ಬಾಹ್ಯಾಕಾಶ ಯಾನಕ್ಕೆ ಇಬ್ಬರ ಹೆಸರು ಖಚಿತ ಪಡಿಸಿದ ಇಸ್ರೋ, ಒಪ್ಪಂದಕ್ಕೆ ಸಹಿ ಹಾಕಿದ ಅಮೆರಿಕದ ಕಂಪೆನಿ

By Gowthami K  |  First Published Aug 3, 2024, 10:12 AM IST

 ನಾಸಾದ ಸಹಯೋಗದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಇಬ್ಬರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಇಸ್ರೋ  ಬಹಿರಂಗಪಡಿಸಿದೆ.


ನವದೆಹಲಿ (ಆ.3): ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಸಹಯೋಗದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಇಬ್ಬರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಇಸ್ರೋ ಶುಕ್ರವಾರ ಬಹಿರಂಗಪಡಿಸಿದೆ.

ಈ ವರ್ಷಾಂತ್ಯದಲ್ಲಿ ನಡೆಯಲಿದೆ ಎನ್ನಲಾಗಿರುವ ಪ್ರವಾಸ ಸಂಬಂಧ ಇಸ್ರೋ ಮತ್ತು ಅಮೆರಿಕದ ಆ್ಯಕ್ಸಿಯೋಂ ಸ್ಪೇಸ್‌ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಅನ್ವಯ ಆ್ಯಕ್ಸಿಯೋಂ ಸ್ಪೇಸ್ ಕಂಪನಿ ‘ಆ್ಯಕ್ಸಿಯೋಂ-4’ ಮಿಷನ್‌ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲಿದೆ.

Latest Videos

undefined

ವಯನಾಡು ದುರಂತದಲ್ಲಿ ನಲುಗಿದ ಕುಟುಂಬಕ್ಕೆ ರಾತ್ರಿ ಇಡೀ ಆಶ್ರಯ ನೀಡಿ ಕಾಪಾಡಿದ ಕಾಡಾನೆ!

ಇದರಲ್ಲಿ ಭಾಗಿಯಾಗಲು ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಆಯ್ಕೆಯಾಗಿದ್ದಾರೆ. ಒಂದು ವೇಳೆ ಅವರು ಯಾವುದೇ ಕಾರಣಕ್ಕೆ ತೆರಳಲು ಸಾಧ್ಯವಾಗದೇ ಇದ್ದಲ್ಲಿ ಗ್ರೂಪ್‌ ಕ್ಯಾಪ್ಟನ್‌ ಪ್ರಶಾಂತ್‌ ನಾಯರ್‌ ತೆರಳಲಿದ್ದಾರೆ. 

ಈ ಇಬ್ಬರಿಗೂ ಇದೇ ತಿಂಗಳಿನಿಂದ ಅಮೆರಿಕದಲ್ಲಿ ವಿವಿಧ ರೀತಿಯ ತರಬೇತಿ ನಡೆಯಲಿದೆ. ಐಎಸ್‌ಎಸ್‌ಗೆ ತೆರಳಿದ ಬಳಿಕ ಇವರು ವೈಜ್ಞಾನಿಕ ಸಂಶೋಧನೆ, ಪ್ರಯೋಗಗಳನ್ನು ನಡೆಸಲಿದ್ದಾರೆ ಎಂದು ಇಸ್ರೋ ಪ್ರಕಟಣೆ ಹೇಳಿದೆ.ಕಳೆದ ಫೆಬ್ರುವರಿ ತಿಂಗಳಲ್ಲಿ ಭಾರತದ ಮಾನವ ಸಹಿತ ಗಗನಯಾನಕ್ಕೆ ಆಯ್ಕೆಯಾಗಿದ್ದ ನಾಲ್ವರ ಹೆಸರನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿತ್ತು. ಇವರಲ್ಲಿ ಶುಭಾಂಶು ಶುಕ್ಲಾ, ಪ್ರಶಾಂತ್‌ ನಾಯರ್‌, ಅಂಗದ್‌ ಪ್ರತಾಪ್‌, ಅಜಿತ್‌ ಕೃಷ್ಣನ್‌ ಸೇರಿದ್ದರು. ಇವರಿಗೆ ಈಗಾಗಲೇ ರಷ್ಯಾದಲ್ಲಿ ಬಾಹ್ಯಾಕಾಶ ಯಾನಕ್ಕೆ ಅಗತ್ಯವಾದ ತರಬೇತಿ ನೀಡಲಾಗಿದೆ.

ಬ್ಲೂಮ್‌ಬರ್ಗ್ ವರದಿ: ಏಷ್ಯಾದ ಶ್ರೀಮಂತ ಎಂಬ ಅಂಬಾನಿ ಸ್ಥಾನ ಡೇಂಜರ್‌ ನಲ್ಲಿದೆ, ಆರ್ಥಿಕ ಕುಸಿತದತ್ತ ಮುಕೇಶ್!

ಭಾರತದ ಗಗನಯಾತ್ರಿ ನಾಸಾ ಸಿಬ್ಬಂದಿ ಜೊತೆ ಬಾಹ್ಯಾಕಾಶ ಕೇಂದ್ರಕ್ಕೆ
ಗಗನಯಾನ ಮಿಷನ್‌ ಭಾಗವಾಗಿರುವ ನಾಲ್ವರಲ್ಲಿ ಒಬ್ಬ ಗಗನಯಾತ್ರಿ ನಾಸಾದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಕಳೆದವಾರ ಮಾಹಿತಿ ನೀಡಿದ್ದರು. ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನಯಾನ ಮಿಷನ್‌ಗೆ ಭಾರತದ ಗಗನಯಾತ್ರಿಗಳ ಆಯ್ಕೆ ಮಂಡಳಿ ವಾಯು ಸೇನೆಯ ನಾಲ್ಕು ಗಗನಯಾತ್ರಿಗಳನ್ನು ಆರಿಸಿಕೊಂಡಿದೆ. ರಷ್ಯಾದಲ್ಲಿ ತರಬೇತಿ ಪಡೆದ ಅವರು ಪ್ರಸ್ತುತ ಬೆಂಗಳೂರಿನ ಇಸ್ರೋದ ಗಗನಯಾತ್ರಿಗಳ ತರಬೇತಿ ಸೌಲಭ್ಯ(ಎಟಿಎಪ್‌)ದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

click me!