ಚಂದ್ರನ ಮೇಲೆ ಮೂಡಲಿದೆ ಭಾರತದ ಮುದ್ರೆ : ರೋವರ್‌ ಹೆಜ್ಜೆ ಇಟ್ಟಲೆಲ್ಲಾ ಅಶೋಕ ಚಕ್ರ ಸಿಂಹದ ಮುಖ, ಇಸ್ರೋ ಗುರುತು

By Kannadaprabha News  |  First Published Jul 16, 2023, 7:07 AM IST

ಚಂದ್ರನ ಮೇಲೆ ರೋವರ್‌ ಇಳಿದು 100 ಮೀಟರ್‌ ಸಂಚರಿಸಲಿದೆ. ಆಗ ಅದರ ಚಕ್ರಗಳು ತಿರುಗಲಿವೆ. ಆ ಚಕ್ರಗಳು ಚಂದ್ರನ ನೆಲದ ಮೇಲೆ ಭಾರತದ ರಾಷ್ಟ್ರೀಯ ಲಾಂಛನ ಹಾಗೂ ಇಸ್ರೋದ ಅಧಿಕೃತ ಚಿಹ್ನೆಯನ್ನು ಮೂಡಿಸುತ್ತಾ ಹೋಗಲಿವೆ. ಇಲ್ಲಿರುವುದು ಇಸ್ರೋ ಬಿಡುಗಡೆ ಮಾಡಿರುವ ಎನಿಮೇಷನ್‌ ಚಿತ್ರ.


ನವದೆಹಲಿ: ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವ ಸಾಹಸಕ್ಕೆ ಹೈಹಾಕಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಇದರ ಜೊತೆಜೊತೆಗೆ ಚಂದ್ರನ ಮೇಲೆ ಭಾರತದ ಮತ್ತು ತನ್ನ ಲಾಂಛನವನ್ನೂ ಅಚ್ಚೊತ್ತುವ ಕೆಲಸಕ್ಕೂ ಮುನ್ನುಡಿ ಬರೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಆ.23ರಂದು ಚಂದ್ರನ ಮೇಲೆ ಪ್ರಗ್ಯಾನ್‌ ಲ್ಯಾಂಡರ್‌ (Pragyan Lander) ಇಳಿಯಲಿದೆ. ಅದರಿಂದ ಹೊರಬರಲಿರುವ ರೋವರ್‌, ತಾನು ಸಾಗಿದ ಹಾದಿಯಲ್ಲೆಲ್ಲಾ ಇಸ್ರೋದ ಲಾಂಛನ ಮತ್ತು ಅಶೋಕ ಚಕ್ರ (Ashoka Chakra), ಸಿಂಹದ ಮುಖಗಳನ್ನು ಒಳಗೊಂಡ ಭಾರತದ ರಾಷ್ಟ್ರೀಯ ಲಾಂಛನದ ಚಿತ್ರವನ್ನು ಮುದ್ರಿಸಲಿದೆ. ರೋವರ್‌ನ ಹಿಂದಿನ ಚಕ್ರದ ಮೇಲೆ ಈ ಲಾಂಛನಗಳ ಮಾದರಿಯನ್ನು ಮುದ್ರಿಸಲಾಗಿದ್ದು, ರೋವರ್‌ ಮುಂದೆ ಸಾಗಿದಂತೆಲ್ಲಾ ಇಸ್ರೋ ಮತ್ತು ದೇಶದ ಲಾಂಛನವು ನೆಲದ ಮೇಲೆ ಮುದ್ರಣಗೊಳ್ಳುತ್ತಾ ಹೋಗಲಿದೆ.

ಈ ರೋವರ್‌ ಚಂದ್ರನ ದಕ್ಷಿಣ ಧ್ರುವ (South pole of the moon) ಪ್ರದೇಶದಲ್ಲಿ ಸುಮಾರು 100 ಮೀ. ಸಾಗಲಿದ್ದು, ಅಷ್ಟು ದೂರದಲ್ಲೂ ರೋವರ್‌ನ ಹಿಂದಿನ ಚಕ್ರಗಳು ಈ ಗುರುತುಗಳನ್ನು ಮೂಡಿಸಲಿದೆ. ಈ ದೃಶ್ಯಗಳನ್ನು ರೋವರ್‌ನಲ್ಲಿ ಇರುವ ಕ್ಯಾಮೆರಾಗಳು ಸೆರೆಹಿಡಿದು ಭೂಮಿಗೆ ಕಳುಹಿಸಲಿವೆ ಎನ್ನಲಾಗಿದೆ. ಪ್ರಗ್ಯಾನ್‌ ಲ್ಯಾಂಡರ್‌ ಮತ್ತು ಅದರೊಳಗೆ ಇರುವ ರೋವರ್‌ ಕುರಿತು ಇತ್ತೀಚೆಗೆ ವಿಡಿಯೋ ಮೂಲಕ ಇಸ್ರೋ ಮಾಹಿತಿ ಹಂಚಿಕೊಂಡಿತ್ತು. ಅದರೊಳಗೆ ಕಾಣುವ ರೋವರ್‌ ತಾನು ಸಾಗಿದ ಹಾದಿಯಲ್ಲೆಲ್ಲಾ ಇಸ್ರೋ ಮತ್ತು ಭಾರತದ ಲಾಂಛನವನ್ನು ಅಚ್ಚೊತ್ತುವ ಮಾಹಿತಿ ಇದೆ.

Tap to resize

Latest Videos

undefined

ಭಾರತದ ಭರವಸೆ-ಕನಸುಗಳನ್ನು ಹೊತ್ತ ಚಂದ್ರಯಾನ-3 ನೌಕೆ ಯಶಸ್ವಿ ಉಡಾವಣೆ!

ಚಂದ್ರನ ಮೇಲೆ ಲ್ಯಾಂಡ್‌ ಆಗಲು ಇನ್ನೂ 40 ದಿನ ಬೇಕು: ಆ.23ಕ್ಕೆ ಸಂಕೀರ್ಣ ಸವಾಲ್‌

click me!