ಸತ್ತರೂ ಹೊತ್ತುಕೊಂಡು ರಕ್ಷಿಸಿದ್ದ ಮರಿ ಕೋತಿಯನ್ನೇ ತಿಂದ ಹೆತ್ತ ತಾಯಿ: ಕಾರಣ ಕಂಡುಕೊಂಡ ಸಂಶೋಧಕರೇ ಶಾಕ್‌!

By BK Ashwin  |  First Published Jul 11, 2023, 5:26 PM IST

ಸತ್ತ ಬಳಿಕವೂ ಇತರರ ಕಣ್ಣಿಗೆ ಬೀಳದಂತೆ ರಕ್ಷಿಸಿದ್ದ ತಾಯಿ ಕೋತಿ ತನ್ನ ಮರಿ ಕೋತಿಯನ್ನೇ ತಿಂದು ಹಾಕಿದೆ. ಇದರಿಂದ ಭವಿಷ್ಯದಲ್ಲಿ ಮತ್ತೊಂದು ಮಗು ಹೊಂದುವ ಸಾಧ್ಯತೆ ಹೆಚ್ಚಾಗಬಹುದು ಎಂದು ಲೈವ್ ಸೈನ್ಸ್ ವರದಿಯಲ್ಲಿ ತಿಳಿಸಿದೆ. 


ಜೆಕ್‌ ಗಣರಾಜ್ಯ (ಜುಲೈ 11, 2023): ತಾಯಿ ಮಕ್ಕಳು ಎಷ್ಟೇ ದೊಡ್ಡವರಾದ್ರೂ ಸರಿ ಅವರನ್ನು ಚಿಕ್ಕವರೆಂದೇ ನೋಡಿಕೊಳ್ಳುತ್ತಾರೆ ಹಾಗೂ ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಇದು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಕಂಡುಬರುತ್ತದೆ. ಅದೇ ರೀತಿ, ಜೆಕ್ ಗಣರಾಜ್ಯದ ಮೃಗಾಲಯದಲ್ಲಿ ಕೋತಿಯೊಂದು ತನ್ನ ಪುಟ್ಟ ಕೋತಿ ಮೃತಪಟ್ಟರೂ ಸರಿ ಅದನ್ನು 2 ದಿನಗಳ ಕಾಲ ಹೊತ್ತೊಯ್ದಿತ್ತು. ಇದು ಸಾಮಾನ್ಯವೇ ಎನ್ನಬಹುದು. ಆದರೆ, ನಂತರ ನಡೆದಿದ್ದು ಮಾತ್ರ ಅಚ್ಚರಿ.

ಅಂದರೆ, ಸತ್ತ ಬಳಿಕವೂ ಇತರರ ಕಣ್ಣಿಗೆ ಬೀಳದಂತೆ ರಕ್ಷಿಸಿದ್ದ ತಾಯಿ ಕೋತಿ ತನ್ನ ಮರಿ ಕೋತಿಯನ್ನೇ ತಿಂದು ಹಾಕಿದೆ. ಹೌದು, ಇದನ್ನು ನೀವು ನಂಬ್ಲೇಬೇಕು. ಜೆಕ್‌ ಗಣರಾಜ್ಯದ ಡ್ವೂರ್ ಕ್ರಾಲೋವ್ ಸಫಾರಿ ಪಾರ್ಕ್‌ನಲ್ಲಿ ಈ ವಿಲಕ್ಷಣ ಘಟನೆ ವರದಿಯಾಗಿದೆ. ಆದರೆ, ತಾಯಿಯ ಈ ಅಸಾಮಾನ್ಯ ಕ್ರಿಯೆಯಿಂದ ಭವಿಷ್ಯದಲ್ಲಿ ಮತ್ತೊಂದು ಮಗು ಹೊಂದುವ ಸಾಧ್ಯತೆ ಹೆಚ್ಚಾಗಬಹುದು ಎಂದು ಲೈವ್ ಸೈನ್ಸ್ ವರದಿಯಲ್ಲಿ ತಿಳಿಸಿದೆ. 

Tap to resize

Latest Videos

undefined

ಇದನ್ನು ಓದಿ: ಇನ್ಮುಂದೆ ಡೇಟಾ ದುರ್ಬಳಕೆ ಮಾಡಿದ್ರೆ ಬರೋಬ್ಬರಿ 250 ಕೋಟಿ ರೂ. ದಂಡ: ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಮ್ಯಾಂಡ್ರಿಲಸ್ ಲ್ಯುಕೋಫೇಯಸ್‌ ಎಂಬ ಜಾತಿಯ ಕುಮಾಸಿ ಎಂಬ ಹೆಣ್ಣು ಮಂಗವು ಆಗಸ್ಟ್ 2020 ರಲ್ಲಿ ಜನ್ಮ ನೀಡಿತ್ತು. ಆದರೆ ಎಂಟು ದಿನಗಳ ನಂತರ ಮಗು ಮೃತಪಟ್ಟಿತು ಎಂದೂ 
ಲೈವ್ ಸೈನ್ಸ್ ವರದಿ ತಿಳಿಸಿದೆ. ಈ ಮಗು ಹುಟ್ಟಿದಾಗ ಆರೋಗ್ಯವಾಗೇ ಇದ್ದರೂ 8 ದಿನದಲ್ಲಿ ಸತ್ತಿದ್ದೇಗೆ ಎಂಬುದನ್ನು ಸಹ ನಿರ್ಧರಿಸಲಾಗಿಲ್ಲ ಎಂದೂ ವರದಿಯಾಗಿದೆ. 

ಮಗು ಸತ್ತರೂ ಕುಮಾಸಿ ಎರಡು ದಿನಗಳ ಕಾಲ ಮೃತ ದೇಹವನ್ನು ಹೊತ್ತೊಯ್ದಿತ್ತು ಮತ್ತು ಅದನ್ನು ಝೂ ಆವರಣದಿಂದ ತೆಗೆಯಲು ಪ್ರಯತ್ನಿಸಿದ ಸಿಬ್ಬಂದಿಯನ್ನೂ ತಡೆಯಿತು. ಅಲ್ಲದೆ, ಕೆಲವು ಸಸ್ತನಿಗಳು ಕೆಲವೊಮ್ಮೆ ಪ್ರದರ್ಶಿಸುವ ವಿಶಿಷ್ಟ ನಡವಳಿಕೆಯಾದ ಮಗುವಿನ ನೋಟವನ್ನು ಸೆರೆಹಿಡಿಯಲು ಪ್ರಯತ್ನಿಸಿತು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ; ವಿಶ್ವದ ಉಗಮ ಅರಿಯಲು ಯುರೋಪ್‌ನ ಯೂಕ್ಲಿಡ್‌ ಟೆಲಿಸ್ಕೋಪ್‌ ಉಡಾವಣೆ

ಆದರೂ, ಕುಮಾಸಿ ತನ್ನ ಸತ್ತ ಮಗುವನ್ನು ತಿನ್ನಲು ಪ್ರಾರಂಭಿಸಿದಾಗ ಈ ಎಲ್ಲ ವಿಚಾರಗಳು ವಿಲಕ್ಷಣವಾದ ತಿರುವು ಪಡೆದುಕೊಂಡಿದೆ. ದೇಹವನ್ನು ಅಂತಿಮವಾಗಿ ಹೊರತೆಗೆಯುವ ಮೊದಲು ತಾಯಿ ಕೋತಿ ಮಗುವಿನ ಹೆಚ್ಚಿನ ಅವಶೇಷಗಳನ್ನು ತಿಂದಿತ್ತು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಬೇರೆ ಯಾವುದೇ ಮಂಗವು ಆ ಅವಶೇಷಗಳನ್ನು ತಿನ್ನುವುದನ್ನು ನೋಡಲಿಲ್ಲ ಎಂದೂ ಕಾವಲುಗಾರರು ಹೇಳಿಕೊಂಡಿದ್ದಾರೆ.

ಪ್ರೈಮೇಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಕುಮಾಸಿಯ ಆಘಾತಕಾರಿ ನಡವಳಿಕೆಯ ವಿಡಿಯೋವನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಇಂತಹ ನಿದರ್ಶನಗಳು ಸಾಮಾನ್ಯವಾಗಿ ವರದಿಯಾಗುವುದಿಲ್ಲ. "ವೈಜ್ಞಾನಿಕ ಸಾಹಿತ್ಯದಲ್ಲಿ, ನೀವು ಉಪಾಖ್ಯಾನ ವರದಿಗಳನ್ನು ಮಾತ್ರ ಕಾಣಬಹುದು" ಎಂದು ಅಧ್ಯಯನದ ಸಹ-ಲೇಖಕ ಎಲಿಸಬೆಟ್ಟ ಪಳಗಿ ಲೈವ್ ಸೈನ್ಸ್‌ಗೆ ತಿಳಿಸಿದರು.

ಇದನ್ನೂ ಓದಿ: ಭೂಮಿಯಡಿ ಎವರೆಸ್ಟ್‌ಗಿಂತ 4 ಪಟ್ಟು ಎತ್ತರದ ಪರ್ವತ ಪತ್ತೆ: ಅಂಟಾರ್ಟಿಕಾದ ಆಳದಲ್ಲಿ ಭಾರಿ ಗಾತ್ರದ ಪರ್ವತಗಳು

ಶಿಶು ನರಭಕ್ಷಕತೆಯು ಮಾನವನ ದೃಷ್ಟಿಕೋನದಿಂದ ಭಯಾನಕ ಕ್ರಿಯೆಯಾಗಿದೆ. ಆದರೆ ಸಂಶೋಧಕರು ಈ ಬಗ್ಗೆ ವಿವರಣೆ ನೀಡಿದ್ದು, "ನಾವು ಪ್ರೈಮೇಟ್ ತಾಯಂದಿರ ನಂಬಲಾಗದ ಸಂತಾನೋತ್ಪತ್ತಿ ಶಕ್ತಿಯ ಹೂಡಿಕೆಯನ್ನು ಪರಿಗಣಿಸಿದರೆ, ನರಭಕ್ಷಕತೆಯನ್ನು ಹೊಂದಾಣಿಕೆಯ ವಿಕಸನೀಯ ಲಕ್ಷಣವೆಂದು ಪರಿಗಣಿಸಬಹುದು. ಇದು ಗರ್ಭಾವಸ್ಥೆಯ ನಂತರ ಶಕ್ತಿಯನ್ನು ಚೇತರಿಸಿಕೊಳ್ಳಲು ತಾಯಿಗೆ ಸಹಾಯ ಮಾಡುತ್ತದೆ" ಎಂದು ಎಲಿಸಬೆಟ್ಟ ಪಳಗಿ ಹೇಳಿದರು. ಹಾಗೆ, ಇದರಿಂದ ಭವಿಷ್ಯದಲ್ಲಿ ಆಕೆಯ ಸಂತಾನೋತ್ಪತ್ತಿ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸಬಹುದು ಎಂದೂ ಅವರು ಹೇಳಿದರು.

"ತಾಯಿಯು ಇತರ ಗುಂಪಿನ ಸದಸ್ಯರೊಂದಿಗೆ ಮೃತದೇಹವನ್ನು ಹಂಚಿಕೊಳ್ಳದಿರುವುದು ನರಭಕ್ಷಕತೆಯ ಪೌಷ್ಟಿಕಾಂಶದ ಪ್ರಯೋಜನದ ಊಹೆಯನ್ನು ಬೆಂಬಲಿಸುತ್ತದೆ. ಏಕೆಂದರೆ ಇತರ ಕೋತಿಗಳಿಗೆ ಹೆಚ್ಚುವರಿ ಪೋಷಕಾಂಶಗಳ ಅಗತ್ಯವಿರಲಿಲ್ಲ’’ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಮಾನವನ ಮೆದುಳಿಗೆ ಚಿಪ್‌ ಜೋಡಿಸಿ ಪ್ರಯೋಗ: ಎಲಾನ್‌ ಮಸ್ಕ್‌ ಕಂಪನಿಗೆ ಅಮೆರಿಕ ಅಸ್ತು

ಝೂನಲ್ಲಿರುವ ಕೋತಿಗಳ ಗುಂಪಿನಲ್ಲಿ ಶಿಶುವೊಂದರ ಮರಣೋತ್ತರ ಪರೀಕ್ಷೆ ಮತ್ತು ನರಭಕ್ಷಕತೆಯ ಮೊದಲ ವರದಿ ಇದು ಎಂದು ನ್ಯೂಸ್‌ವೀಕ್ ವರದಿ ಮಾಡಿದೆ. 

ಇದನ್ನೂ ಓದಿ: ಇನ್ನು 20 ವರ್ಷದಲ್ಲಿ ಜಗತ್ತಲ್ಲಿ ನಕ್ಷತ್ರಗಳೇ ಕಾಣಲ್ಲ! ಕಾರಣ ಹೀಗಿದೆ..

click me!