
ಯಶ್ (Yash) ನಟನೆಯ ಟಾಕ್ಸಿಕ್ (Toxic) ಸಿನಿಮಾದ 'ಲೇಡಿಸ್ & ಲೇಡಿಸ್' (Ladies & Ladies) ಸ್ಪೆಷಲ್ ಟೀಸರ್ ಬಿಡುಗಡೆ ಆಗಿದ್ದು, ಇಡೀ ಜಗತ್ತಿನಾದ್ಯಂತ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಇಂದು ಬಿಡುಗಡೆಯಾದ 'ಲೇಡಿಸ್ & ಲೇಡಿಸ್' ಟೀಸರ್ ಟಾಕ್ಸಿಕ್ ಚಿತ್ರದ ಎಲ್ಲಾ ನಾಯಕಿಯರ ಪಾತ್ರ ಪರಿಚಯ ಮಾಡಿಸಿ, ಹೊಸತನದ ಜೊತೆಗೆ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಅದರಲ್ಲೂ ಮುಖ್ಯವಾಗಿ ಕನ್ನಡತಿ, 'ಕಾಂತಾರ' ಖ್ಯಾತಿಯ ಚೆಲುವೆ ರುಕ್ಮಿಣಿ ವಸಂತ್ (Rukmini Vasanth) ಅವರ ಪಾತ್ರ 'ರೆಬೆಲ್' ಆಗಿದೆ ಎಂಬ ಅಂಶ ಕಾಣಿಸುತ್ತಿದೆ.
ಹಾಗಂತ ಟೀಸರ್ ನೋಡಿಯೇ ಎಲ್ಲವನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಸಿನಿಮಾ ಕಥೆ ಚಿತ್ರತಂಡಕ್ಕೆ ಗೊತ್ತು, ಆದರೆ ನಮಗೇನು ಗೊತ್ತು? ರುಕ್ಮಿಣಿ ವಸಂತ್ ಪಾತ್ರದ ಹೆಸರು 'ಮೆಲಿಸಾ' ಅನ್ನೋ ರೆಬೆಲ್ ಲೇಡಿ ರೋಲ್ ಎಂಬುದು ಇಂದು ರಿಲೀಸ್ ಆಗಿರೋ ಟೀಸರ್ ಮೂಲಕ ಜಗಜ್ಜಾಹೀರಾಗಿದೆ. ಇಲ್ಲಿಯವರೆಗೆ ಆಲ್‌ಮೋಸ್ಟ್ ಲವರ್ ಲೇಡಿಯಾಗಿ ಸಾಫ್ಟ್ ಪಾತ್ರ ಮಾಡಿರೋ ರುಕ್ಮಿಣಿ ವಸಂತ್, ತಮ್ಮ ಕೈನಲ್ಲಿ ಗನ್ ಹಿಡಿದಿರೋದನ್ನು ನೋಡಿಯೇ ಹಲವರು ಶಾಕ್ ಆಗಿದ್ದಾರೆ. ಕನ್ನಡದ ಹುಡುಗಿ ಹಾಲಿವುಡ್ ರೇಂಜ್‌ನಲ್ಲಿ ಹೀಗೆ ಆಕ್ಷನ್ ಸೀನ್ ನಿಭಾಯಿಸೋಕೆ ಸಾಧ್ಯಾನಾ ಅಂತ ಅದೆಷ್ಟೋ ಜನರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ನಟಿ ರುಕ್ಮಿಣಿ ವಸಂತ್ ಅವರ ಬಗ್ಗೆ ಒಂದು ಮಾತು ಓಡಾಡುತ್ತಿದೆ. ಅದೊಂಥರಾ ಸಖತ್ ವೈರಲ್ ಹೇಳಿಕೆ ಕೂಡ. 'ರುಕ್ಮಿಣಿಗೆ ಯಾವ ಸಿನಿಮಾದಲ್ಲೂ ಹೀರೋ ಸಿಗೋದಿಲ್ಲ' ಎಂಬುದು. 'ಸಪ್ತ ಸಾಗರದಾಚೆ ಎಲ್ಲೋ' ಸೇರಿದಂತೆ, ಕಾಂತಾರದಲ್ಲಿ ಕೂಡ ರುಕ್ಮೀಣಿ ಮಾಡಿರೋ ಪಾತ್ರಕ್ಕೆ ನಾಯಕ ಸೀಗೋದೇ ಇಲ್ಲ. ಇಲ್ಲಿಯವರೆಗೂ ಅಂತಹ ಪಾತ್ರಗಳೇ ಅವರನ್ನು ಹುಡುಕಿಕೊಂಡು ಬಂದಿರೋದು ಅಚ್ಚರಿ ಎನ್ನಿಸಿದರೂ ಸತ್ಯ. ಆದರೆ ಹೀಗ್ಯಾಕೆ?
ಶಾಕಿಂಗ್ ಎಂಬಂತೆ, ನಟಿ ರುಕ್ಮಿಣಿ ವಸಂತ್ ಅವರಿಗೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದಲ್ಲಿ ತೀರಾ ವಿಭಿನ್ನ ಎಂಬಂತೆ ರೆಬೆಲ್ ಲೇಡಿ ರೋಲ್ ಸಿಕ್ಕಿದೆ. ಇಡೀ ಸಿನಿಮಾದಲ್ಲೇ ಅವರಿಗೆ ಅಂತಹ ಪಾತ್ರವೋ ಅಥವಾ ಅದು ಒಂದು ಸೀನ್ ಅಷ್ಟೇನಾ? ಅಥವಾ ಅದೊಂದು ಆಯಾಮವೋ ಎಂಬುದು ಸಿನಿಮಾ ತೆರೆಗೆ ಬಂದಮೇಲೆಯೇ ಗೊತ್ತಾಗಬೇಕು. ಟೀಸರ್ ನೋಡಿ ಸಿನಿಮಾದ ಕಥೆ ಊಹಿಸುವುದು ಅಥವಾ ಹೇಳೋದು ಮೂರ್ಖತನವಾದೀತು!
ತಮಾಷೆ ಎನ್ನಿಸಿದರೂ ಸತ್ಯ ಸಂಗತಿ ಏನೆಂದರೆ, ಈಗ ರುಕ್ಮಿಣಿ ವಸಂತ್ ಬಗ್ಗೆ ಹೊಸ ವರಸೆ, ಹೊಸ ಹೇಳಿಕೆ ಹುಟ್ಟಿಕೊಂಡರೂ ಅಚ್ಚರಿಯಿಲ್ಲ. ಅದೇನು ಗೊತ್ತಾ? 'ಮಾಡಿರೋ ಇಷ್ಟೂ ಸಿನಿಮಾಗಳಲ್ಲಿ ನಟಿ ರುಕ್ಮಿಣಿಗೆ ನಾಯಕ ಸಿಗಲಿಲ್ಲ, ಅದೇ ಕೋಪಕ್ಕೆ (Frustration) ಅವರು ಗನ್ ಹಿಡಿದುಬಿಟ್ಟಿದ್ದಾರಾ ಹೇಗೆ?'.. ಆದರೆ, ಸಿನಿಮಾದ ಕಥೆ, ಪಾತ್ರಕ್ಕೆ ತಕ್ಕಂತೆ ನಟಿ ಪಾತ್ರಪೋಷಣೆ ಮಾಡುವುದು ಅನಿವಾರ್ಯ ಎಂದಾದರೂ, ಈ ಸಿನಿಮಾದ ಪಾತ್ರ ಈ ನಟಿಗೆ ವಿಭಿನ್ನ ಆಗಿರೋದಂತೂ ಸತ್ಯ.
ಒಟ್ಟಿನಲ್ಲಿ, ಇಲ್ಲಿಯವರೆಗೆ ಯಾವುದೇ ಸಿನಿಮಾದಲ್ಲಿ ಹೀರೋ ಸಿಗದಿರುವ ಹೀರೋಯಿನ್ ನಟಿ ರುಕ್ಮಿಣಿಗೆ ಈ ಸಿನಿಮಾದಲ್ಲಿ ನಾಯಕ ಸಿಗ್ತಾರಾ? ಅದರಲ್ಲೂ ಕನ್ನಡದ ನಾಯಕಿಗೆ ಕನ್ನಡದ ನಾಯಕ ನಟನೇ ಮೊಟ್ಟಮೊದಲಬಾರಿಗೆ ಸಿಗ್ತಾರಾ? ಇದು ಸಿನಿಮಾ ತೆರೆಗೆ ಬರುವವರೆಗೂ ಚಿತ್ರತಂಡ ಬಿಟ್ಟು ಉಳಿದವರಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿಯುವುದು ಖಂಡಿತ.
ಅಂದಹಾಗೆ, ಇಂದಿನ ಟೀಸರ್ ಬಳಿಕ 'ಟಾಕ್ಸಿಕ್' ಸಿನಿಮಾದ ಕ್ರೇಜ್ ಮತ್ತಷ್ಟು ಮಗದಷ್ಟು ಹೆಚ್ಚಾಗಿದೆ. ಟೀಸರ್‌ನಲ್ಲಿರೋ ಕೆಲವು ಡೈಲಾಗ್‌ಗಳು ಜಗತ್ತಿನೆಲ್ಲೆಡೆ ವೈರಲ್ ಆಗುತ್ತಿದ್ದು, ಹೊಸ ಅಲೆ ಸೃಷ್ಟಿಸುತ್ತಿದೆ. ಜೊತೆಗೆ, ನಿರೀಕ್ಷೆ ಮುಗಿಲುಮುಟ್ಟುತ್ತಿದೆ. ಏನೇ ಅಂದರೂ ಸದ್ಯಕ್ಕೆ, ಮೂಡುತ್ತಿರುವ ಪ್ರಶ್ನೆ- 'ರುಕ್ಮಿಣಿ ವಸಂತ್'ಗೆ ಈ ಸಿನಿಮಾದಲ್ಲಾದ್ರೂ ಹೀರೋ ಸಿಗ್ತಾರಾ?' ನಿಮ್ಮ ಉತ್ತರವನ್ನು ಕಾಮೆಂಟ್ ಮೂಲಕ ತಿಳಿಸಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.