ವಿಜಯ್‌ ರಾಘವೇಂದ್ರಗೆ 2ನೇ ಮದುವೆ ಮಾಡಲು ಆ ನಟಿಯರ ಮನೆಯವ್ರು ಮುಂದಾದ್ರಾ? ವೈರಲ್‌ ಪೋಸ್ಟ್‌ ಸತ್ಯ ಬೇರೆ ಇದೆ!

Published : Apr 13, 2026, 11:06 PM IST
actor vijay raghavendra wife spandana

ಸಾರಾಂಶ

Actor Vijay Raghavendra: ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಏನೇನೋ ವಿಚಾರಗಳು ಹರಿದಾಡುತ್ತಿರುತ್ತವೆ. ಲೈಕ್ಸ್‌, ಕಾಮೆಂಟ್ಸ್‌ಗೋಸ್ಕರ ಸತ್ಯಕ್ಕೆ ದೂರವಾದ ವಿಚಾರಗಳು ಪೋಸ್ಟ್‌ ಆಗುತ್ತಿರುತ್ತವೆ. ಈಗ ವಿಜಯ್‌ ರಾಘವೇಂದ್ರ ಎರಡನೇ ಮದುವೆ ವಿಚಾರದ ಬಗ್ಗೆ ಕೂಡ ಒಂದು ಪೋಸ್ಟ್‌ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು? 

ಕನ್ನಡ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅವರು ವಿದೇಶಿ ಪ್ರವಾಸಕ್ಕೆ ಹೋದಾಗ ರಾತ್ರಿ ನಿದ್ದೆ ಮಾಡಿದ್ದವರು ಬೆಳಗ್ಗೆ ಎದ್ದೇ ಇಲ್ಲ. ಲೋ ಬಿಪಿಯಿಂದಲೋ, ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಇವರು ನಿಧನರಾಗಿ ಎರಡು ವರ್ಷಗಳಾಗಿವೆ.

ಎರಡನೇ ಮದುವೆ ಆಗ್ತಾರಾ?

ಸ್ಪಂದನಾ ನಿಧನರಾಗಿ ಎತಡು ವರ್ಷಗಳು ಆಗಿವೆ. ಇವರ ನಿಧನದ ಬಳಿಕ ವಿಜಯ್‌ ಎರಡನೇ ಮದುವೆ ಆಗ್ತಾರಾ? ಇಲ್ಲವಾ ಎಂಬ ಪ್ರಶ್ನೆ ಬರುತ್ತಲೇ ಇದೆ. ಅಂದಹಾಗೆ ಕೆಲ ನಟಿಯರ ಜೊತೆ ವಿಜಯ್‌ ರಾಘವೇಂದ್ರ ಹೆಸರು ಥಳುಕು ಹಾಕಿಕೊಂಡಿತ್ತು.

ಆ ರೀತಿ ಹೇಳಿಲ್ಲ

ನಟ ವಿಜಯ್‌ ರಾಘವೇಂದ್ರ ಅವರು ಕೂಡ ಸಾಕಷ್ಟು ಈ ಬಗ್ಗೆ ಮಾತನಾಡಿದ್ದರು. ಅವರಿಗೆ ಎರಡನೇ ಮದುವೆ ಬಗ್ಗೆ ಆಗಾಗ ಪ್ರಶ್ನೆ ಬರುತ್ತಲೇ ಇರುತ್ತದೆ. ಎರಡನೇ ಮದುವೆಯಲ್ಲಿ ಆಸಕ್ತಿ ಇದೆ ಎಂದು ಅವರು ಎಂದಿಗೂ ಹೇಳಿಯೇ ಇಲ್ಲ.

ಪಾಡ್‌ಕಾಸ್ಟ್‌ನಲ್ಲಿ ವಿಜಯ್‌ ಹೇಳಿದ್ದೇನು?

ಅಂದಹಾಗೆ ಕೆಲ ತಿಂಗಳುಗಳ ಹಿಂದೆ ವಿಜಯ್‌ ರಾಘವೇಂದ್ರ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಯುಟ್ಯೂಬ್‌ ಚಾನೆಲ್‌ ಪಾಡ್‌ಕಾಸ್ಟ್‌ನಲ್ಲಿ ಹೆಂಡ್ತಿಯನ್ನು ಕಳೆದುಕೊಂಡಿದ್ದು, ಹೆಂಡ್ತಿ ಇಲ್ಲದ ಜೀವನವನ್ನು ಮಾತನಾಡಿದ್ದಾರೆ.

ಪೇಜ್‌ನಲ್ಲಿ ಏನಿತ್ತು?

ಆದರೆ ಕೆಲ ಪೇಜ್‌ಗಳು ವಿಜಯ್‌ ರಾಘವೇಂದ್ರ ಅವರನ್ನು ಮದುವೆ ಆಗೋಕೆ ಇಬ್ಬರು ನಟಿಯರು ಕಾಂಟ್ಯಾಕ್ಟ್‌ ಮಾಡಿಲ್ಲ, ಅವರ ಪೋಷಕರು ಕಾಂಟ್ಯಾಕ್ಟ್‌ ಮಾಡಿದ್ದರು ಎಂದು ಹೇಳಿಕೆ ಇರುವ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಿವೆ. ಮೇಘನಾ ರಾಜ್‌, ರಚಿತಾ ರಾಮ್‌ ಕಡೆಯಿಂದ ಆಫರ್‌ ಬಂದಿದೆ, ಆದರೆ ವಿಜಯ್‌ ಒಪ್ಪಿಲ್ಲ ಎನ್ನಲಾಗಿದೆ.

ಶುದ್ಧ ಸುಳ್ಳು

ಆದರೆ ಇದೆಲ್ಲವೂ ಶುದ್ಧ ಸುಳ್ಳು. ಲೈಕ್ಸ್‌, ಕಾಮೆಂಟ್‌, ವ್ಯೂಸ್‌ಗೋಸ್ಕರ ಈ ರೀತಿ ಪೋಸ್ಟ್‌ಗಳನ್ನೆಲ್ಲ ಶೇರ್‌ ಮಾಡಲಾಗುತ್ತಿದೆ. ಇದೆಲ್ಲವೂ ಶುದ್ಧ ಸುಳ್ಳು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪಾಡ್‌ಕಾಸ್ಟ್‌ನಲ್ಲಿರುವ ವಿಜಯ್‌ ರಾಘವೇಂದ್ರರ ಫೋಟೋವನ್ನು ಬಳಸಿ ಈ ರೀತಿ ಪೋಸ್ಟ್‌ ಮಾಡಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡದ ಈ ಮೇರನಟರು 'ಸ್ತ್ರೀ' ಪಾತ್ರದಲ್ಲಿ ನಟಿಸಿದ್ದಾರೆ; ಯಾವ ಚಿತ್ರದಲ್ಲಿ ಯಾರು ನೋಡಿ!
ವಿದೇಶಕ್ಕೆ ಹೋಗಿ ನೆಲೆಸಿರುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ನಟಿಯರಿವರು; ಯಾರು ಎಲ್ಲಿದ್ದಾರೆ ನೋಡಿ!