ಟಾಕ್ಸಿಕ್ ಶೂಟಿಂಗ್ ಶುರುವಾಯ್ತು: ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಯಶ್ ​ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದೇಕೆ?

By Govindaraj S  |  First Published Aug 9, 2024, 6:37 PM IST

ರಾಕಿಂಗ್ ಸ್ಟಾರ್ ಯಶ್​​ ಮತ್ತೆ ಮುಖಕ್ಕೆ ಬಣ್ಣ ಹಚ್ಚೋದು ಯಾವಾಗ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಎರಡುವರೆ ವರ್ಷದ ಬಳಿಕ ಅಂತೂ ಇಂತೂ ಯಶ್ ಟಾಕ್ಸಿಕ್​​​ಗಾಗಿ​ ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. 


ರಾಕಿಂಗ್ ಸ್ಟಾರ್​ ಯಶ್​ ಲಕ್ಕಿ ನಂಬರ್​ 8. ಟಾಕ್ಸಿಕ್​​ ಗುಟ್ಟು ಎಂಟರಲ್ಲಿ ಉಂಟು ಅಂತ ನಾವೇ ನಿಮ್ಗೆ ಹೇಳಿದ್ವಿ. ಯಶ್​ ಹುಟ್ಟಿದ ದಿನಾಂಕ 8. ಈಗ ಟಾಕ್ಸಿಕ್​​ ಸಿನಿಮಾ ಮಹೂರ್ತ ಕೂಡ ಎಂಟನೇ ತಾರೀಖಿನಂದೇ ಆಗಿದೆ. ಈ ಮಹೂರ್ತಕ್ಕೆ ಯಶ್​ ಸ್ಪೆಷಲ್​ ಗೆಸ್ಟ್​​ ಒಬ್ಬರನ್ನ ಕರೆಸಿ ಅವರಿಂದಲೇ ಟಾಕ್ಸಿಕ್ ಫಸ್ಟ್​ ಶಾಟ್​​​​ಗೆ ಕ್ಲ್ಯಾಪ್​ ಮಾಡಿಸಿದ್ದಾರೆ. ಹಾಗಾದ್ರೆ ಟಾಕ್ಸಿಕ್​ ಬಿಗ್​ ಎಕ್ಸ್​​ಕ್ಲ್ಯೂಸೀವ್ ವಿಚಾರ ಏನು..? ನೋಡೋಣ ಬನ್ನಿ. ರಾಕಿಂಗ್ ಸ್ಟಾರ್ ಯಶ್​​ ಮತ್ತೆ ಮುಖಕ್ಕೆ ಬಣ್ಣ ಹಚ್ಚೋದು ಯಾವಾಗ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಎರಡುವರೆ ವರ್ಷದ ಬಳಿಕ ಅಂತೂ ಇಂತೂ ಯಶ್ ಟಾಕ್ಸಿಕ್​​​ಗಾಗಿ​ ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. 

ಆಗಸ್ಟ್​ 8 ರಿಂದ ಟಾಕ್ಸಿಕ್ ಚಿತ್ರೀಕರಣ ಆರಂಭ ಆಗುತ್ತೆ ಅಂತ ಸಿನಿಮಾ ಹಂಗಾಮದಲ್ಲಿ ಎಕ್ಸ್​ಕ್ಲ್ಯೂಸೀವ್ ಸುದ್ದಿ ಬ್ರೇಕ್ ಮಾಡಿದ್ವಿ. ಈಗ ರಾಕಿಂಗ್ ಸ್ಟಾರ್​ ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. ಕೆಜಿಎಫ್ ಕಿಂಗ್ ರಾಕಿ ಭಾಯ್ ಟಾಕ್ಸಿಕ್ ಶೂಟಿಂಗ್ ಶುರು ಮಾಡಿ ತಿಂಗಳು ಕಳೆದಿದೆ ಅಂತ ಅಂತೆ ಕಂತೆಗಳ ಸುದ್ದಿ ವೈರಲ್ ಆಗಿತ್ತು. ಆದ್ರೆ ಅದೆಲ್ಲಾ ಸುಳ್ಳು ಅಂತ ನಾವೇ ಹೇಳಿದ್ವಿ. ಈಗ ಯಶ್​ ಟಾಕ್ಸಿಕ್ ಶೂಟಿಂಗ್ ಅಧಿಕೃತವಾಗಿದೆ ಆರಂಭ ಆಗಿದೆ. ಇಂದು ಬೆಳಗಿನ ಜಾವ ಬ್ರಾಹ್ಮಿ ಮಹೂರ್ಥದಲ್ಲಿ ಟಾಕ್ಸಿಕ್​​ಗೆ ಮಹೂರ್ಥ ಮಾಡಲಾಗಿದೆ. ಯಶ್​​​ ಸಿನಿಮಾ ಮಹೂರ್ಥ ಅಂದ್ರೆ ಸುಮ್ಮನೆ ಅಲ್ಲ. ಸ್ಪೆಷಲ್ ಗೆಸ್ಟ್​​​​​ ಅಲ್ಲಿರಲೇ ಬೇಕು. 

Tap to resize

Latest Videos

ಪ್ರಭಾಸ್​ರ ಸಲಾರ್​ ಮಹೂರ್ಥಕ್ಕೆ ಯಶ್​ ಹೋಗಿದ್ರು. ಅದೇ ತೀರಿ ಟಾಕ್ಸಿಕ್​ ಮಹೂರ್ತಕ್ಕೆ ದೊಡ್ಡ ಗೆಸ್ಟ್​ ಅನ್ನ ಯಶ್ ಕರೆಸುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಯಶ್ ನಿಜಕ್ಕು ಸ್ಪೆಷಲ್​ ಗೆಸ್ಟ್​ಅನ್ನೇ ತನ್ನ ಸಿನಿಮಾ ಶೂಟಿಂಗ್​ನ ಮೊದಲ ದೃಶ್ಯದ ಕ್ಲ್ಯಾಪ್​​ಗೆ ಕರೆಸಿದ್ರು. ಅವರೇ ಯಶ್​​ರ ನೆಚ್ಚಿನ ಸೆಟ್​ಬಾಯ್​. ರಾಕಿಯ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ಸೆಟ್​ ಬಾಯ್​​​ ಕೈಯಲ್ಲಿ ಯಶ್ ಇಂದು ತಮ್ಮ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಚಿತ್ರದ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿದ್ದಾರೆ. ಈ ಮೂಲಕ ಸಿನಿ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ. 

ಸೆಂಟ್ರಲ್ ಜೈಲ್ ಸೆಲೆಬ್ರಿಟಿ ದರ್ಶನ್ಗೆ ಶಾಕ್ ಮೇಲೆ ಶಾಕ್: ಮನೆ ಊಟ ಮಾಡುವ ನಟನ ಆಸೆಗೆ ತಣ್ಣೀರು!

ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ವಾರ ಭಾಕಿ ಇದೆ. ಯಶ್​ ಫ್ಯಾನ್ಸ್​ ಟಾಕ್ಸಿಕ್ ಮಹೂರ್ಥ ಶೂಟಿಂಗ್ ಶುರುವಾದ ಸುದ್ದಿ ಕೇಳಿ ಹಬ್ಬ ಮಾಡುತ್ತಿದ್ದಾರೆ.  ಬೆಂಗಳೂರಿನ ಎಚ್ ಎಮ್ ಟಿ ಫ್ಯಾಕ್ಟರಿಯಲ್ಲಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ  ಮುಹೂರ್ತ ಆಗಿದ್ದು ಚಿತ್ರೀಕರಣ ಆರಂಭ ಆಗಿದೆ. ಇಂದಿನಿಂದಲೇ ಯಶ್​ ಚಿತ್ರೀಕರಣಕ್ಕೆ ಹಾಜರ್​ ಆಗಿದ್ದಾರೆ. ಗೀತು ಮೋಹಮ್ ದಾಸ್ ನಿರ್ದೇಶನದಲ್ಲಿ KVN Productionsನ ಕೆ. ವೆಂಕಟ್ ನಾರಾಯಣ ಹಾಗು ಯಶ್​ ಜಂಟಿಯಾಗಿ ಟಾಕ್ಸಿಕ್​ ಆರಂಭಿಸುತ್ತಿದ್ದಾರೆ. ಬ್ರೇಕ್​ ಇಲ್ಲದೇ ಚಿತ್ರೀಕರಣ ನಡೆಯಲಿದ್ದು, ಮುಂದಿನ ವರ್ಷ ಟಾಕ್ಸಿಕ್ ರಿಲೀಸ್ ಕನ್ಫರ್ಮ್​ ಎನ್ನಲಾಗುತ್ತಿದೆ. 

click me!