮಂಡಲಕ್ಕೆ ಹಾರಿತು. ಹವಾಮಾನ ವೈಪರಿತ್ಯದಿಂದ ಉಡಾವಣೆ 10 ನಿಮಿಷಗಳ ಕಾಲ ವಿಳಂವಾಗಿತ್ತು. 

3.12ಕ್ಕೆ ಉಡಾವಣೆಗೊಂಡ PSLV-C49 ಉಪಗ್ರಹ 3.34ಕ್ಕೆ ಕಸ್ಟಮರ್ ಸ್ಯಾಟಲೈಟ್ ಬೇರ್ಪಟ್ಟು, ನಿರ್ದೇಶಿತ ಕಕ್ಷೆಗಳಲ್ಲಿ ಸಂಚರಿಸಿತು. ಇನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(PSLV)ರಾಕೆಟ್‌ನಿಂದ EOS 01 ಉಪಗ್ರಹ ಬೇರ್ಪಟ್ಟು  ಕಕ್ಷೆಯತ್ತ ಸಂಚರಿಸಿದೆ.

ಇಸ್ರೋ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 

I congratulate and India's space industry for the successful launch of PSLV-C49/EOS-01 Mission today. In the time of COVID-19, our scientists overcame many constraints to meet the deadline.

— Narendra Modi (@narendramodi)
click me!