ಗುಡ್‌ ನ್ಯೂಸ್: ಕೆಜಿಎಫ್ 2 ಸ್ಯಾಟ್‌ಲೈಟ್‌ ಹಕ್ಕು ಖರೀದಿಸಿದ ಜೀ ಸಂಸ್ಥೆ

By Suvarna News  |  First Published Aug 20, 2021, 3:18 PM IST

ವರಮಹಾಲಕ್ಷ್ಮಿ ಹಬ್ಬಕ್ಕೆ ಗುಡ್‌ ನ್ಯೂಸ್ ಹಂಚಿಕೊಂಡ ಜೀ ಸಂಸ್ಥೆ. ಕೆಜಿಎಫ್ ಚಾಪ್ಟರ್ 2 ಸ್ಯಾಟ್‌ಲೈಟ್‌ ಹಕ್ಕೀಗ ಝೀ ಸಂಸ್ಥೆಗೆ. 
 


ಭಾರತೀಯ ಸಿನಿ ರಸಿಕರು ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರತಂಡ ಕೆಲವೇ ದಿನಗಳಲ್ಲಿ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಹೇಳಿದ್ದರೂ, ಇನ್ನೂ ಯಾವ ಸುಳಿವನ್ನೂ ನೀಡಿಲ್ಲ. ಇಂದು ವರಮಹಾಲಕ್ಷ್ಮೀ ಹಬ್ಬದ ದಿನ ಏನಾದರೂ ಅನೌನ್ಸ್ ಮಾಡುತ್ತಾರೆ ಎಂದು ಕಾಯುತ್ತಿದ್ದರು. ಅಷ್ಟರಲ್ಲಿಯೇ ಜೀ ಸಂಸ್ಥೆ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದೆ. 

ಹೌದು! ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಸಂಪೂರ್ಣ ಸ್ಯಾಟ್‌ಲೈಟ್‌ ಹಕ್ಕನ್ನು ಜೀ ಸಂಸ್ಥೆ ಖರೀದಿಸಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಹಕ್ಕು ಪಡೆದುಕೊಂಡಿದ್ದಾರೆ. ನಾಲ್ಕು ಭಾಷೆಯ ಸ್ಯಾಟ್‌ಲೈಟ್‌ ಹಕ್ಕು ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಹಿಂದಿ ಭಾಷೆಯ ವಿತರಣಾ ಹಕ್ಕನ್ನು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಪಡೆದಿದೆ, ಎನ್ನಲಾಗಿದೆ. ಆದರೆ, ಹಿಂದಿಯ ಟಿವಿ ಹಕ್ಕು ಯಾರ ಪಾಲಾಗಿದೆ ಎಂಬಿದಿನ್ನು ಬಹಿರಂಗಗೊಂಡಿಲ್ಲ. 

ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಯಶ್ ಕೆಜಿಎಫ್ 2 ಚಿತ್ರವೇ ನಂಬರ್ 1!

Tap to resize

Latest Videos

ಕೆಲವು ದಿನಗಳಿಂದ ಕೆಜಿಎಫ್ ಚಾಪ್ಟರ್ 2 ಡಿಜಿಟಲ್ ಹಕ್ಕಿನ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕಳೆದ ಬಾರಿ ಅಮೇಜಾನ್ ಪ್ರೈಮ್‌ನವರು ಚಾಪ್ಟರ್ 1ರ ಹಕ್ಕು ಪಡೆದುಕೊಂಡಿದ್ದರು. ಈ ಸಲ ಜೀ5 ಸಂಸ್ಥೆ ಪಾಲಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಅಮೇಜಾನ್ ಪ್ರೈಮ್ ದೊಡ್ಡ ಮೊತ್ತ ಮುಂದಿಟ್ಟಿರುವ ಕಾರಣ ಮೊದಲ ಆದ್ಯೆತೆ ಅಮೇಜಾನ್‌ ಪ್ರೈಮ್‌ಗೇ ನೀಡಬಹುದು ಎನ್ನಲಾಗುತ್ತಿತ್ತು. 

ಇನ್ನೂ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಈ ಚಿತ್ರದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ.  ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯನದ, ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಡಿಸೆಂಬರ್‌ನಲ್ಲಿ ರಿಲೀಸ್ ಆಗಬಹುದು ಎನ್ನುವ ಭರವಸೆ ಅಭಿಮಾನಿಗಳದ್ದು.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!