ಟಾಕ್ಸಿಕ್ ಬೆನ್ನಲ್ಲೇ ಯಶ್ ನೆಕ್ಸ್ಟ್‌ ಸಿನಿಮಾ ಸುಳಿವೂ ಸಿಕ್ತು, ಜೋರಾಯ್ತು ಚರ್ಚೆ; ಗೆಸ್ ಮಾಡ್ತೀರಾ?

By Shriram Bhat  |  First Published Aug 9, 2024, 6:41 PM IST

ಈಗ ಟಾಕ್ಸಿಕ್ ಚಿತ್ರದ ಶೂಟಿಂಗ್ ಶುರುವಾಗಿದೆ. ಈ ಚಿತ್ರವು ಪ್ಯಾನ್ ವರ್ಲ್ದ್ಡ್ ಆಗಲಿದ್ದು, ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಈಗ ಟಾಕ್ಸಿಕ್ ಆದ ಬಳಿಕ ಆಗಲಿರುವ ಚಿತ್ರದ ಬಗ್ಗೆ ಯಶ್ ಅಭಿಮಾನಿಗಳಲ್ಲಿ ಚರ್ಚೆ, ನಿರೀಕ್ಷೆ ಶುರುವಾಗಿದೆ. ಅದು..


ನಿನ್ನೆಯಷ್ಟೇ (08 ಆಗಸ್ಟ್ 2024) ಮುಹೂರ್ತ ಆಚರಿಸಿಕೊಂಡು ಶೂಟಿಂಗ್ ಶುರು ಮಾಡಿಕೊಂಡಿದೆ ಕನ್ನಡದ ಸ್ಟಾರ್ ನಟ ಯಶ್ (Rocking Star Yash) ನಟನೆಯ ಟಾಕ್ಸಿಕ್ ಸಿನಿಮಾ. ರಾಕಿಂಗ್‌ ಸ್ಟಾರ್ ಅವರು ಈ ಟಾಕ್ಸಿಕ್ ಸಿನಿಮಾ ಘೋಷಣೆ ಮಾಡಿದಾಗಿನಿಂದಲೂ ಬಹಳಷ್ಟು ಕ್ರೇಜ್ ಹುಟ್ಟಿಸಿಕೊಂಡು ಕಾಯುತ್ತಿದ್ದರು ಯಶ್ ಅಭಿಮಾನಿಗಳು. ಈಗ ಟಾಕ್ಸಿಕ್ ಚಿತ್ರದ ಬಳಿಕ ಯಾವ ಸಿನಿಮಾ ಬರಲಿದೆ ಎಂದು ಊಹಿಸಿರುವ ಅಭಿಮಾನಿಗಳಯ ಸಖತ್ ಥ್ರಿಲ್ ಆಗಿದ್ದಾರೆ. 

ಕಾರಣ, ಟಾಕ್ಸಿಕ್ ಬಳಿಕ ಯಾವ ಸಿನಿಮಾ ಮಾಡಬಹುದು ಎಂಬದನ್ನು ಸ್ವತಃ ನಟ ಯಶ್ ಡೈರೆಕ್ಟ್‌ ಆಗಿ ಹೇಳಿಕೊಳ್ಳದಿದ್ದರೂ ಊಹೆಗೆ ನಿಲುಕುವಷ್ಟು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಅಂದರೆ, ಸಾಕಷ್ಟು ಕಡೆಗಳಲ್ಲಿ ಯಶ್ ಮಾತನಾಡುತ್ತ ಮುಂದೆ ತಾವು ಮಾಡಲಿರುವ ಆ ಸಿನಿಮಾದ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದ ಕಥೆ ಹಾಗೂ ಸಾಕಷ್ಟು ಸೀನ್‌ಗಳು ಈಗಾಗಲೇ ನಮ್ಮ ಬಳಿ ಸಿದ್ಧವಾಗಿವೆ ಎಂದಿದ್ದಾರೆ. ಅದು ಗೊತ್ತಾಗಿದ್ದೆ ತಡ, ಕಾಯಲು ಶುರುವಾಗಿದೆ.

Tap to resize

Latest Videos

ಡಾ ರಾಜ್‌ಕುಮಾರ್ ಈ ದಾಖಲೆ ನಿಮಗೆ ಗೊತ್ತಿದ್ಯಾ? ನೋಡಿದ್ರೆ ಪಕ್ಕಾ ಶಾಕ್ ಆಗಿ ಹೌಹಾರ್ತೀರಾ!

ಯಶ್ ಎಂದರೆ ಸಾಕು, ಈಗ ಜಗತ್ತಿನ ಕಣ್ಣು ಒಮ್ಮೆ ದೊಡ್ಡದಾಗುತ್ತದೆ. ಏಕೆಂದರೆ, ಕೆಜಿಎಫ್ ಸರಣಿ ಚಿತ್ರದ ಮೂಲಕ ಯಶ್-ಪ್ರಶಾಂತ್ ನೀಲ್ ಮಾಡಿರುವ ಮೋಡಿಯೇ ಅಂಥದ್ದು. ಕೆಜಿಎಫ್ ಭಾಗ ಒಂದು ಹಿಟ್ ಆಗಿ ಜಗತ್ತಿನಾದ್ಯಂತ ಕನ್ನಡ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿ, ಯಶ್ ಮುಂದಿನ ಚಿತ್ರದ ಬಗ್ಗೆ ಪ್ರಪಂಚವೇ ಕಾಯುವಂತಾಯ್ತು. ಬಳಿಕ, 'ಕೆಜಿಎಫ್ ಭಾಗ 2' ಬಿಡುಗಡೆ ಆಗಿದ್ದೇ ತಡ, ನಿರೀಕ್ಷೆಗೂ ಮೀರಿ ಚಿತ್ರ ಯಶಸ್ವಿಯಾಗಿ ಯಶ್ 'ಟಾಕ್ ಆಫ್‌ ದಿ ಗ್ಲೋಬಲ್' ಎನ್ನುವಂತಾಯ್ತು!

ಈಗ ಟಾಕ್ಸಿಕ್ ಚಿತ್ರದ ಶೂಟಿಂಗ್ ಶುರುವಾಗಿದೆ. ಈ ಚಿತ್ರವು ಪ್ಯಾನ್ ವರ್ಲ್ದ್ಡ್ ಆಗಲಿದ್ದು, ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಈಗ ಟಾಕ್ಸಿಕ್ ಆದ ಬಳಿಕ ಆಗಲಿರುವ ಚಿತ್ರದ ಬಗ್ಗೆ ಯಶ್ ಅಭಿಮಾನಿಗಳಲ್ಲಿ ಚರ್ಚೆ, ನಿರೀಕ್ಷೆ ಶುರುವಾಗಿದೆ. ಅದು ಮತ್ಯಾವುದೂ ಅಲ್ಲ, ಕೆಜಿಎಫ್-3. ಹೌದು, ಜಗತ್ತಿನಾದ್ಯಂತ ಇರುವ ಯಶ್ ಫ್ಯಾನ್ಸ್, ಕೆಜಿಎಫ್-3 ಸಿನಿಮಾಕ್ಕೆ ಈಗಿನಿಂದಲೇ ಕಾಯಲು ಶುರು ಮಾಡಿದ್ದಾರೆ. 

ಹಲೋ, ಇಲ್ಲಿ ಸ್ವಲ್ಪ ನೋಡ್ರೀ... ಕಾಂತಾರ ಖ್ಯಾತಿ ರಿಷಬ್ ಶೆಟ್ಟಿ ಕಾಲೆಳಿದಿದ್ದು ಯಾರನ್ನ ಗೊತ್ತಾ?

ನಟ ಯಶ್ ಆಗಲೀ, ನಿರ್ದೇಶಕ ಪ್ರಶಾಂತ್ ನೀಲ್ ಆಗಲೀ ಇನ್ನೂ 'ಕೆಜಿಎಫ್ ಭಾಗ-3' ಸಿನಿಮಾವನ್ನು ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ. ಆದರೆ, ಮಾತುಕತೆಯಲ್ಲಿ ಕತೆ ಸಿದ್ಧವಿದೆ, ಚಿತ್ರಕತೆ ರೂಪದಲ್ಲಿ ಕೆಲವು ಸೀನ್‌ಗಳು ಸಹ ಈಗಾಗಲೇ ರೆಡಿಯಾಗಿವೆ ಎಂದಿದ್ದಾರೆ. ಅಷ್ಟು ಸಿಕ್ಕಮೇಲೆ ಅಭಿಮಾನಿಗಳ ಆಸೆ ಕೇಳಬೇಕೆ? ಅವರೆಲ್ಲರ ಮನಸ್ಸಿನಲ್ಲಿ ಈಗಾಗಲೇ ಕೆಜಿಎಫ್ ಭಾಗ-3 ಸಿದ್ಧವಾಗತೊಡಗಿದೆ!

click me!