Moon Mystery: ದಿನಕ್ಕೆ 24 ಅಲ್ಲ 25 ಗಂಟೆ.. ಭೂಮಿನಿಂದ ಇನ್ನಷ್ಟು ದೂರ ಹೋಗ್ತಾನೆ ಚಂದ್ರ!

By Santosh Naik  |  First Published Aug 3, 2024, 9:40 PM IST


ವರ್ಷಕ್ಕೆ ಸರಿಸುಮಾರು 3.8 ಸೆಂಟಿಮೀಟರ್‌ಗಳಷ್ಟು ದರದಲ್ಲಿ ಚಂದ್ರನು ಭೂಮಿಯಿಂದ ಹಿಂದೆ ಸರಿಯುತ್ತಿದ್ದಾನೆ ಎಂದು ಅಧ್ಯಯನವು ತಿಳಿಸಿದೆ. ಇದು ಭೂಮಿನ ಮೇಲೆ ಒಂದು ದಿನದ ಗಂಟೆಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.


ಭೂಮಿಯ ಮೇಲೆ ಅದೆಷ್ಟು ಶತಮಾನಗಳು ಕಳೆದವೋ ಗೊತ್ತಿಲ್ಲ. ಅದೆಷ್ಟು ಜನಾಂಗ, ಅದೆಷ್ಟು ಪರಂಪರೆ, ಅದೆಷ್ಟು ನೀರು ಹರಿದವೋ ಗೊತ್ತಿಲ್ಲ. ಇಂದಿಗೂ ಭೂಮಿಯನ್ನು ಒಂದೇ ತೆರನಾಗಿ ನೋಡುತ್ತಿರುವ ಒಬ್ಬನೇ ಒಬ್ಬ ಎಂದರೆ ಅದು ಚಂದ್ರ. ಕಲಾವಿದರು, ಕವಿಗಳಿಗೆ ಸ್ಫೂರ್ತಿಯಾಗಿದ್ದು ಮಾತ್ರವಲ್ಲ,  ಕೊನೆಗೆ ಮಕ್ಕಳಿಗೆ ಊಟ ಮಾಡಿಸುವಾಗ ತಾಯಂದಿರರಿಗೆ ಸಹಾಯ ಮಾಡಿದವ ಚಂದ್ರ. ಬೆಳದಿಂಗಳ ಬೆಳಕಿನಲ್ಲಿ ಊರುಕೇರಿ ಸುತ್ತಾಡಿದ ನೆನಪು, ಸೇತುವೆಯ ಮೇಲೆ ನಿಂತು ಊರಕೆರೆಯಲ್ಲಿ ಚಂದ್ರನ ಪ್ರತಿಬಿಂಬ ನೋಡಿದಾಗ ಆಗುವ ಖುಷಿಯೇ ಬೇರೆ. ಭೂಮಿಗೆ ಹಾಗೂ ಭೂಚರಗಳಿಗೆ ಇಷ್ಟು ಆಪ್ತನಾಗಿರುವ ಚಂದ್ರನ ಬಗ್ಗೆ ಕುತೂಹಲದ ಅಂಶವೊಂದು ಬೆಂಕಿಗೆ ಬಂದಿದೆ. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಬಂಡೆಯ ಮೇಲೆ ಮಾಡಿರುವ ಅಧ್ಯಯನದಿಂದ ಭವಿಷ್ಯದ ದಿನಗಳಲ್ಲಿ ಭೂಮಿಯಿಂದ ಚಂದ್ರ ದೂರ ಸಾಗುತ್ತಲೇ ಹೋಗುವ ಅಪಾಯವಿದೆ ಎಂದು ಹೇಳಿದೆ.

ವರ್ಷಕ್ಕೆ ಸರಿಸುಮಾರು 3.8 ಸೆಂಟಿಮೀಟರ್‌ಗಳಷ್ಟು ದರದಲ್ಲಿ ಚಂದ್ರನು ಭೂಮಿಯಿಂದ ದೂರ ಹೋಗುತ್ತಿದ್ದಾನೆ ಎಂದು ಅಧ್ಯಯನ ಹೇಳಿದೆ. ಇದರಿಂದ ಆಗುವ ಪರಿಣಾಮ ಏನೆಂದರೆ, ಭೂಮಿಯಲ್ಲಿ ಇರುವ ಒಂದು ದಿನದ ಸಮಯದಲ್ಲಿ ಇದು ಬದಲಾವಣೆ ಆಗುತ್ತದೆ. ವರ್ಷದಿಂದ ವರ್ಷಕ್ಕೆ ಭೂಮಿಯಲ್ಲಿ ಒಂದು ದಿನದ ಅವಧಿ ವಿಸ್ತರಣೆ ಆಗುತ್ತಲೇ ಇದೆ. ಅಂತಿಮವಾಗಿ 200 ದಶಲಕ್ಷ ವರ್ಷಗಳ ಬಳಿಕ ಭೂಮಿಯ ಒಂದು ದಿನದ ಅವಧಿ 24 ಗಂಟೆಗಳ ಬದಲಾಗಿ 25 ಗಂಟೆ ಆಗುತ್ತದೆ. ನಿಮಗೆ ನೆನಪಿರಲಿ, 1.4 ಶತಕೋಟಿ ವರ್ಷಗಳ ಹಿಂದೆ, ಭೂಮಿಯ ಮೇಲೆ ಒಂದು ದಿನ ಕೇವಲ 18 ಗಂಟೆಗಳ ಕಾಲ ಇತ್ತು ಎಂದು ಅಧ್ಯಯನವು ಹೇಳಿದೆ.

Tap to resize

Latest Videos

undefined

Best Distillery in the World ಪ್ರಶಸ್ತಿ ಗೆದ್ದ ಭಾರತದ ಅಮೃತ್‌ ವಿಸ್ಕಿ!

ಈ ವಿದ್ಯಮಾನವು ಪ್ರಾಥಮಿಕವಾಗಿ ಭೂಮಿ ಮತ್ತು ಚಂದ್ರನ ನಡುವಿನ ಗುರುತ್ವಾಕರ್ಷಣೆಯ ಪರಸ್ಪರ ಕ್ರಿಯೆಗಳಿಗೆ ಕಾರಣವಾಗಿದೆ, ನಿರ್ದಿಷ್ಟವಾಗಿ ಎರಡೂ ಗ್ರಹಗಳಿಂದ ಉಂಟಾಗುವ ಉಬ್ಬರವಿಳಿತದ ಶಕ್ತಿಗಳಿಂದ ಇದು ಉಂಟಾಗಲಿದೆ. "ಚಂದ್ರನು ದೂರ ಸರಿಯುತ್ತಿದ್ದಂತೆ, ಭೂಮಿಯು ತಿರುಗುವ ಫಿಗರ್ ಸ್ಕೇಟರ್‌ನಂತಿದೆ, ಅವರು ತಮ್ಮ ತೋಳುಗಳನ್ನು ಚಾಚಿದಂತೆ ನಿಧಾನಗೊಳಿಸುತ್ತದೆ" ಎಂದು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಭೂವಿಜ್ಞಾನದ ಪ್ರಾಧ್ಯಾಪಕ ಸ್ಟೀಫನ್ ಮೇಯರ್ಸ್ ಹೇಳಿದರು.

ಅಮವಾಸ್ಯೆ ದಿನ ಸೆಕ್ಸ್‌ ಮಾಡಬಾರದಂತೆ! ಹೀಗ್ಯಾಕಂತಾರೆ?

click me!