ಸೆಂಟ್ರಲ್ ಜೈಲ್ ಸೆಲೆಬ್ರಿಟಿ ದರ್ಶನ್​​​​​​​ಗೆ ಶಾಕ್ ಮೇಲೆ ಶಾಕ್: ಮನೆ ಊಟ ಮಾಡುವ ನಟನ ಆಸೆಗೆ ತಣ್ಣೀರು!

By Govindaraj S  |  First Published Aug 9, 2024, 6:22 PM IST

ಕಿಲ್ಲಿಂಗ್ ಸ್ಟಾರ್ ಪಟ್ಟದಲ್ಲಿರೋ ನಟ ದರ್ಶನ್ ಮನೆ ಊಟಕ್ಕೆ ಅನುಮತಿ ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಹೈಕೋರ್ಟ್ ಜೈಲಧಿಕಾರಿಗಳಿಗೆ ಸೂಚಿಸಿತ್ತು. 


ಸರ್ವೇಜನ ಸುಖಿನೋ ಭವಂತು ಅಂದ್ರೆ ಎಲ್ಲರೂ ಸುಖಿಗಳಾಗಲಿ, ನಿರೋಗಿಗಳಾಗಿರಲಿ, ಮಂಗಳವನ್ನೇ ಹೊಂದಲಿ, ಯಾರೊಬ್ಬರಿಗೂ ದುಃಖವಾಗದಿರಲಿ ಅಂತ. ಆದ್ರೆ ದರ್ಶನ್ ವಿಷಯದಲ್ಲಿ ಹಾಗಾಗಿಲ್ಲ. ಕೈಗೆ ಕೊಲೆ ರಕ್ತ ಹತ್ತಿಸಿಕೊಂಡು ಸೆಂಟ್ರಲ್ ಜೈಲ್​ ಸೆಲೆಬ್ರಿಟಿ ಆಗಿರೋ ದರ್ಶನ್, ಈಗ ತನ್ನ ಜೈಲು ವಾಸದ 50ನೇ ದಿನಕ್ಕೆ ಕಾಲಿಟ್ಟಿದ್ದಾರೆ. ಈ ಸೆಂಟ್ರಲ್ ಜೈಲ್ ಸೆಲೆಬ್ರಿಟಿಗೆ ಶಾಕ್​ ಮೇಲೆ ಶಾಕ್ ಆಗುತ್ತಿದ್ದು, ಜೈಲಲ್ಲಿ ಮನೆ ಊಟ ಮಾಡುವ ಕನಸಿಗೆ ಮತ್ತೆ ತಣ್ಣೀರು ಬಿದ್ದಿದೆ. ಕಿಲ್ಲಿಂಗ್ ಸ್ಟಾರ್ ಪಟ್ಟದಲ್ಲಿರೋ ನಟ ದರ್ಶನ್ ಮನೆ ಊಟಕ್ಕೆ ಅನುಮತಿ ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಹೈಕೋರ್ಟ್ ಜೈಲಧಿಕಾರಿಗಳಿಗೆ ಸೂಚಿಸಿತ್ತು. 

ಆದ್ರೆ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಮನೆ ಊಟವೂ ಇಲ್ಲ ಹಾಸಿಕೆ ಬಟ್ಟೆನೂ ಕೊಡಲ್ಲ ಹೋಗತ್ಲಾಗೆ ಎಂದಿದ್ದಾರೆ. ಎ2 ಆರೋಪಿ ದರ್ಶನ್ಗೆ ಈಗ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಮನೆ ಊಟ ಕೊಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಜೈಲಿನ ವೈದ್ಯಾಧಿಕಾರಿಗಳ ವರದಿ ಆಧರಿಸಿ ಪ್ರಿಸನ್ ಡಿಜಿಪಿಯಿಂದ ಆದೇಶ ಬಂದಿದೆ.  ದರ್ಶನ್ ಮನೆ ಊಟದ ಅರ್ಜಿ ಕುರಿತು ತೆಗೆದುಕೊಂಡ ನಿರ್ಧಾರವನ್ನ ಹೈಕೋರ್ಟ್ ಗೆ ಜೈಲು ಅಧಿಕಾರಿಗಳು ತಿಳಿಸಲಿದ್ದಾರೆ. ಹೀಗಾಗಿ ಹೈಕೋರ್ಟ್ ನಲ್ಲಿ ಆಗಸ್ಟ್ 20ಕ್ಕೆ ಮತ್ತೆ ವಿಚಾರಣೆಗೆ ಬರಲಿದೆ. ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈ ಸೇರಿ 49 ದಿನ ಉರುಳಿವೆ. ಈ ಪ್ರಕರಣ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಅನ್ನೋ ಮಾತು ಸಿನಿ ದುನಿಯಾದಲ್ಲಿ ಕೇಳಿ ಬರ್ತಿದೆ. 

Tap to resize

Latest Videos

ಅದ್ರೆ ಈಗ ಈ ಕಪ್ಪು ಮಸಿಯನ್ನ ತೊಳೆದುಕೊಳ್ಳಲು ಕಲಾವಿದರ ಸಂಘ ಸಜ್ಜಾಗಿದ್ಯಂತೆ. ರೇಣುಕಾ ಸ್ವಾಮಿ ಕೊಲೆ ಆದ ನಂತ್ರ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ರೇಣುಕಾ ಸ್ವಾಮಿ ಮನೆಗೆ ಹೋಗಿ ಸಾಂತ್ವಾನ ಹೇಳಿ ಬಂದಿದ್ರು. ಅದ್ರೆ ಕಲಾವಿದ ದರ್ಶನ್ ಬಗ್ಗೆ ಇದುವರೆಗೂ ಕಲಾವಿದರ ಸಂಘ ಮಾತನಾಡಿಲ್ಲ .ಕನ್ನಡ ಚಿತ್ರರಂಗದಲ್ಲಿ ಕಲಾವಿದರ ಸಂಘ ಇದ್ಯಾ ಅನ್ನೋ ತರ, ಈ ಪ್ರಕರಣಕ್ಕೂ ನಮಗೂ ಸಂಭದವೇ ಇಲ್ಲ ಅನ್ನೋ ಹಾಗೆ ಕಣ್ಣಿಗೆ ಬಟ್ಟೆ ಕಟ್ಟಿಕೋಡು, ಕಿವಿ ಮುಚ್ಚಿಕೊಂಡು ಬಾಯಿಗೆ ಬೀಗ ಹಾಕಿದವರಂತೆ ಆಗಿತ್ತು ಕಲಾವಿದರ ಸಂಘ. ಈಗ ಸಡನ್ ಆಗಿ ಕಲಾವಿದರ ಸಂಘದಲ್ಲಿ ಸದ್ದಿಲ್ಲದೆ ಬೆಳವಣಿಗೆಯೊಂದು ಆಗಿದೆ. 

ಅಂಬಿ ನಿಧನದ ನಂತ್ರ ಮೂಲೆ ಸೇರಿದ್ದ ಕಲಾವಿದರ ಸಂಘ ಸಡನ್ ಆಗಿ ಚಿತ್ರರಂಗದ ಬಗ್ಗೆ ಚಿಂತಿಸಿ ಬಿಟ್ಟಿದೆ. ಅಲ್ಲದೆ ಚಿತ್ರರಂಗದ ಉಳಿವಿಗಾಗಿ ಹೋಮ ಹವನ ಮಾಡಿಸಿ, ವಿಶೇಷ ಪೂಜೆ ಪುನಸ್ಕಾರ ಮಾಡಲು ಶಾಸ್ತ್ರ ನೋಡಿ ಮುಹೂರ್ತ ಇಟ್ಟಿದ್ದಾರೆ. ಇದೇ ಆಗಸ್ಟ್ 14ರಂದು ಕಲಾವಿದರ ಸಂಘ ದಲ್ಲಿ  ವಿಶೇಷ ಪೂಜೆ ಹೋಮ ಹವನ ನಡೆಡಯಲಿದೆ. ಕಲಾವಿಧರ ಸಂಘದ ಹೋಮ ಹವನಕ್ಕೆ ನಿರ್ಮಾಪಕ ದರ್ಶನ್ ಆಪ್ತ  ರಾಕ್ ಲೈನ್ ವೆಂಕಟೇಶ್ ಹಾಗು ದೊಡ್ಡಣ್ಣ ಸೂತ್ರಧಾರಿಗಳು. ಈ ಪೂಜೆಗೆ ಕಾರಣ ಕೇಳಿದ್ರೆ ಚಿತ್ರರಂಗದ ಒಳಿತಿಗೆ ಅನ್ನೋ ಉತ್ತರ ಕಲಾವಿದರ ಸಂಘದ ಕಾಂಪೌಡ್ ನಲ್ಲಿ ಕೇಳಿ ಬರ್ತಿದೆ. 

ಆ ಭಾಗ ಕಾಣುವಂತೆಯೇ ಬೋಲ್ಡ್ ಪೋಸ್ ಕೊಟ್ಟ ತುಪ್ಪದ ಬೆಡಗಿ ರಾಗಿಣಿ: ತುಂಬಾ ಕಷ್ಟ ಆಯ್ತಲ್ವಾ ಎಂದ ಫ್ಯಾನ್ಸ್!

ಕಲಾವಿದರ ಸಂಘದಲ್ಲಿ ಆಗಲಿರುವ ಪೂಜೆ ಚಿತ್ರರಂಗಕ್ಕಾಗಿ ಅಲ್ಲಾ. ಕೊಲೆ ಅರೋಪಿ ದರ್ಶನ್ ಅರೋಪ ಮುಕ್ತನಾಗಿ ಹೊರ ಬರಲಿ ಅಂತ ಮಾಡ್ತಿದ್ದಾರೆ ಅನ್ನೋ ಗುಸು ಗುಸು ಈಗ ಗಾಂಧಿನಗರದಲ್ಲಿ ಎದ್ದಿದೆ. ಈ ವಿಶೇಷ ಪೂಜೆಗೆ ಎಲ್ಲಾ ಕಲಾವಿದರಿಗೂ ಆಹ್ವಾನಕೊಡಲಾಗಿದೆ. ಸರೋಜಾ ದೇವಿ, ಸಾಹುಕಾರ್ ಜಾನಕಿ ಸೇರಿದಂತೆ ಹಿರಿಯ ಕಲಾವಿದರಷ್ಟೇ ಅಲ್ಲಾ ಲೀಡಿಂಗ್ ಹೀರೋಗಳಾದ ಯಶ್, ಸುದೀಪ್, ಉಪೇಂದ್ರ, ರವಿ ಚಂದ್ರನ್ ಸೇರಿದಂತೆ ಎಲ್ಲಾ ಕಲಾವಿದರಿಗೂ ಆಹ್ವಾನ ತಲುಪಿದೆ. ಇವರೆಲ್ಲಾ  ಆಗಷ್ಟ್ 14. ಕ್ಕೆ ಕಲಾವಿದರ ಸಂಘದ ಸೂರಿನಡಿ ಕಾಣಿಸ್ತಾರೆ ಅನ್ನೋದು ತಿಳಿದು ಬಂದಿದೆ.

click me!