
ಶಾಸೊತ್ರೕಕ್ತ ನಾಮಕರಣ ಸಮಾರಂಭದ ವೀಡಿಯೋದೊಂದಿಗೆ ಜ್ಯೂ.ಯಶ್ ಹೆಸರನ್ನು ಸೋಷಿಯಲ್ ಮೀಡಿಯಾದ ಮೂಲಕ ಯಶ್ ಹಾಗೂ ರಾಧಿಕಾ ಬಹಿರಂಗಪಡಿಸಿದ್ದಾರೆ. ಯಥರ್ವ ಎಂದರೆ ‘ನಮ್ಮನ್ನು ಪೂರ್ಣಗೊಳಿಸಿದವು’ ಎಂಬ ಅರ್ಥ.
ಇತ್ತೀಚೆಗಷ್ಟೆಯಶ್, ರಾಧಿಕಾ ಹಾಸನದಲ್ಲಿ ಖರೀದಿ ಮಾಡಿರುವ ಮಾವಿನ ತೋಟದಲ್ಲಿ ಈ ನಾಮಕರಣ ಶಾಸ್ತ್ರ ನಡೆಯಿತು. ಕೆಮ್ಮಣ್ಣಿನ ಹಸಿರು ತೋಟ, ಅರಳಿದ ಹೂಗಳು ಮತ್ತು ತೋರಣಗಳಿಂದ ಸಿಂಗಾರಗೊಂಡು, ಪ್ರಕೃತಿಯ ಸೊಬಗು ತುಂಬಿದ ಪುಟ್ಟಮಂಟಪದ ರೀತಿಯಲ್ಲಿ ಸೆಟ್ ಹಾಕಲಾಗಿತ್ತು. ಈ ಕಲರ್‌ಫುಲ್ ಸೆಟ್‌ನಲ್ಲಿ ನಾಮಕರಣ ನಡೆಯಿತು. ಆ.31ರಂದು ನಡೆದ ಈ ನಾಮಕರಣ ಶಾಸ್ತ್ರಕ್ಕೆ ಕೋವಿಡ್ ಕಾರಣಕ್ಕೆ ರಾಧಿಕಾ ಹಾಗೂ ಯಶ್ ಕುಟುಂಬಸ್ಥರಿಗೆ ಮಾತ್ರ ಅಹ್ವಾನ ನೀಡಲಾಗಿತ್ತು.
ಕೆಲವು ದಿನಗಳ ಹಿಂದೆಯೇ ರಾಧಿಕಾ ಮಗನಿಗೊಂದು ಹೊಸ ಹೆಸರು ಹುಡುಕಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದರು. ‘ತನ್ನ ಖುಷಿಯ ಡೋಸ್‌ನೊಂದಿಗೆ ನಮ್ಮ ದಿನವನ್ನು ಹಸನಾಗಿಸುವ ಮಗನಿಗೆ ಹೊಸ ಹೆಸರು ಹುಡುಕಿರುವೆವು’ ಅಂತ ರಾಧಿಕಾ ಬರೆದದ್ದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಬಾಲ ಗಣೇಶನ ಅವತಾರಲ್ಲಿ ಯಶ್-ರಾಧಿಕಾ ಪುತ್ರ!
ಹೆಸರಿನೊಳಗೆ ಹೆಸರು
ಯಶ್-ರಾಧಿಕಾ ದಂಪತಿ ತಮ್ಮ ಮೊದಲ ಮಗುವಿಗೆ ಇಟ್ಟಹೆಸರು ವಿಶೇಷವಾಗಿತ್ತು. ಐರಾ ಹೆಸರಿನಲ್ಲಿ ಯಶ್, ರಾಧಿಕಾ ಹೆಸರನ್ನು ಪ್ರತಿನಿಧಿಸುವ ವೈ ಹಾಗೂ ಆರ್ ಅಕ್ಷರಗಳಿದ್ದವು. ಇದೀಗ ಎರಡನೇ ಮಗುವಿನ ಹೆಸರಿನಲ್ಲೂ ಆ ವಿಭಿನ್ನತೆ ಮುಂದುವರಿದಿದೆ. ಜ್ಯೂ.ಯಶ್ ಹೆಸರಿನಲ್ಲಿ ವೈ, ಆರ್ ಜೊತೆಗೆ ಐರಾ ಹೆಸರೂ ಸೇರಿಕೊಂಡಿರೋದು ವಿಶೇಷ. ಐರಾದ ಎ, ವೈ ಇಲ್ಲಿ ವೈ, ಎ ಆಗಿ ‘ಯಥರ್ವ’ ಆಗಿದೆ. ಈ ವಿಶೇಷತೆಯೂ ವೀಡಿಯೋದಲ್ಲಿದೆ.
ರಾರಾಜಿಸುತಾ ಬದುಕು ಮಗನೇ
ಯಥವ್‌ರ್ ಯಶ್ ನಾಮಕರಣದ ಪುಟ್ಟವೀಡಿಯೋದ ಹಿನ್ನೆಲೆಯಲ್ಲೊಂದು ಚಂದದ ಹಾಡಿದೆ.
‘ನನ್ನ ಎದೆಯ ಅಂಗಳದಲ್ಲಿ ನಿನ್ನ ಪುಟ್ಟಹೆಜ್ಜೆಯ ಗುರುತು, ನಿನ್ನ ಒಂದು ಅಪ್ಪುಗೆಯಲ್ಲೂ ಕೂತೆ ನಾನು ಜಗವ ಮರೆತು, ನಿನ್ನ ಮುಗ್ಧ ನಗುವೆ ನಮಗೆ ಮುತ್ತು ರತ್ನ ತೋರಣ, ನಿನ್ನ ಸ್ಪರ್ಶದಿಂದ ಹರುಷ ಇರಲಿ ನಮಗೆ ಅನುಕ್ಷಣ, ರಾರಾಜನೆ, ರಾರಾಜಿಸುತಾ ಬದುಕು ಮಗನೆ..’ ಎಂಬ ಈ ಹಾಡಿನ ಸಂಯೋಜನೆ ರವಿ ಬಸ್ರೂರು ಅವರದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.