ಕ್ಷುದ್ರ ಗ್ರಹದ ಮೇಲೆ ಇಳಿದ ನಾಸಾ ನೌಕೆ, ಮಣ್ಣು ಸಂಗ್ರಹ!

By Suvarna News  |  First Published Oct 22, 2020, 3:12 PM IST

ಕ್ಷುದ್ರ ಗ್ರಹದ ಮೇಲೆ ಇಳಿದ ನಾಸಾ ನೌಕೆ, ಮಣ್ಣು ಸಂಗ್ರಹ| 4 ವರ್ಷಗಳ ಸುದೀರ್ಘ ಪ್ರಯಾಣ ಅಂತ್ಯ


ವಾಷಿಂಗ್ಟನ್(ಅ.22)‌: ನಾಸಾದ ಒಸಿರಿಸ್‌ ಆರ್‌ಇಕ್ಸ್‌ ನೌಕೆ 4 ವರ್ಷಗಳ ಸುದೀರ್ಘ ಪ್ರಯಾಣದ ಬಳಿಕ ಭೂಮಿಯಿಂದ ಸುಮಾರು 32.1 ಕೋಟಿ ಕಿ.ಮೀ. ದೂರದಲ್ಲಿರುವ ಬೆನ್ನು ಎಂಬ ಕ್ಷುದ್ರಗ್ರಹದ ಮೇಲೆ ಇಳಿಯುವಲ್ಲಿ ಯಶಸ್ವಿಯಾಗಿದೆ.

ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ನಾಸಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ನೌಕೆಯಲ್ಲಿ ಅಳವಡಿಸಿರುವ ರೋಬೋಟಿಕ್‌ ಕೈಗಳು ಕ್ಷುದ್ರಗ್ರಹದ ಧೂಳಿನ ಕಣಗಳನ್ನು ಸಂಗ್ರಹಿಸಿ 2023ರ ಸೆಪ್ಟೆಂಬರ್‌ ವೇಳೆಗೆ ಪುನಃ ಭೂಮಿಗೆ ಮರಳಲಿದೆ. ಈ ನೌಕೆಯನ್ನು ಫೆä್ಲೕರಿಡಾದ ಉಡಾವಣಾ ನೆಲೆಯಿಂದ 2016ರ ಸೆ.8ರಂದು ಉಡಾವಣೆ ಮಾಡಲಾಗಿತ್ತು.

Tap to resize

Latest Videos

undefined

ಸೌರ ಮಂಡಲ ವ್ಯವಸ್ಥೆ ರಚನೆ ಆದ ಮೊದಲ 1 ಕೋಟಿ ವರ್ಷದಲ್ಲಿ ಸೃಷ್ಟಿಯಾದ ಕ್ಷುದ್ರಗ್ರಹ ಇದಾಗಿದೆ. ಹೀಗಾಗಿ ಈ ಕ್ಷುದ್ರಗ್ರಹದ ಮಾದರಿಗಳು ಸೌರ ಮಂಡಲದ ರಚನೆಯ ಬಗ್ಗೆ ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದು ಭಾವಿಸಲಾಗಿದೆ.

ಈ ಆಕಾಶಕಾಯ 490 ಮೀಟರ್‌ ಸುತ್ತಳತೆಯನ್ನು ಹೊಂದಿದೆ. ಇದರಿಂದ ಸುಮಾರು 2 ಕೇಜಿಯಷ್ಟುಮಣ್ಣು ಹಾಗೂ ಧೂಳಿನ ಕಣಗಳನ್ನು ಸಂಗ್ರಹಿಸಿರುವ ಒಸಿರಿಸ್‌ ಆರ್‌ಇಕ್ಸ್‌ ನೌಕೆ ತನ್ನಲ್ಲಿರುವ ಇಂಧನವನ್ನು ದಹಿಸಿ ಭೂಮಿಯತ್ತ ಪ್ರಯಾಣ ಬೆಳೆಸಲಿದೆ.

click me!