ಇಂದು 21840 ಕಿಮೀ ವೇಗದಲ್ಲಿ ಭೂಮಿಯತ್ತ ನುಗ್ಗಿ ಬರಲಿದೆ ಬೃಹತ್ ಗಾತ್ರದ ಕ್ಷುದ್ರಗ್ರಹ

By Anusha Kb  |  First Published Aug 5, 2024, 12:18 PM IST

ಭಾರಿ ಗಾತ್ರದ ಕ್ಷುದ್ರಗ್ರಹವೊಂದು ಇಂದು 21840 ಕಿಲೋ ಮೀಟರ್ ವೇಗದಲ್ಲಿ ಭೂಮಿಯತ್ತ ನುಗ್ಗುತ್ತಿದೆ ಎಂದು ನಾಸಾ ಹೇಳಿದೆ 2024ರ ಆಗಸ್ಟ್ 5 ಅಂದರೆ ಇಂದು ಈ 99 ಅಡಿಯ ಕ್ಷುದ್ರಗ್ರಹವೂ ಭೂಮಿಯತ್ತ ಅಪ್ಪಳಿಸಿ ಬರುತ್ತಿದೆ


ನ್ಯೂಯಾರ್ಕ್‌: ಭಾರಿ ಗಾತ್ರದ ಕ್ಷುದ್ರಗ್ರಹವೊಂದು ಇಂದು 21840 ಕಿಲೋ ಮೀಟರ್ ವೇಗದಲ್ಲಿ ಭೂಮಿಯತ್ತ ನುಗ್ಗುತ್ತಿದೆ ಎಂದು ನಾಸಾ ಹೇಳಿದೆ 2024ರ ಆಗಸ್ಟ್ 5 ಅಂದರೆ ಇಂದು ಈ 99 ಅಡಿಯ ಕ್ಷುದ್ರಗ್ರಹವೂ ಭೂಮಿಯತ್ತ ಅಪ್ಪಳಿಸಿ ಬರುತ್ತಿದೆ ಅದು 21840 ಕಿಲೋ ಮೀಟರ್ ವೇಗದಲ್ಲಿ ಇದು ಭೂಮಿಯತ್ತ ಬರುತ್ತಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

ಕೇವಲ ಒಂದು ದಿನದ ಹಿಂದಷ್ಟೇ 400 ಅಡಿಯ ಕ್ಷುದ್ರ ಗ್ರಹವು ಭೂಮಿಗೆ ಅಪ್ಪಳಿಸುವುದು ಸ್ವಲ್ಪದರಲ್ಲೇ ತಪ್ಪಿತ್ತು. ಇದಾದ ಮರುದಿನವೇ ಅಂದರೆ ಇಂದು ಇನ್ನೊಂದು ಕ್ಷುದ್ರ ಗ್ರಹ ಭೂಮಿಯತ್ತ ಧಾವಿಸುತ್ತಿದೆ. ಇಂದು,ನಾಸಾ ಈ 99 ಅಡಿ ಕ್ಷುದ್ರಗ್ರಹದ ಬಗ್ಗೆ ಎಚ್ಚರಿಕೆ ನೀಡಿದೆ. ಇದು ಭೂಮಿಗೆ ಅತ್ಯಂತ ಹತ್ತಿರದಲ್ಲಿದೆ ಎಂದು ನಾಸಾ ಹೇಳಿದೆ. 

Tap to resize

Latest Videos

undefined

ಬಾಹ್ಯಾಕಾಶ ಯಾನಕ್ಕೆ ಇಬ್ಬರ ಹೆಸರು ಖಚಿತ ಪಡಿಸಿದ ಇಸ್ರೋ, ಒಪ್ಪಂದಕ್ಕೆ ಸಹಿ ಹಾಕಿದ ಅಮೆರಿಕದ ಕಂಪೆನಿ

ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿರುವ ನಾಸಾವೂ ಭೂಮಿಯ ಸಮೀಪ ಬರುವ ಎಲ್ಲಾ ವಸ್ತುಗಳ ಮೇಲೆ ನಿಗಾ ಇಡುತ್ತದೆ ಮತ್ತು ಅವುಗಳ ಸಾಮೀಪ್ಯ, ವೇಗ, ಅವು ಅಪಾಯಕಾರಿಯೇ ಅಥವಾ ಅಲ್ಲವೇ ಎಂಬ ಬಗ್ಗೆ ವಿವಿಧ ವಿವರಗಳನ್ನು ನೀಡುತ್ತದೆ. ಅದೇ ರೀತಿ ನಾಸಾ ಈ 99 ಅಡಿಯ ಕ್ಷುದ್ರಗ್ರಹಕ್ಕೆ ಕ್ಷುದ್ರಗ್ರಹ 2023 ಹೆಚ್‌ಬಿಎ ಎಂದು ಹೆಸರಿಟ್ಟಿದೆ. ಮತ್ತು ಇದು ಭೂಮಿಯ ಸಮೀಪ 3,490,000 ಮೈಲುಗಳಷ್ಟು ಸಮೀಪದಲ್ಲಿ ಸಾಗಲಿದ್ದು, ಇದು ಭೂಮಿಗೆ ಬಹಳ ಹತ್ತಿರ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಈ ಕ್ಷುದ್ರಗ್ರಹದ ಬಗ್ಗೆ ಇತರ ವಿವರಗಳನ್ನು ನಾಸಾ ಹಂಚಿಕೊಂಡಿದ್ದು, ಈ ಕ್ಷುದ್ರಗ್ರಹವು ಅಟೆನ್ ಕ್ಷುದ್ರಗ್ರಹಗಳ ಗುಂಪಿಗೆ ಸೇರಿದೆ ಮತ್ತು ಇದನ್ನು ಭೂಮಿಯ ಸಮೀಪವಿರುವ ವಸ್ತು (NEO)ಎಂದು ವಿಭಾಗಿಸಲಾಗಿದೆ. ಆದರೆ ಇದು ಅಪಾಯಕಾರಿ ಕ್ಷುದ್ರಗ್ರಹ (PHA)ಅಲ್ಲಇದು ಪ್ರಸ್ತುತ ಇರುವ ಕಕ್ಷೆಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು 3,490,000  ದೂರದಲ್ಲಿ ಭೂಮಿಯ ಸಮೀಪದಲ್ಲಿ ಸಾಗುತ್ತದೆ. 

ಚಂದ್ರನಲ್ಲಿ ಬೃಹತ್ ಆಕಾರದ ಗುಹೆ ಪತ್ತೆ, ಮನುಷ್ಯರ ವಾಸಕ್ಕೆ ಈ ಜಾಗ ಬೆಸ್ಟ್ ಅಂತೆ!

ಈ ಕ್ಷುದ್ರಗ್ರಹದ ವೇಗವು ನಿಜವಾಗಿಯೂ ಅಚ್ಚರಿ ಹುಟ್ಟಿಸುತ್ತದೆ. ಇದು ಕೇವಲ ಸೆಕೆಂಡಿಗೆ 6.07 ಕಿಮೀ ವೇಗದಲ್ಲಿ ಚಲಿಸುತ್ತದೆ ಹಾಗೆಯೇ ಗಂಟೆಗೆ 21840 ಕಿಮೀ ವೇಗದಲ್ಲಿ ಚಲಿಸುತ್ತದೆ. ನಾಸಾ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಜುಲೈ, 2025 ರಲ್ಲಿ ಮತ್ತೆ ಭೂಮಿಯತ್ತ ಬರಲಿದ್ದು, ಆ ಸಮಯದಲ್ಲಿ ಅದು ಮತ್ತಷ್ಟು ವೇಗವಾಗಿ ಚಲಿಸಲಿದೆ, ಆ ಸಮಯದಲ್ಲಿ ಅದರ ವೇಗ 67866 ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಈಗಿನ ವೇಗಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು.

click me!