Chandrayaan-3: ಗುಡ್‌ನೈಟ್‌ ಹೇಳಿದ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌, ಇನ್ನು ಸೆ.22ರ ಕುತೂಹಲ!

By Santosh Naik  |  First Published Sep 4, 2023, 3:25 PM IST


ಚಂದ್ರನಲ್ಲಿ ಇಂದಿನಿಂದ ಕತ್ತಲು ಆವರಿಸಲಿದೆ. ಇದರ ಬೆನ್ನಲ್ಲಿಯೇ ಬೆಳಗ್ಗೆ 8 ಗಂಟೆಗೆ ಚಂದ್ರನ ನೆಲದಲ್ಲಿ ಕೆಲಸದಲ್ಲಿ ತೊಡಗಿದ್ದ ವಿಕ್ರಮ್ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಗುಡ್‌ನೈಟ್‌ ಹೇಳಿದೆ.


ಬೆಂಗಳೂರು (ಸೆ.4): ಕಳೆದ ಆಗಸ್ಟ್‌ 23 ರಿಂದ ಸೆ.4ರ ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೂ ಚಂದ್ರನ ನೆಲದಲ್ಲಿ ಪರಿಶೋಧನೆಯಲ್ಲಿ ತೊಡಗಿಕೊಂಡಿದ್ದ ಚಂದ್ರಯಾನ-3ಯ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಭಾರತಕ್ಕೆ ಗುಡ್‌ನೈಟ್‌ ಹೇಳಿದೆ. ಈ ಬಗ್ಗೆ ಇಸ್ರೋ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಭೂಮಿಗೆ ಗುಡ್‌ನೈಟ್‌ ಹೇಳುವ ಮುನ್ನ ವಿಕ್ರಮ್‌ ಲ್ಯಾಂಡರ್‌ ಚಂದ್ರನ ನೆಲದಲ್ಲಿ ಐತಿಹಾಸಿಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಶಿವಶಕ್ತಿ ಪಾಯಿಂಟ್‌ಯಿಂದ ಇಂದು 40 ಸೆಂಟಿಮೀಟರ್‌ ಹಾರಾಟ ನಡೆಸಿದ ವಿಕ್ರಮ್ ಲ್ಯಾಂಡರ್‌ ತಾನಿಂದ ಸ್ಥಳದಿಂದ 40 ಸೆಂಟಿಮೀಟರ್‌ ಪಕ್ಕ ಸರಿದಿದೆ. ಅ ಮೂಲಕ ಚಂದ್ರನ ನೆಲದಲ್ಲಿ 2ನೇ ಬಾರಿಗೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ. ಇದರ ಬೆನ್ನಲ್ಲಿಯೇ ಶಿವಶಕ್ತಿ ಪಾಯಿಂಟ್‌ ಹಾಗೂ ಹೊಸ ಸ್ಥಳದ ಚಿತ್ರಗಳನ್ನು ಹಂಚಿಕೊಂಡಿರುವ ಇಸ್ರೋ, ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಎಬ್ಬಿಸುವ ಕಾರ್ಯ ಸೆಪ್ಟೆಂಬರ್‌ 22 ರಂದು ನಡೆಯಲಿದೆ ಎಂದು ಮಾಹಿತಿ ನೀಡಿದೆ.

'ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಚಂದ್ರನ ನೆಲದ ಮೇಲೆ ವಿಕ್ರಮ್‌ ಲ್ಯಾಂಡರ್‌ ಸ್ಲೀಪ್‌ ಮೋಡ್‌ಗೆ ಹೋಗಿದೆ. ಅದರಕ್ಕೂ ಮುನ್ನ ಚಾಸ್ಟೆ, ರಂಭಾ-ಎಲ್‌ಪಿ ಮತ್ತು ಇಲ್ಸಾ ಪೇಲೋಡ್‌ಗಳು ವಿಕ್ರಮ್‌ ಲ್ಯಾಂಡರ್‌ ನಿಂತ ಹೊಸ ಸ್ಥಳದಲ್ಲಿ ತನ್ನ ಪ್ರಯೋಗಗಳನ್ನು ನಡೆಸಿದೆ. ಇವುಗಳು ಸಂಗ್ರಹಿಸಿದ ಡೇಟಾವನ್ನು ಭೂಮಿಯಲ್ಲಿ ಸ್ವೀಕಾರ ಮಾಡಲಾಗಿದೆ. ಅದರ ನಂತರ ಎಲ್ಲಾ ಪೇಲೋಡ್‌ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ. ಲ್ಯಾಂಡರ್ ರಿಸೀವರ್‌ಗಳನ್ನು ಆನ್‌ನಲ್ಲಿ ಇರಿಸಲಾಗಿದೆ. ಸೋಲಾರ್‌ ಪವರ್‌ ಮುಗಿದು ಬ್ಯಾಟರಿ ಖಾಲಿಯಾದ ಮೇಲೆ ಪ್ರಗ್ಯಾನ್‌ ಪಕ್ಕದಲ್ಲೇ ವಿಕ್ರಮ್‌ ನಿದ್ರಿಸುತ್ತಾನೆ. ಸೆಪ್ಟೆಂಬರ್‌ 22 ರಂದು ಇವೆರಡನ್ನೂ ಎಬ್ಬಿಸುವ ಕೆಲಸ ಮಾಡಲಾಗುತ್ತದೆ. ಹಾಪ್‌ (2ನೇ ಸಾಫ್ಟ್‌ ಲ್ಯಾಂಡಿಂಗ್‌) ಮೊದಲು ಮತ್ತು ನಂತರದ ಚಿತ್ರಗಳು ಇಲ್ಲಿವೆ' ಎಂದು ಇಸ್ರೋ ಚಿತ್ರಗಳನ್ನು ಹಂಚಿಕೊಂಡಿದೆ.

 

Tap to resize

Latest Videos

undefined

Chandrayaan-3: ಚಂದ್ರನ ಮೇಲೆ ಮತ್ತೊಮ್ಮೆ ಐತಿಹಾಸಿಕ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ವಿಕ್ರಮ್‌ ಲ್ಯಾಂಡರ್‌!

 

ಇಸ್ರೋಗೆ ಬೆಂಗಳೂರಲ್ಲಿ ಜಾಗ ನೀಡಿದ್ದು ಕಾಂಗ್ರೆಸ್‌: ಬಿಕೆ ಹರಿಪ್ರಸಾದ್

Chandrayaan-3 Mission:
Vikram Lander is set into sleep mode around 08:00 Hrs. IST today.

Prior to that, in-situ experiments by ChaSTE, RAMBHA-LP and ILSA payloads are performed at the new location. The data collected is received at the Earth.
Payloads are now switched off.… pic.twitter.com/vwOWLcbm6P

— ISRO (@isro)

 

click me!