
ಬೆಂಗಳೂರು (ಅ. 31): ಖಗೋಳ ಕೌತುಕಗಳಲ್ಲಿ ಒಂದಾದ ಬ್ಲ್ಯೂಮೂನ್ ಗೆ ಇಂದು ನಭೋಮಂಡಲ ಸಾಕ್ಷಿಯಾಗಲಿದೆ. ಇದು ಈ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆಯಾಗಿದೆ. ಅ.1ರಂದು ಮೊದಲ ಹುಣ್ಣಿಮೆ ಸಂಭವಿಸಿತ್ತು.
ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ (ಲೂನಾರ್ ಮಂಥ್) ನಡುವಿನ ಅವಧಿ 29 ದಿನ, 44 ನಿಮಿಷ 38 ಸೆಕೆಂಡ್ ಆಗಿರುತ್ತದೆ. ಇದರಲ್ಲಿ 30 ದಿನ ತುಂಬಲು ಬಾಕಿ ಉಳಿದ ಸಮಯ ಸೇರಿ ಸೇರಿ ಕೊನೆಗೊಂದು ತಿಂಗಳಲ್ಲಿ ಎರಡು ಹುಣ್ಣಿಮೆ ಸಂಭವಿಸುತ್ತದೆ. ಇದನ್ನೇ ಬ್ಲೂಮೂನ್ ಎನ್ನಲಾಗುತ್ತದೆ. ಅ.31ರಂದು ಸಂಭವಿಸುತ್ತಿರುವುದು ಇದೇ ಬ್ಲೂಮೂನ್. 31 ದಿನಗಳು ಇರುವ ತಿಂಗಳಲ್ಲಿ ಇಂಥ ಬ್ಲೂಮೂನ್ ಸಾಮಾನ್ಯ. ಆದರೆ 30 ದಿನಗಳು ಇರುವ ತಿಂಗಳಲ್ಲಿ ಬಲು ಅಪರೂಪ. ಈ ಬಗ್ಗೆ ವಿಜ್ಞಾನಿಗಳು, ಜ್ಯೋತಿಷಿಗಳು ಏನಂತಾರೆ? ಕೇಳೋಣ ಬನ್ನಿ..!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.