
ಕೆಜಿಎಫ್ ಸ್ಟಾರ್ ಯಶ್ (Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಬಹುನಿರೀಕ್ಷಿತ ಕೊತ್ತಲವಾಡಿ ಚಿತ್ರ ಕೊನೆಗೂ ಆಗಸ್ಟ್1ರಂದು ತೆರೆ ಕಂಡಿದ್ದು, ಬಾಕ್ಸ್ ಆಫೀಸ್ ನಿರೀಕ್ಷೆಗಳನ್ನು ತಲುಪುವಲ್ಲಿ ಹಿನ್ನೆಡೆ ಕಂಡಿದೆ ಎಂದು ಹೇಳಲಾಗುತ್ತಿದೆ. ಯಶ್ ಅವರ ಅಮ್ಮನಾಗಿರುವ ಕಾರಣ, ಜನರು ಸಹಜವಾಗಿ ಚಿತ್ರಮಂದಿರಕ್ಕೆ ಬರುತ್ತಾರೆ ಎಂದುಕೊಳ್ಳಲಾಗಿತ್ತು. 'ಕೊತ್ತಲವಾಡಿ' ಬಿಡುಗಡೆಗೂ ಮುನ್ನ ಕ್ರೇಜ್ ಕ್ರಿಯೇಟ್ ಮಾಡಿತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಸಕ್ಸಸ್ ಕಂಡಿಲ್ಲ ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ, ಇಂಡಿಯಾ ನೆಟ್ ಕಲೆಕ್ಷನ್ 15 ಲಕ್ಷ ರೂಪಾಯಿ ಆಗಿದ್ದು, ವಿಶ್ವಾದ್ಯಂತ ಒಟ್ಟು 16 ಲಕ್ಷ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ.
ಇದರ ನಡುವೆಯೇ, ಪುಷ್ಪ ಅರುಣ್ ಕುಮಾರ್ (Pushpa Arun kumar) ಅವರು ನೀಡಿರುವ ಸಂದರ್ಶನಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಲೇ ಇವೆ. ಇದೀಗ ತಮ್ಮ ಮನೆಯವರ ಬಗ್ಗೆ ಮಾತನಾಡುತ್ತಿರುವ ಜನರ ಬಗ್ಗೆ ಯಶ್ ಅಮ್ಮ ಸಕತ್ ಗರಂಗೊಂಡಿದ್ದು, ಬಾಯಿಮುಚ್ಚಿಕೊಂಡು ಇರೋಕೆ ಹೇಳಿ ಅವರಿಗೆ. ನಮ್ಮ ಮನೆಯವರನ್ನು ಹೇಗೆ ನೋಡಿಕೊಳ್ಳಬೇಕು ಎನ್ನೋದು ನಮಗೆ ಗೊತ್ತು. ಅವರಿಂದ ಕೇಳಿ ತಿಳಿದುಕೊಳ್ಳಬೇಕಿಲ್ಲ. ಅವರ ಮನೆಯಲ್ಲಿ ಬಾಯಿ ಮುಚ್ಚಿಕೊಂಡು ಬಿದ್ದಿರೋಕೆ ಹೇಳಿ ಎಂದು ಹೇಳಿದ್ದಾರೆ.
ಯಶ್ ಏನು ಸಾಮಾನ್ಯದವನಲ್ಲ…
ಎಫ್ಡಿಎಫ್ಸಿ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಪುಷ್ಪಾ ಅವರು ಸಕತ್ ಗರಂ ಆಗಿರೋದನ್ನು ನೋಡಬಹುದು. ಯಶ್ ಇಷ್ಟೊಂದು ದುಡ್ಡು ಹಾಕ್ತಿದ್ದಾರೆ, ಮಗನನ್ನು ಅಲ್ಲಿ ಬಿಟ್ಟಿದ್ದಾರೆ ಎಂದು ಹೇಳ್ತಿರೋ ವಿರುದ್ಧ ಕಿಡಿ ಕಾರಿರೋ ಅವರು, ಯಶ್ ಸಾಮಾನ್ಯ ಸರ್ಕಾರಿ ನೌಕರ ಆಗಿ ರೋಡ್ನಲ್ಲಿ ಇದ್ದಿದ್ದರೆ ಈ ಮಾತು ಹೇಳಿದ್ರೆ ಸರಿ. ಆದರೆ ಯಶ್ಗೆ ಇರೋ ಕ್ರೇಜ್ ಎಷ್ಟು ಎಂದು ಗೊತ್ತಲ್ಲ, ಒಂದು ಕಡೆ ಫಂಕ್ಷನ್ಗೆ ಹೋದ್ರೆ ಹತ್ತಾರು ಬಾಡಿಗಾರ್ಡ್ಗಳು ಬೇಕು, ಅಂಥ ಯಶ್ಗೆ ಕಡಿಮೆ ಬಜೆಟ್ನ ನನ್ನ ಸಿನಿಮಾದಲ್ಲಿ ಚಾನ್ಸ್ ಕೊಡಬೇಕು ಎಂದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಕೂಡ ಪುಷ್ಪಾ ಅವರು ಸಾಕಷ್ಟು ಕೋಪಗೊಂಡಿದ್ದರು. ಪ್ರಮೋಷನ್ ಸಮಯದಲ್ಲಿ, ಅವರಿಗೆ ಸಹಜವಾಗೇ ನಿಮ್ಮ ಮಗನಿಗೆ ಸಿನಿಮಾ ತೋರಿಸಿದ್ರಾ., ರಾಕಿಂಗ್ ಸ್ಟಾರ್ (Rocking Star) ನಿಮ್ಮ ಸಿನಿಮಾ ನೋಡಿ ಏನಂದ್ರು ಅನ್ನೋ ಪ್ರಶ್ನೆ ತೂರಿಬಂದಿತ್ತು. ಆಗ ಯಶ್ ತಾಯಿ ಮಾರ್ಮಿಕವಾದ ಉತ್ತರ ಕೊಟ್ಟಿದ್ದರು. ಯಶ್ ನೋಡಿದ ಮಾತ್ರಕ್ಕೆ ಸಿನಿಮಾ ಓಡಲ್ಲ...ಹಣ ಬರಲ್ಲ.. ಜನ ಬಂದು ನೋಡಿದ್ರೇನೆ ಸಿನಿಮಾ ಗೆಲ್ಲೋದು ಅಂದಿದ್ದಾರೆ. ಮಗನ ಅನಿಸಿಕೆ ಬೇಕಾಗಿಲ್ಲ. ಈ ಸಿನಿಮಾ ಮಾಡಿರೋದು ಜನಕ್ಕೆ ಅಂದಿದ್ದರು. ಅವರ ನಟನೆ ನಿರ್ಮಾಣದ ರಾಮಾಯಣದ ಬಗ್ಗೆ ನನಗೇನೂ ಕೇಳಬೇಡಿ ಅಂತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.