ಈ ದಿನ ಆಗಸ ನೋಡಲು ಮರೆಯಬೇಡಿ; ಸ್ಮೈಲಿ ಫೇಸ್ ರೂಪದಲ್ಲಿ ಗೋಚರಿಸಲಿದೆ, ಚಂದ್ರ,ಶುಕ್ರ, ಶನಿ

Published : Apr 20, 2025, 03:17 PM ISTUpdated : Apr 20, 2025, 03:39 PM IST
ಈ ದಿನ ಆಗಸ ನೋಡಲು ಮರೆಯಬೇಡಿ; ಸ್ಮೈಲಿ ಫೇಸ್ ರೂಪದಲ್ಲಿ ಗೋಚರಿಸಲಿದೆ, ಚಂದ್ರ,ಶುಕ್ರ, ಶನಿ

ಸಾರಾಂಶ

ಏಪ್ರಿಲ್ 25 ರಂದು ಸೂರ್ಯೋದಯಕ್ಕೆ ಒಂದು ಗಂಟೆ ಮುನ್ನ ಅಪರೂಪದ ಆಕಾಶಕಾಯಗಳ ಜೋಡಣೆ ಗೋಚರಿಸಲಿದೆ. ಅರ್ಧಚಂದ್ರ, ಶುಕ್ರ ಮತ್ತು ಶನಿ ಗ್ರಹಗಳು ಹತ್ತಿರವಾಗಿ ನಗುಮುಖದಂತೆ ಕಾಣಿಸಲಿವೆ. ಶುಕ್ರ, ಶನಿ ಕಣ್ಣುಗಳಂತೆ ಮತ್ತು ಚಂದ್ರ ನಗುಮುಖದ ಬಾಯಿಯಂತೆ ಗೋಚರಿಸುತ್ತದೆ. ಪೂರ್ವ ದಿಕ್ಕಿನಲ್ಲಿ ಬರಿಗಣ್ಣಿನಿಂದಲೇ ವೀಕ್ಷಿಸಬಹುದು.

ನವದೆಹಲಿ(ಏ.20) ಪ್ರತಿ ದಿನ ಆಗಸವನ್ನು ದಿಟ್ಟಿಸಿ ನೋಡಿದರೆ ಹಲವು ಕೌತುಗಳು ಗೋಚರವಾಗುತ್ತದೆ. ಇದೀಗ ಅತ್ಯಂತ ಅಪರೂಪದ ಕೌತುಕವೊಂದು ಆಗಸದಲ್ಲಿ ಘಟಿಸುತ್ತಿದೆ. ವಿಶೇಷ ಇದು ವಿಶೇಷ ಹಾಗೂ ಅತೀ ವಿರಳ ಗ್ರಹ ಜೋಡಣೆಯಾಗಿದೆ. ಅಂದರೆ ಅರ್ಧಚಂದ್ರ, ಶುಕ್ರ ಹಾಗೂ ಶನಿ ಗ್ರಹಗಳು ಆಗಸದಲ್ಲಿ ಜೊತೆಯಾಗುತ್ತಿದೆ. ಅಂದರೆ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಹತ್ತಿರವಾಗಲಿದೆ. ಇದು ಸ್ಮೈಲಿ ಫೇಸ್ ಅಥವಾ ನಗು ಮುಖದ ಆಕೃತಿಯನ್ನು ಹೋಲುತ್ತದೆ. ಈ ತ್ರಿವಳಿ ಸಂಯೋಗ ಇದೇ ತಿಂಗಳಲ್ಲಿ ನಡೆಯುತ್ತಿದೆ. ಹೀಗಾಗಿ ಈ ದಿನ ಯಾರೂ ಆಗಸ ನೋಡುವುದನ್ನು ಮರೆಯಬೇಡಿ. ವಿಶೇಷ ಹಾಗೂ ಅಪರೂಪದ ಕೌತುಕವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ. 

ಈ ಕೌತುಕ ಯಾವಾಗ?
ಅರ್ಧಚಂದ್ರ, ಶುಕ್ರ ಹಾಗೂ ಶನಿ ಅಪರೂಪಯ ಸಂಯೋಗ ಇದೇ ಎಪ್ರಿಲ್ ತಿಂಗಳ 25ರಂದು ಈ ವಿಸ್ಮಯ ಘಟಿಸುತ್ತಿದೆ. 25ರ ಬೆಳಗಿನ ಜಾವ ಈ ಕೌತುಕ ಗೋಚರವಾಗಲಿದೆ. ಅಂದರೆ ಏಪ್ರಿಲ್ 25ರ ಸೂರ್ಯೋದಕ್ಕೂ 1 ಗಂಟೆ ಮೊದಲು ಈ ವಿಸ್ಮಯ ಘಟಿಸುತ್ತದೆ. ಮೋಡ ಅಥವಾ ಇನ್ಯಾವುದೇ ರೀತಿಯ ಅಡ್ಡಿ ಆತಂಕವಿಲ್ಲದಿದ್ದರೆ,ವಿಶ್ವದ ಯಾವುದೇ ಮೂಲೆಯಿಂದ ನೋಡಿದರೂ ಈ ಸಂಯೋಗ ಕಾಣಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಈ ತ್ರಿವಳಿ ಸಂಯೋಗ ಹಾಗೂ ನಗು ಮುಖದ ರೂಪ ಕೆಲ ಹೊತ್ತು ಮಾತ್ರ ಇರಲಿದೆ ಎಂದಿದ್ದಾರೆ. ಈ ವಿಸ್ಮಯ ನೋಡಲು ನೀವು ಪೂರ್ವ ದಿಗಂತದ ಕಡೆ ನೋಡಬೇಕು. ಈ ನೋಟದಲ್ಲಿ ಯಾವುದೇ ಅಡೆ ತಡೆ ಇಲ್ಲದಂತೆ ಖಚಿತಪಡಿಸಿಕೊಳ್ಳಿ. ಇನ್ನು ಅರ್ಧಚಂದ್ರ ಸುಲಭವಾಗಿ ಗೋಚರಿಸುತ್ತಾನೆ. ಇಷ್ಟೇ ಅಲ್ಲ, ಆಗಸ ಕ್ಲಿಯರ್ ಆಗಿದ್ದರೆ, ಶುಕ್ರ ಹಾಗೂ ಶನಿ ಹೆಚ್ಚು ಪ್ರಕಾಶಮಾನವಾಗಿರುವ ಕಾರಣ ಬರಿಗಣ್ಣಿನಲ್ಲಿ ಈ ವಿಸ್ಮಯ ನೋಡಲು ಸಾಧ್ಯವಿದೆ. ದೂರದರ್ಶಕ ಅಥವಾ ನಕ್ಷತ್ರ ವೀಕ್ಷಕ ಬೈನಾಕ್ಯುಲರ್ ಇದ್ದರೆ ಈ ನಗು ಮುಖದ ಸಂಪೂರ್ಣ ವಿವರ ಸಿಗಲಿದೆ.

ನಾಸಾದ ಜೇಮ್ಸ್‌ ವೆಬ್‌ ಕಣ್ಣಿಗೆ ಬಿದ್ದ 10 ಮೈನವಿರೇಳಿಸುವ ಗೆಲಾಕ್ಸಿಗಳು!

ಶುಕ್ರ, ಶನಿ ಕಣ್ಣುಗಳಾಗಿ, ಚಂದ್ರ ಬಾಯಿ ರೂಪದಲ್ಲಿ ಗೋಚರಿಸಲಿದೆ
ನಗುತ್ತಿರುವ ಮುಖ ಹೋಲುವ ರೂಪದಲ್ಲಿ ಮೂರು ಅಕಾಶಕಾಯಗಳು ಗೋಚರಿಸಲಿದೆ. ಇಲ್ಲಿ ಶುಕ್ರ ಹಾಗೂ ಶನಿ ಎರಡು ಕಣ್ಣಗಳಾಗಿ ಗೋಚರಿಸಲಿದೆ. ಇನ್ನ ಅರ್ಧಚಂದ್ರ ನಗು ಮುಖದ ತುಟಿಗಳಾಗಿ ಗೋಚರಿಸಲಿದೆ. ವ್ಯಾಟ್ಸಾಪ್ ಹಾಗೂ ಇತೆರೆಡೆ ಬೆಳಸುವ ಸ್ಮೈಲಿ ಫೇಸ್ ರೂಪದಲ್ಲೇ ಆಕಾಯಗಳು ಗೋಚರಿಸಲಿದೆ.

ಮೂರು ಆಕಾಶಕಾಯಗಳು ಹತ್ತಿರ ಬಂದಾಗ ಈ ಸಂಯೋಗ ಘಟಿಸುತ್ತದೆ. ಈ ಮೂರು ಗ್ರಹಗಳು ನಮಗೆ ಹತ್ತಿರದಲ್ಲಿ ಕಾಣಿಸಿಕೊಂಡು ಆಂತರ, ಎತ್ತರಗಳಲ್ಲಿ ಭಾರಿ ವ್ಯತ್ಯಾಸವಿದೆ. ಶುಕ್ರ ಪೂರ್ವ ಆಗಸದ ಎತ್ತದಲ್ಲಿರುತ್ತಾನೆ, ಇನ್ನು ಶನಿ ಅದರ ಸ್ವಲ್ಪ ಕೆಳಗಿರುತ್ತಾನೆ. ಇನ್ನು ಉತ್ತರಕ್ಕೆ ಹಾಗೂ ಕೊಂಚ ದೂರದಲ್ಲಿ ಅರ್ಧಚಂದ್ರ ಗೋಚರಿಸುತ್ತಾನೆ. ಈ ಮೂರು ಗ್ರಹಳು ಹತ್ತಿರ ಬರವು ಕಾರಣ ಆಕಾರದಲ್ಲಿ ನಗು ಮುಖ ಹೋಲುತ್ತದೆ. ನೋಡುಗರಿಗೆ ಇದು ಸ್ಮೈಲಿ ಫೇಸ್ ರೀತಿ ಗೋಚರಿಸಲಿದೆ. ಎಂದು ನಾಸಾದ ಬ್ರೆಂಡಾ ಕಲ್ಬರ್ಟ್ಸನ್ ಹೇಳಿದ್ದಾರೆ. 

ಅನ್ಯಗ್ರಹದಲ್ಲಿ ಏಲಿಯನ್‌ ಇರುವ ಬಗ್ಗೆ ಪ್ರಬಲ ಸಾಕ್ಷಿ ಪಡೆದುಕೊಂಡ ವಿಜ್ಞಾನಿಗಳು!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ