ಎಲ್ಲೂ ಹೋಗಿಲ್ಲ, ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೀನಿ; ಮುಂದಿನ ಸಿನಿಮಾ ಬಗ್ಗೆ ಯಶ್ ಇಂಟ್ರಸ್ಟಿಂಗ್ ಹೇಳಿಕೆ

Published : Jun 21, 2023, 01:23 PM ISTUpdated : Jun 23, 2023, 02:31 PM IST
ಎಲ್ಲೂ ಹೋಗಿಲ್ಲ, ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೀನಿ; ಮುಂದಿನ ಸಿನಿಮಾ ಬಗ್ಗೆ ಯಶ್ ಇಂಟ್ರಸ್ಟಿಂಗ್ ಹೇಳಿಕೆ

ಸಾರಾಂಶ

ನಾನು ಎಲ್ಲೂ ಹೋಗಿಲ್ಲ, ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೀನಿ, ಡೋಂಟ್ ವರಿ ಎಂದು ಯಶ್ ಮುಂದಿನ  ಸಿನಿಮಾ ಬಗ್ಗೆ ಇಂಟ್ರಸ್ಟಿಂಗ್ ಹೇಳಿಕೆ ನೀಡಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಜಿಎಫ್-2 ರಿಲೀಸ್ ಆಗಿ ವರ್ಷದ ಮೇಲಾಗಿದೆ. ಆದರೂ ಯಶ್ ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ. ಯಶ್ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾದ ಬಗ್ಗೆ ಅನೇಕ ಸುದ್ದಿಗಳು ಈಗಾಗಲೇ ವೈರಲ್ ಆಗಿವೆ. ಅವರ ಜೊತೆ ಸಿನಿಮಾ ಮಾಡುತ್ತಾರೆ, ಇವರ ಜೊತೆ ಸಿನಿಮಾ ಮಾಡ್ತಾರೆ ಎಂದು ಎನ್ನುವ ಅನೇಕ ಸುದ್ದಿ ಹರಿದಾಡುತ್ತಿವೆ. ಆದರೆ ಈ ಬಗ್ಗೆ ಯಶ್ ಕಡೆಯಿಂದ ಅಧಿಕೃತ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ಸ್ವತಃ ಯಶ್ ಮುಂದಿನ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. 

ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಕ್ಕಳ ಸಮೇತಾ ನಂಜನಗೂಡಿಗೆ ಹೋಗಿದ್ದರು.  ಶ್ರೀಕಂಠೇಶ್ವರನ ದರ್ಶನ ಪಡೆದು ದೇವರ ಆಶೀರ್ವಾದ ಪಡೆದುಕೊಂಡರು. ಶ್ರೀಕಂಠೇಶ್ವರ ದೇವರಿಗೆ ಯಶ್ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದರು. ಈ ವೇಳೆ ಮುಂದಿನ ಸಿನಿಮಾದ ಬಗ್ಗೆ ವಿವರಿಸಿದರು. 

'ಶ್ರೀಘ್ರದಲ್ಲೇ ಮುಂದಿನ ಚಿತ್ರ ಅನೌನ್ಸ್ ಮಾಡುವೆ. ದೇವರ ಸನ್ನಿದಿಯಲ್ಲಿ ಇದ್ದೀನಿ. ಸುಖಾ ಸುಮ್ಮನೆ ತೇಲಿಸುವ ಮಾತುಗಳನ್ನು ಆಡುವುದಿಲ್ಲ. ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಉಚಿತವಾಗಿ ಸಿನಿಮಾ ನೋಡುವುದಿಲ್ಲ. ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಸಿನಿಮಾ ಮಾಡಬೇಕು.ನಾನು ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ. ಸಿನಿಮಾಗಾಗಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಆದಷ್ಟು ಬೇಕು ಹೊಸ ಚಿತ್ರದ ಮಾಹಿತಿ ನೀಡುವೆ' ಎಂದು ಹೇಳಿದ್ದಾರೆ.

 RRR ಆಯ್ತು ಈಗ KGF ಸರದಿ: ಜಪಾನ್‌ನಲ್ಲಿ ರಿಲೀಸ್ ಆಗ್ತಿದೆ ಯಶ್ ಸಿನಿಮಾ, ಯಾವಾಗ?

ಇನ್ನೂ ಯಶ್ ಬಾಲಿವುಡ್‌ಗೆ ಹೋಗ್ತಾರೆ, ತೆಲುಗು ಹೋಗ್ತಾರೆ ಎನ್ನುವ ಸುದ್ದಿ ಸಹ ಕೇಳಿ ಬರುತ್ತಿತ್ತು. ಈ ಬಗ್ಗೆಯೂ ಯಶ್ ಮಾತನಾಡಿದ್ದಾರೆ. 'ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ. ನಾನು ಎಲ್ಲೂ ಹೋಗುವುದಿಲ್ಲ. ಡೋಂಟ್ ವರಿ' ಎಂದು ಯಶ್ ಹೇಳಿದ್ದಾರೆ. ಅಂದ್ಮೇಲೆ ಸದ್ಯದಲ್ಲೇ ಯಶ್ ಮುಂದಿನ ಸಿನಿಮಾ ಅನೌನ್ಸ್ ಆಗುವ ಸಾಧ್ಯತೆ ಇದೆ. 

ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಯಶ್ ಮಸ್ತಿ: ಹಾರ್ದಿಕ್‌, ಕ್ರುನಾಲ್ ಜೊತೆ ರಾಕಿಭಾಯ್ ಸಖತ್ ಡಾನ್ಸ್, ವಿಡಿಯೋ ವೈರಲ್

ಮೈಸೂರು ಪ್ರಸಾದ ಬಗ್ಗೆಯೂ ಯಶ್ ಮಾತನಾಡಿದ್ದಾರೆ.  'ಮೈಸೂರು ಭಾಗದ ಪ್ರವಾಸ ತುಂಬಾ ಚೆನ್ನಾಗಿ ಆಯ್ತು. ರಿಯಲ್ ಫಾರೆಸ್ಟ್‌ನಲ್ಲಿ ಮಕ್ಕಳಿಗೆ ಮೊದಲ ಪ್ರವಾಸ ಅನುಭವ. ಮಕ್ಕಳು ಕೂಡ ಸಫಾರಿ ಎಂಜಾಯ್ ಮಾಡಿದ್ರು. ಸಫಾರಿಯಲ್ಲಿ ಜಿಂಕೆ, ಕರಡಿ, ಆನೆ ಎಲ್ಲೂ ಕಂಡವು. ಹುಲಿಯೊಂದು ಸಿಗಲಿಲ್ಲ, ಬೇಜಾರಾಯ್ತು. ಇವತ್ತೂ ಸಫಾರಿ ಮಾಡಬೇಕಿತ್ತು, ಮಳೆ ಕಾರಣಕ್ಕೆ ಹೋಗಲಿಲ್ಲ.ಮುಂದೆ ಮತ್ತೆ ಸಫಾರಿ ಮಾಡಿ ನೋಡಿದ್ರಾಯ್ತು ಅಂತ ಬಂದೆವು' ಎಂದು ಹೇಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?