ಡ್ರೋನ್ ಪ್ರತಾಪ್‌ ಸಿನಿಮಾ ಮಾಡಲು 4 ತಿಂಗಳು ರೀಸರ್ಚ್ ಮಾಡಿದ ಪ್ರಥಮ್!

Suvarna News   | Asianet News
Published : Aug 20, 2021, 03:00 PM IST
ಡ್ರೋನ್ ಪ್ರತಾಪ್‌ ಸಿನಿಮಾ ಮಾಡಲು 4 ತಿಂಗಳು ರೀಸರ್ಚ್ ಮಾಡಿದ ಪ್ರಥಮ್!

ಸಾರಾಂಶ

15ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ತೆರೆ ಮೇಲೆ ಡ್ರೋನ್ ಪ್ರತಾಪನಾಗಿ ಬರುತ್ತಿದ್ದಾರೆ ನಟ ಪ್ರಥಮ್.

ಡ್ರೋನ್ ಸಂಶೋಧನೆಯಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಪ್ರತಾಪ್ ಜೀವನ ಚೆರಿತ್ರೆಯನ್ನು ತೆರೆ ಮೇಲೆ ತೋರಿಸಲು ಒಳ್ಳೆ ಹುಡುಗ ಪ್ರಥಮ್ ಮುಂದಾಗಿದ್ದಾರೆ. ಅಚಾನಕ್ ಜನಪ್ರಿಯತೆ ಪಡೆದ ಪ್ರತಾಪ್ ಬಗ್ಗೆ ತಿಳಿದುಕೊಳ್ಳಳು ಜನರಿಗೂ ಕುತೂಹಲವಿದ್ದು, ಪ್ರಥಮ್ ಅವರು ಪ್ರತಾಪ್ ಅವರನ್ನು ತೆರೆ ಮೇಲೆ ತೋರಿಸುವ ಶೈಲಿಯನ್ನು ವೀಕ್ಷಿಸಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. 

ವಿಶೇಷ ಏನೆಂದು ಪ್ರಥಮ್ ನಟನೆ ಮಾತ್ರವಲ್ಲ. ಈ ಚಿತ್ರಕ್ಕೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಪ್ರತಾಪ್‌ ಬಗ್ಗೆ ಅರಿತುಕೊಳ್ಳಲು ಸುಮಾರು 4 ತಿಂಗಳು ತೆಗೆದುಕೊಂಡಿದ್ದಾರಂತೆ ಪ್ರಥಮ್. ಅವರ ಸಾಕಷ್ಟು ಭಾಷಣಗಳನ್ನು ಕೇಳಿ ಅವರ ಹಾವ-ಭಾವವನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದ ಗೌರಿ ಗಣೇಶ್, ಸುಬ್ಬಾ ಶಾಸ್ತ್ರಿ, ಉಂಡು ಹೋದ ಕೊಂಡು ಹೋದ ಶೈಲಿಯಲ್ಲಿ ಈ ಸಿನಿಮಾವನ್ನು ಮಾಡಲು ನಿರ್ಧರಿಸಿದ್ದಾರೆ. ಇದೊಂದು ಹಾಸ್ಯಮಯ ಚಿತ್ರಕತೆ ಎಂದು ಪ್ರಥಮ್ ಹೇಳಿದ್ದಾರೆ.

'ಡ್ರೋನ್' ಚಿತ್ರಕ್ಕೆ 15ಕೆಜಿ ತೂಕ ಇಳಿಸಿಕೊಂಡ ಪ್ರಥಮ್; ಇದು ಕಾಗೆ ಹಾರಿಸುವ ಕಥೆನಾ?

'ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ತಬಲಾ ನಾಣಿ ಇರಲಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಆದರಲ್ಲಿ ಒಬ್ಬ ನಾಯಕಿ ಮುಂಬೈ ಮೂಲದವರಾಗಿರುತ್ತಾರೆ. ಮಾಮೂಲಿ ಮಾಸ್ ಹೀರೋಗಳಿಗಿಂತಲೂ ಭಿನ್ನವಾದ ಸಾಮರ್ಥ್ಯ ನಿನಗಿದೆ ಎಂದರು, ಗಂಭೀರ ವಿಷಯಗಳನ್ನು ಹಾಸ್ಯವಾಗಿ ಪ್ರೆಸೆಂಟ್ ಮಾಡುವದನ್ನು ಮುಂದುವರೆಸು, ಎಂದು ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಲಹೆ ನೀಡಿದ್ದಾರೆ. ಈ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳುತ್ತಿದ್ದೇನೆ,' ಎಂದು ಪ್ರಥಮ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?