ವಿಶ್ವದ ದೊಡ್ಡ ಅನಕೊಂಡಾ ಪತ್ತೆ: ಕನಸಲ್ಲೂ ಬೆಚ್ಚಿಬೀಳೋ ದೈತ್ಯ ಇದು!

Published : Apr 26, 2025, 06:03 PM ISTUpdated : Apr 27, 2025, 07:50 AM IST
ವಿಶ್ವದ ದೊಡ್ಡ ಅನಕೊಂಡಾ ಪತ್ತೆ:  ಕನಸಲ್ಲೂ ಬೆಚ್ಚಿಬೀಳೋ ದೈತ್ಯ ಇದು!

ಸಾರಾಂಶ

ಅಮೆಜಾನ್ ಕಾಡಿನಲ್ಲಿ ೨೬ ಅಡಿ ಉದ್ದ, ೫೦೦ ಕೆ.ಜಿ. ತೂಕದ ದೈತ್ಯ ಅನಕೊಂಡ ಪತ್ತೆಯಾಗಿದೆ. "ನಾರ್ದರ್ನ್ ಗ್ರೀನ್ ಅನಕೊಂಡ" ಎಂದು ಕರೆಯಲ್ಪಡುವ ಈ ಹಾವು, ಈ ಹಿಂದೆ ದಾಖಲೆಯಾಗಿದ್ದ ಅತಿದೊಡ್ಡ ಹಾವುಗಳಿಗಿಂತಲೂ ದೊಡ್ಡದಾಗಿದೆ. ಸ್ಥಳೀಯರ ನೆರವಿನೊಂದಿಗೆ ಸಂಶೋಧಕರು ಈ ಹೊಸ ಜಾತಿಯನ್ನು ಗುರುತಿಸಿದ್ದಾರೆ. ಅರಣ್ಯನಾಶ, ಮಾಲಿನ್ಯದಿಂದ ಈ ಜೀವಿಗಳ ಆವಾಸಸ್ಥಾನಕ್ಕೆ ಅಪಾಯ ಎದುರಾಗಿದ್ದು, ಸಂರಕ್ಷಣೆ ಅಗತ್ಯವಾಗಿದೆ.

ಸಾಧಾರಣ ಹಾವಿನ ಹೆಸರು ಕೇಳಿದರೇನೇ ಬೆಚ್ಚಿ ಬೀಳುವವರೇ ಹೆಚ್ಚು. ಇನ್ನು ಹೆಬ್ಬಾವು ಎದುರಿಗೆ ಬಂದರೆ? ಅಬ್ಬಾ ಕನಸಿನಲ್ಲಿಯೂ ಊಹಿಸಲು ಸಾಧ್ಯವೇ ಇಲ್ಲ ಬಿಡಿ. ಇದು ಬಿಡಿ, ಇನ್ನು ಅನಕೊಂಡಾ? ಅಬ್ಬಬ್ಬಾ... ಓದುತ್ತಿರುವಾಗಲೇ ಮೈಯೆಲ್ಲಾ ಝುಂ ಎನ್ನುವುದೂ ಅಲ್ಲದೇ ಬೆವರು ಕೂಡ ಬರಬಹುದು. ಇದೀಗ ವಿಶ್ವೆ ಅತಿ ದೊಡ್ಡ ಅನಕೊಂಡವನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. 26 ಅಡಿ, 500 ಕೆಜಿ ತೂಕವಿದೆ ಈ ಹಾವು!   ಅಮೆಜಾನ್‌ ಕಾಡಿನಲ್ಲಿ ಈ  ಹೊಸ ಜಾತಿಯ ದೈತ್ಯ ಅನಕೊಂಡವನ್ನು ಗುರುತಿಸಲಾಗಿದೆ. ಇದನ್ನು ನಾರ್ದರ್ನ್ ಗ್ರೀನ್ ಅನಕೊಂಡ (ಯುನೆಕ್ಟೆಸ್ ಅಕಾಯ್ಮಾ) ಎಂದು ಕರೆಯಲಾಗುತ್ತದೆ. ಈ ಬೃಹತ್ ಹಾವು 26 ಅಡಿ ಉದ್ದ ಮತ್ತು 500 ಕಿಲೋಗ್ರಾಂಗಳಷ್ಟು ತೂಗುತ್ತದೆ, ಇದು ಅತಿದೊಡ್ಡ ಹಾವುಗಳ ಹಿಂದಿನ ದಾಖಲೆಗಳನ್ನು ಮೀರಿಸಿದೆ. ಗ್ರೀನ್ ಅನಕೊಂಡವು ಭೂಮಿಯ ಮೇಲಿನ ಅತಿದೊಡ್ಡ ಹಾವು ಎಂದು  ಬಹಳ ಹಿಂದಿನಿಂದಲೂ ಹೇಳಲಾಗುತ್ತಿತ್ತು. ಆದರೆ, ಇದೀಗ ಅದನ್ನು ಮೀರುವ ದೈತ್ಯ ಅಮೆಜಾನ್​ ಕಾಡಿನಲ್ಲಿ ಸಿಕ್ಕಿದೆ!
 
ಸ್ಥಳೀಯ ವಯೋರಾನಿ ಜನರ ನೆರವಿನೊಂದಿಗೆ  ವಿಲ್ ಸ್ಮಿತ್ ಒಳಗೊಂಡ ನ್ಯಾಷನಲ್ ಜಿಯಾಗ್ರಫಿಕ್‌ನ ಡಿಸ್ನಿ+ ಸರಣಿಯ ಪೋಲ್ ಟು ಪೋಲ್‌ನ ಬೆಂಬಲದೊಂದಿಗೆ, ಮನಿ ಕಂಟ್ರೋಲ್‌ನ 2024 ರ ವರದಿಯ ಪ್ರಕಾರ, ವಿಜ್ಞಾನಿಗಳು ಇದನ್ನು ಕಂಡು ಹಿಡಿದಿದ್ದಾರೆ.  ಈಕ್ವೆಡಾರ್‌ನ ಅಮೆಜಾನ್‌ನಲ್ಲಿರುವ ಬೈಹುಯೇರಿ ವಯೋರಾನಿ ಪ್ರದೇಶದ ಹೃದಯ ಭಾಗದಲ್ಲಿ ಇದು ಕಂಡುಬಂದಿದೆ.   ಅಪ್ರತಿಮ ಜೀವವೈವಿಧ್ಯತೆಗೆ ನೆಲೆಯಾಗಿರುವ ಅಮೆಜಾನ್, ಕೈಗಾರಿಕಾ ಕೃಷಿ, ಅರಣ್ಯನಾಶ ಮತ್ತು ಮಾಲಿನ್ಯ ಸೇರಿದಂತೆ ಮಾನವ ಚಟುವಟಿಕೆಗಳಿಂದ ನಿರಂತರ ಬೆದರಿಕೆಗಳನ್ನು ಎದುರಿಸುಲೇ ಇದೆ.  ಈ ಒತ್ತಡಗಳು ಈ ಪ್ರದೇಶದ ಪರಿಸರವನ್ನು ಹಾಳು ಕೂಡ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ,  ದೈತ್ಯ ಅನಕೊಂಡದಂತಹ ಪ್ರಭೇದಗಳಿಗೆ ಅಪಾಯವನ್ನುಂಟುಮಾಡುತ್ತಿವೆ ಎನ್ನುತ್ತಿದ್ದಾರೆ ಸಂಶೋಧಕರು.

ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...

 ಈ ಜೀವಿಗಳ ಆವಾಸಸ್ಥಾನಗಳನ್ನು ರಕ್ಷಿಸುವುದು ಅಮೆಜಾನ್‌ನ ಭವಿಷ್ಯಕ್ಕೆ ಅತ್ಯಗತ್ಯ ಎನ್ನುವುದು ಅವರ ನಿಲುವು.  ಉತ್ತರ ಹಸಿರು ಅನಕೊಂಡ ಮತ್ತು ಮಳೆಕಾಡಿನ ಮನೆ ಎಂದು ಕರೆಯುವ ಇತರ ಪ್ರಭೇದಗಳ ಉಳಿವಿಗಾಗಿ ಶ್ರಮಿಸಲಾಗಗುತ್ತಿದೆ.  ಡೈವರ್ಸಿಟಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉತ್ತರ ಹಸಿರು ಅನಕೊಂಡವು ಕೇವಲ ಬೃಹತ್ ಪ್ರಮಾಣದಲ್ಲಿಲ್ಲ - ಇದು ದಕ್ಷಿಣ ಹಸಿರು ಅನಕೊಂಡದಿಂದ ತಳೀಯವಾಗಿ ಭಿನ್ನವಾಗಿದೆ.  ಸುಮಾರು 10 ಮಿಲಿಯನ್ ವರ್ಷಗಳ ಹಿಂದೆ ಇಂಥದ್ದೊಂದು ಪ್ರಕೃತಿ ವಿಸ್ಮಯ ಸಂಭವಿಸಿದೆ.  

ಇನ್ನು ಈ ಭೂಮಿಯ ಮೇಲೆ ಯಾವುದೇ ಜೀವಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಾಸಿಸಲು ಆರಂಭಿಸಿದರೆ, ಅವುಗಳ ನಿಯಂತ್ರಣಕ್ಕೆಂದೇ ಪ್ರಕೃತಿ ಇನ್ನೊಂದು ಉಪಾಯ ಸೂಚಿಸುತ್ತದೆ. ಜನಸಂಖ್ಯೆ ಏರುತ್ತಿದ್ದರೆ, ಪ್ರಕೃತಿ ವಿಕೋಪಗಳು ಸಂಭವಿಸಿ ಅದನ್ನು ನಿಯಂತ್ರಣ ಮಾಡುವುದು ಕೂಡ ಇದರಲ್ಲಿ ಒಂದು. ಅದರಂತೆಯೇ, ಚಿಕ್ಕ ಪುಟ್ಟ ಪ್ರಾಣಿಗಳ ಸಂತತಿ ಕಡಿಮೆ ಮಾಡಲು ಇಂಥ ದೈತ್ಯ ಪ್ರಾಣಿಗಳ ಜನನವಾಗಿರುತ್ತದೆ. ಅದೇ ರೀತಿ, ಅಮೆಜಾನ್‌ನ ಪರಿಸರ ವ್ಯವಸ್ಥೆಯಲ್ಲಿ ಇತರ ಜಾತಿಗಳ ಜನಸಂಖ್ಯೆಯನ್ನು ನಿಯಂತ್ರಿಸಲು ಆ ಅನಕೊಂಡಾ ಸಹಾಯ ಮಾಡುತ್ತವೆ.    

ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ