ಇಸ್ರೋ ಚಂದ್ರನ ಚುಂಬನದಲ್ಲಿ ಕಲಬುರಗಿ ಪಿಡಿಎ ಜಾಣರು..!

By Kannadaprabha News  |  First Published Sep 5, 2023, 11:30 PM IST

ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್‌ (ಪಿಡಿಎ) ಕಾಲೇಜಿನ ನಾಲ್ವರು ಪ್ರತಿಭೆಗಳು ಚಂದ್ರಯಾನದಲ್ಲಿ ಮಹತ್ವದ ಭೂಮಿಕೆ, ಪಿಡಿಎ ಇಂಜಿನಿಯರಿಂಗ್‌ ಕಾಲೇಜಿಗೆ ಇದು ಬಹಳ ಹೆಮ್ಮೆಯ ಸಂಗತಿ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಮೀಸೆ ಬಣ್ಣನೆ


ಶೇಷಮೂರ್ತಿ ಅವಧಾನಿ

ಕಲಬುರಗಿ(ಸೆ.05):  ಇಡೀ ಜಗತ್ತೇ ಕೌಟುಕದಿಂದ ನೋಡಿದ ಇಸ್ರೋ ವಿಜ್ಞಾನಿಗಳು- ತಂತ್ರಜ್ಞರ ತಂಡದ ಯಶಸ್ವಿ ಚಂದ್ರಯಾನದಲ್ಲಿ ಬಿಸಿಲೂರು ಕಲಬುರಗಿಯ ಪ್ರತಿಷ್ಠಿತ ದೊಡ್ಡಪ್ಪ ಅಪ್ಪ (ಪಿಡಿಎ) ಇಂಜಿನಿಯರಿಂಗ್‌ ಕಾಲೇಜಿನ ನಾಲ್ವರು ಪ್ರತಿಭೆಗಳ ಪರಿಶ್ರಮ ಅಡಗಿರೋದು ತುಸು ತಡವಾಗಿ ಬೆಳಕಿಗೆ ಬಂದಿದೆ.

Tap to resize

Latest Videos

undefined

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯ ಯೋಜಿತ ಚಂದ್ರಯಾನ-೩ ಯಶಸ್ಸಿನಲ್ಲಿ ನಾವೇನ್‌ ಕಮ್ಮಿ? ನಾವೂ ಯಶಸ್ವಿ ಯಾನದಲ್ಲಿದ್ದೇವೆಂದು ಇಲ್ಲಿನ ಪ್ರತಿಷ್ಠಿತ ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನ ಇಲೆಕ್ಟ್ರಾನಿಕ್ಸ್‌ ಹಾಗೂ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ನಾಲ್ವರು ಪ್ರತಿಭೆಗಳು ಯಶಸ್ವಿ ವೈಜ್ಞಾನಿಕರ ತಂಡದಲ್ಲಿ ತಮ್ಮನ್ನು ತೊಡಗಿಸಿಕೊಂಡು ಟಂದ್ರ ಚುಂಬನ ಯಶಸ್ಸಿನಿಂದ ಬಿಗುತ್ತಿದ್ದಾರೆ.

ನಿದ್ದೆಗೆ ಜಾರುವ ಮುನ್ನ ಚಂದ್ರನ 3D ಫೋಟೋ ರವಾನೆ, ಚಿತ್ರ ವೀಕ್ಷಣೆಗೆ ಇಸ್ರೋ ಸೂಚನೆ ಪ್ರಕಟ!

ಸಂಯೋಜಿತ ಘಟಕ, ಸಿಲಿಂಡರ್ ಆಕಾರದ ಆರ್ಬಿಟರ್, ಅದರ ಮೇಲೆ ವಿಕ್ರಮ್ ಲ್ಯಾಂಡರ್ , ಒಳಗಡೆ ಪ್ರಗ್ಯಾನ್‌ ರೋವರ್‌ ಹೊತ್ತು ಆ. 23 ರಂದು ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿ, ಚಂದ್ರನ ದಕ್ಷಿಣ ಧ್ರುವದಲ್ಲಿ‌ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊಟ್ಟಮೊದಲ ದೇಶವಾಗಿ ಭಾರತ ಹೊರಹೊಮ್ಮಿರೋದ್ರಲ್ಲಿ ಇಸ್ರೋ ಚಂದ್ರಯಾನ ತಂಡದೊಂದಿಗೆ ಇದ್ದು ಹಗಲು ರಾತ್ರಿ ಕೆಲಸ ಮಾಡಿದ ಕಲಬುರಗಿಯ ನಾಲ್ವರು ತಂತ್ರಜ್ಞರ ಪರಿಶ್ರಮ ಇಡೀ ಕಲಬುರಗಿ ಹೆಮ್ಮೆ ಪಡುವಂತೆ ಮಾಡಿದೆ.

ಹೈಕಶಿ ಸಂಸ್ಥೆಯಡಿಯಲ್ಲಿರುವ ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಓದಿ ಇಲ್ಲಿಂದಲೇ ಪದವೀಧರರಾದ 1995ರ ಬ್ಯಾಚಿನ ಜಯಕುಮಾರ್‌, ವಿಜಯಶ್ರೀ, ವಿನಯ ಹಾಗೂ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಉಪನ್ಯಾಸಕಿಯಾಗಿದ್ದ ಜಗದೇವಿ ಪಾಟೀಲ್‌ ಪ್ರಸ್ತುತ ಇಸ್ರೋ ತಂಡದಲ್ಲಿದ್ದವರು.

ಇಸ್ರೋ ಇಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿದ್ದುಕೊಂಡು ತಮ್ಮ ಯೋಗದಾನ ನೀಡುತ್ತಿರುವ ಇವರು ಚಂದ್ರಯಾನ ಮಿಷನ್‌ ಜೊತೆಗೆ ತಮ್ಮನ್ನು ತೊಡಗಿಸಿಕೊಂಡು ಇದೀಗ ಗಮನ ಸೆಳೆದದ್ದಾರೆ. ಇವರೆಲ್ಲರೂ ಮೂಲತಃ ಕಲಬುರಗಿಯವರು ಹಾಗೂ ಇಲ್ಲಿನ ಇಂಜಿನಿಯರಿಂಗ್‌ ಕಾಲೇಜಿನಲ್ಲಿಯೇ ಓದಿ ಯಶಸ್ವಿ ಮಹಾಯಾನದಲ್ಲಿ ತಮ್ಮ ಕೊಡುಗೆ ಕೊಟ್ಟವರು ಎಂಬುದು ಕಲಬುರಗಿ ಪಾಲಿಗೆ ಹೆಮ್ಮೆಯ ಸಂಗತಿಯಾಗಿ ಪರಿಣಮಿಸಿದೆ.

ಪಿಡಿಎ ಕಾಲೇಜಲ್ಲಿ ಇಸ್ರೋ ನೋಡಲ್‌ ಸೆಂಟರ್‌:

ಕಲಬುರಗಿಯ ಪಿಡಿಎ ಇಂಜಿನಿಯರಿಂಗ್‌ ಕಾಲೇಜನ್ನು ಇಸ್ರೋ ತನ್ನ ನೋಡಲ್‌ ಸೆಂಟರ್‌ ಆಗಿ ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ಇಸ್ರೋ ನಡೆಸುವ ಹಲವು ಹಂತಗಳ ವಿದ್ಯಾರ್ಥಿ ಕೇಂದ್ರಿತ ಯೋಜನೆಗಳು, ಖಗೋಳ ಯಾನದ ವಿಸ್ತರಣೆಗಳೆಲ್ಲವನ್ನು ಈ ಕೇಂದ್ರವೇ ನಿಭಾಯಿಸಲಿದೆ. ಇದಲ್ಲದೆ ಇಸ್ರೋ ದೇಶಾದ್ಯಂತ ಚಂದ್ರಯಾನ ಮಹೋತ್ಸವ ಆಯೋಜಿಸಲು ಮುಂದಾಗಿದ್ದು ಪಿಡಿಎ ಕಾಲೇಜು ಈ ಮಹೋತ್ಸವಕ್ಕೂ ಆಯ್ಕೆಯಾಗಿದೆ.

ಪಿಡಿಎ ಕಾಲೇಜಿನ ಸಿರ್ಯಾಮಿಕ್‌ ಮತ್ತು ಸಿಮೆಂಟ್‌ ಟೆಕ್ನಾಲಜಿ ವಿಭಾಗದ ಮೂವರು ವಿದ್ಯಾರ್ಥಿಗಳು ಇದೀಗ ಇಸ್ರೋದ ವಿಜ್ಞಾನಿ ಅರ್ಜುನ ಡೇ ಇವರೊಂದಿಗೆ ಸೇರಿಕೊಂಡು ಅನೇಕ ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಈ ಕಾಲೇಜಿನ ಸಿಸಿಟಿ ವಿಭಾಗದ ರಶ್ಮಿ, ಶುಭ, ಅಜ್ಞಾನ ಮೊಹ್ಮದ್‌ ಇವರು ಅದಾಗಲೇ ರಾಕೆಟ್‌ ನಿರ್ಮಾಣ ಸೇರಿದಂತೆ ಅನೇಕ ತಂತ್ರಜ್ಞಾನಗಳಲ್ಲಿ ಪ್ರಾತ್ಯಕ್ಷಿಕೆ , ಪ್ರಬಂಧ ಸಿದ್ಧಪಡಿಸುತ್ತಿದ್ದಾರೆ. ಇದೂ ಕಾಲೇಜಿಗೆ ಹೆಮ್ಮೆಯ ಸಂಗತಿ. ಇಂತಹ ಉಪಕ್ರಮಗಳು ಇತರೆ ಮಕ್ಕಳಿಗೂ ಮಾದರಿಯಾಗುತ್ತವೆ ಎಂದು ಕಲಬುರಗಿ ಸಿಸಿಟಿ, ಪಿಡಿಎ ವಿಭಾಗ ಮುಖ್ಯಸ್ಥರು ಡಾ. ಬಾಬೂರಾವ ಶೇರಿಕಾರ್‌ ತಿಳಿಸಿದ್ದಾರೆ.  

Chandrayaan-3: ಗುಡ್‌ನೈಟ್‌ ಹೇಳಿದ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌, ಇನ್ನು ಸೆ.22ರ ಕುತೂಹಲ!

ಚಂದ್ರಯಾನ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ದೇಶಾದಯಂತ ಸೆಪ್ಟೆಂಬರ್‌ ತಿಂಗಳು ಪೂತಿರ್ರ ಚಂದ್ರ ಮಹೋತ್ಸವ ಆಯೋಜಿಸುತ್ತಿದೆ. ಈ ಉತ್ಸವಕ್ಕೆ ಕಲಬುರಗಿಯ ಪಿಡಿಎ ಕಾಲೇಜು ಆಯ್ಕೆಯಾಗಿದೆ. ಇದು ಇಲ್ಲಿನ ವಿದ್ಯಾಥಿರ್ರ್ರಗಳಲ್ಲಿ ಇನ್ನೂ ಹೆಚ್ಚಿನ ಖಗೋಳ ಯಾನಗಳ ಕುರಿತಂತೆ ಹುಮ್ಮಸ್ಸು ತುಂಬಲಿದೆ ಎಂದು ಕಲಬುರಗಿ ಹೈಕಕಶಿ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಹೇಳಿದ್ದಾರೆ.  

ಇಸ್ರೋ ಸಂಸ್ಥೆ ಕಲಬರಗಿ ಪಿಡಿಎ ಕಾಲೇಜನ್ನೇ ಕಲ್ಯಾಣ ನಾಡಿನ 7 ಜಿಲ್ಲೆಗಳಿಗೆ ನೋಡಲ್‌ ಕೇಂದ್ರವಾಗಿ ಗುರುತಿಸಿರೋದು ನಮಗೆ ಸಂತಸ ತಂದಿದೆ. ಬರುವ ದಿನಗಳಲ್ಲಿ ಇಸ್ರೋ ಸಂಸ್ಥೆಯ ಸೂಕ್ತ ಸಲಹೆಗಳ ಮೇರೆಗೆ ಇಲ್ಲಿಯೂ ಖಗೋಳ ಯಾನದ ವಿಷಯವಾಗಿ ಚಟುವಟಿಕೆಗಳನ್ನು ಆಂರಭಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಕಲಬುರಗಿ ಪಿಡಿಎ ಇಂಜಿನಿಯಿರಂಗ್‌ ಕಾಲೇಜಿನ ಪ್ರಾಚಾರ್ಯ ಡಾ. ಎಸ್‌. ಆರ್‌ ಮೀಸೆ ತಿಳಿಸಿದ್ದಾರೆ. 

click me!