ಒಬ್ಬನೇ ಶಿವಾ ಒಬ್ಬನೆ 'ಯುವ' ಹಾಡಿಗೆ ಯುವ ರಾಜ್‌ಕುಮಾರ್ ಫ್ಯಾನ್ಸ್ ಫಿದಾ!

Published : Mar 03, 2024, 04:25 PM ISTUpdated : Mar 22, 2024, 11:27 AM IST
ಒಬ್ಬನೇ ಶಿವಾ ಒಬ್ಬನೆ 'ಯುವ' ಹಾಡಿಗೆ ಯುವ ರಾಜ್‌ಕುಮಾರ್ ಫ್ಯಾನ್ಸ್ ಫಿದಾ!

ಸಾರಾಂಶ

ಸ್ಯಾಂಡಲ್‌ವುಡ್‌ನಲ್ಲಿ ಡಾ ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಪ್ರವೇಶ ಯುವ ರಾಜ್‌ಕುಮಾರ್ ಗ್ರಾಂಡ್‌ ಎಂಟ್ರಿ ಮೂಲಕ ಆಗಲಿದೆ. ಸಹಜವಾಗಿಯೇ ಕರ್ನಾಟಕ, ಅಣ್ಣಾವ್ರ ಕುಟುಂಬದ ಫ್ಯಾನ್ಸ್‌ ಖುಷಿಯಾಗಿದ್ದಾರೆ. 

ಸ್ಯಾಂಡಲ್‌ವುಡ್ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ನಟನೆಯ ಮೊಟ್ಟಮೊದಲ 'ಯುವ' ಚಿತ್ರದ ಸಾಂಗ್ ರಿಲೀಸ್ ಆಗಿದೆ. ಲಾಂಚ್ ಆಗಿರುವ 'ಒಬ್ಬನೆ ಶಿವಾ.. ಒಬ್ಬನೆ ಯುವ..' ಹಾಡು ವಿಭಿನ್ನವಾಗಿದೆ ಎನ್ನಲಾಗುತ್ತಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವ' ಚಿತ್ರದ ಈ ಹಾಡನ್ನು ಸ್ವತಃ ಸಂತೋಷ್ ಆನಂದ್‌ರಾಮ್ ಅವರೇ ಬರೆದಿದ್ದು, ಹಾಡು ಅರ್ಥಪೂರ್ಣವಾಗಿ ಡಾ ರಾಜ್‌ಕುಮಾರ್ ಕುಟುಂಬದ ಹೊಸ ಕುಡಿಯ ಎಂಟ್ರಿಗೆ ಹೇಳಿ ಮಾಡಿಸಿದಂತಿದೆ. ಅಣ್ಣಾವ್ರ ಕುಟುಂಬದ ಫ್ಯಾನ್ಸ್‌ಗಳಿಗಾಗಿಯೇ ಸೃಷ್ಟಿಯಾದ ಹಾಡು ಎನ್ನಬಹುದು.

ಯುವ ಚಿತ್ರವನ್ನು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಾಕಷ್ಟು ಟೈಮ್ ತೆಗೆದುಕೊಂಡು ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಸಂತೋಷ್ ಆನಂದ್‌ರಾಮ್, ಈಗ ಯುವ ರಾಜ್‌ಕುಮಾರ್ ಅವರನ್ನು ಪುನೀತ್ ರಾಜ್‌ಕುಮಾರ್ ಸ್ಥಾನದಲ್ಲಿ ನೋಡುತ್ತಿದ್ದಾರೆ ಎನ್ನಲಾಗಿದೆ. ಯುವ ಚಿತ್ರವು ಇದೇ ತಿಂಗಳು 29ರಂದು, ಅಂದರೆ 29 ಮಾರ್ಚ್‌ 2024ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ಪ್ರಚಾರಕಾರ್ಯದ ಅಂಗವಾಗಿ ಮೊದಲ ಹಾಡು ಬಿಡುಗಡೆಯಾಗಿದೆ. ಸಾಂಗ್ ಲಾಂಚ್‌ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೈರಲ್ ಆಗಿದೆ, ಒಳ್ಳೆಯ ರೆಸ್ಪಾನ್ಸ್ ಬರುತ್ತಿವೆ. ರಿಲೀಸ್ ಬಳಿಕ 20 ಗಂಟೆಗಳಲ್ಲಿ 17 ಲಕ್ಷ ವ್ಯೂಸ್ ದಾಟಿ ಮುನ್ನುಗ್ಗುತ್ತಿದೆ.

ಡಾ ರಾಜ್‌ ಕಿಡ್ನಾಪ್ ಮಾಡಿ ಹೊರಟ ವೀರಪ್ಪನ್‌ಗೆ ಪಾರ್ವತಮ್ಮನವರು ಚಿಟಿಕೆ ಹೊಡೆದು ಹೀಗೆ ಹೇಳಿದ್ದರಂತೆ!

ಡಾ ರಾಜ್‌ಕುಮಾರ್ ಅಭಿಮಾನಿಗಳಾಗಿದ್ದ ಅಸಂಖ್ಯಾತ ಜನರು ಪುನೀತ್ ರಾಜ್‌ಕುಮಾರ್ ಅವರಲ್ಲಿ ಡಾ ರಾಜ್‌ ಅವರನ್ನು ಕಂಡಿದ್ದರು. ಆದರೆ, ಪುನೀತ್ ಅವರು ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ದೊಡ್ಮನೆ ಅಭಿಮಾನಿಗಳು ಇನ್ನು ಪುನೀತ್ ಜಾಗದಲ್ಲಿ ನಮಗೆ ಯಾರು ದಿಕ್ಕು ಎಂದು ಯೋಚಿಸಿದಾಗ ಸಿಕ್ಕ ಉತ್ತರವೇ ಯುವ ರಾಜ್‌ಕುಮಾರ್. ಇದೀಗ, ಸ್ಯಾಂಡಲ್‌ವುಡ್‌ನಲ್ಲಿ ಡಾ ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಪ್ರವೇಶ ಯುವ ರಾಜ್‌ಕುಮಾರ್ ಗ್ರಾಂಡ್‌ ಎಂಟ್ರಿ ಮೂಲಕ ಆಗಲಿದೆ. ಸಹಜವಾಗಿಯೇ ಕರ್ನಾಟಕ, ಅಣ್ಣಾವ್ರ ಕುಟುಂಬದ ಫ್ಯಾನ್ಸ್‌ ಖುಷಿಯಾಗಿದ್ದಾರೆ. 

ಒಂದೇ ಫ್ರೇಮಲ್ಲಿ 80-90ರ ದಶಕದ ಹೀರೋಯಿನ್ಸ್, ನಿಮ್ಮ ನೆಚ್ಚಿನ ನಟಿ ಯಾರು?

ಬಿಡುಗಡೆಯಾಗಿರುವ ಯುವ ಸಾಂಗ್‌ಗೆ ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ಆನಂದ್‌ ರಾಮ್ ಸಾಹಿತ್ಯವಿದೆ, ವಿಜಯ್ ಕಿರಗಂದೂರು ನಿರ್ಮಾಣದ ಯುವ ಚಿತ್ರದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಎರಡನೇ ಮಗ ಯುವ ರಾಜ್‌ಕುಮಾರ್ ನಾಯಕರು. ಯುವ ರಾಜ್‌ಗೆ ಜೋಡಿಯಾಗಿ ಕಾಂತಾರ ನಟಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಪ್ರಕಾಶ್ ರೈ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರವು ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಯುವ ಚಿತ್ರವನ್ನು ಕಣ್ತುಂಬಿಕೊಳ್ಳಲು ಸ್ಯಾಂಡಲ್‌ವುಡ್ ಪ್ರೇಕ್ಷಕರು ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ