
ಯೋಗರಾಜ್ ಭಟ್ ಕನ್ನಡದ ಪ್ರಸಿದ್ಧ ನಿರ್ದೇಶಕ, ಉತ್ತಮ ಗೀತ ರಚನೆಕಾರ. ಅದೇ ಬೆಳ್ಳುಳ್ಳಿ ಕಬಾಬ್ ಚಂದ್ರು ಅಡುಗೆ ಭಟ್ಟರು. ಇದುವರೆಗೂ ಅಪರಿಚಿತರಾಗಿಯೇ ಇದ್ದ ಅವರು ಇದ್ದಕ್ಕಿದ್ದಂತೆ ಬೆಳ್ಳುಳ್ಳಿ ಕಬಾಬ್‌ನಿಂದಲೂ, ತಾವು ಅಸಿಸ್ಟೆಂಟ್ ರಾಹುಲ್ಲನನ್ನು ಕರೆಯುವ ಶೈಲಿಯಿಂದಲೂ ಯೂಟ್ಯೂಬ್ ಚಾನೆಲ್‌ನಲ್ಲಿ ಫೇಮಸ್ ಆದವರು. ಈ ಬೆಳ್ಳುಳ್ಳಿ ಕಬಾಬ್ ಕಾರಣದಿಂದ ಹಲವಾರು ಟ್ರೋಲ್ಸ್, ಮೀಮ್ಸ್‌ನಲ್ಲಿ ಕಾಣಿಸಿಕೊಂಡೇ ಹೆಸರು ಮಾಡಿ ಕಡೆಗೆ ಬೇರೆ ತಮಾಷೆಯ ರೀಲ್ಸ್‌ಗಳಲ್ಲೂ ಕಾಣಿಸಿಕೊಂಡರು. ಇದೀಗ ಈ ಇಬ್ಬರೂ ಭಟ್ಟರು ಒಟ್ಟಾಗಿ ಹಾಡು ಹೇಳುತ್ತಿದ್ದಾರೆ. ಜೊತೆಯಾಗಿ ನಿಂತಿರುವ ಈ ವಿಡಿಯೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಯೋಗರಾಜ್ ಭಟ್ಟರು- ಬೆಳ್ಳುಳ್ಳಿ ಕಬಾಬ್‌ಗೂ ನನಗೂ ಏನ್ರೀ ಸಂಬಂಧ ಎಂದು ಕೇಳಿದ್ದಾರೆ.
ಈ ಸಂಬಂಧವನ್ನು ಬೆಸೆದವರು ಟ್ರೋಲ್ ಪೇಜ್‌ಗಳು. ಬೆಳ್ಳುಳ್ಳು ಕಬಾಬ್ ಚಂದ್ರು ಫೇಮಸ್ ಆಗುತ್ತಿದ್ದಂತೆ ಇವರು ನಮ್ಮ ಯೋಗರಾಜ್ ಭಟ್ಟರಂತೆಯೇ ಕಾಣುತ್ತಾರಲ್ಲವಾ ಎಂದು ಇಬ್ಬರ ಫೋಟೋಗಳನ್ನು ಜೋಡಿಸಿ ಹರಿಬಿಟ್ಟರು. ಜನರೆಲ್ಲ ಅಹುದಹುದೆನ್ನುತ್ತಿದ್ದಂತೆ ಇಬ್ಬರನ್ನೂ ಅಣ್ಣತಮ್ಮ ಎನ್ನಲಾರಂಭಿಸಿದರು. ‘ಒಬ್ರು ಸಿನಿಮಾ ಭಟ್ರು, ಇನ್ನೊಬ್ರು ಅಡುಗೆ ಭಟ್ರು, ಒಬ್ರು ಗಾಳಿಪಟ, ಇನ್ನೊಬ್ರು ಚಟ ಪಟʼ ಎಂಬ ಮೀಮ್ ಫೋಟೊ ಸಖತ್ ವೈರಲ್ ಆಗಿತ್ತು. ಇದನ್ನೇ ತಮ್ಮ ಮುಂದಿನ ಚಿತ್ರ 'ಕರಟಕ ದಮನಕ'ದ ಪ್ರಚಾರಕ್ಕೆ ಬಳಸಿಕೊಂಡಿರುವ ಯೋಗರಾಜ್ ಭಟ್ರು- ಬೆಳ್ಳುಳ್ಳಿ ಕಬಾಬ್ ಚಂದ್ರು ಜೊತೆ ನಿಂತು- 'ಹಂಗೋ ಹಿಂಗೋ ಹೆಂಗೋ ಇದ್ದೆ ಹಿಂಗಾಗ್ ಹೋದೆ ನೋಡು ಅಣ್ತಮ್ಮ' ಎಂದು ಹಾಡಿದ್ದಾರೆ.
ಪಂಚತಂತ್ರ ಕತೆಗಳ ಖ್ಯಾತಿಯ ಪಾತ್ರಗಳಾದ 'ಕರಟಕ ದಮನಕ'ರಂತೆ ತಾವು ನಿಂತು- ತಮ್ಮಿಬ್ಬರ ಸಂಬಂಧ ಏನಂತ ಹೇಳೋಕೆ ದೊಡ್ಡೋರ್ ಬರ್ತಾರೆ ಎಂದಿದ್ದಾರೆ. ಚಂದ್ರು ಕೂಡಾ 'ಹೌದು ದೊಡ್ಡೋರ್ ಬರ್ತಾರೆ. ಅವ್ರು ಒನ್ ಮೋರ್ ಒನ್ ಮೋರ್ ಅಂತಾರೆ. ಕೇಳ್ತಾ ಇದ್ರೆ ನಾವ್ಯಾರೂ, ನಮ್ಮಲ್ಲಿ ಅಣ್ಣ ಯಾರು ತಮ್ಮ ಯಾರು, ಆ ಪ್ರೀತಿ ಎಲ್ಲಿಂದ ಬಂತು ಎಲ್ಲ ಗೊತ್ತಾಗುತ್ತೆ' ಎಂದಿದಾರೆ.
ನಂತರ ಯೋಗರಾಜ ಭಟ್ರು- 'ರೆಡಿ ಮಾಡ್ಕೊಳೋ ರಾಹುಲ್ಲಾ' ಎಂದಿದಾರೆ. ಇದನ್ನೇ ಚಂದ್ರು ರಿಪೀಟ್ ಮಾಡ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, 'ಇಬ್ರೂ ಭಟ್ರು ಸೇರಿದ್ದಾರೆ ಅಂದ್ರೆ ಏನೋ ಸರಿಯಾಗಿ ರುಬ್ತಾರೆ. ಕಾದು ನೋಡೋಣ' ಎಂದಿದಾರೆ. ಮತ್ತೊಬ್ಬರು, 'ಅವಳಿ ಜವಳಿ' ಎಂದಿದ್ದಾರೆ.
ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ
ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಚಿತ್ರ ಮಾರ್ಚ್ 8ಕ್ಕೆ ತೆರೆಗೆ ಬರಲಿದ್ದು, ಇದರಲ್ಲಿ ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸರ್ ಪ್ರಭುದೇವ ನಟಿಸಿದ್ದಾರೆ. ಈ ಇಬ್ಬರೂ ನೃತ್ಯದಲ್ಲಿ ಒಂದು ಕೈ ಮೇಲೇ ಇದ್ದು, ಇಬ್ಬರ ಜುಗಲ್ಬಂದಿ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರಾಗಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ 7 ಹಾಡುಗಳು ಚಿತ್ರದಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.