'ನಿಲ್ಲಲೇ ಬೇಕು ಎಲ್ಲ ದಿಮಾಕು' ಎಂದು ಫಹಾದ್ 'ಧೂಮಂ' ಬಗ್ಗೆ ಹೊಂಬಾಳೆ ಟ್ವೀಟ್: ಅನುಮಾಕ್ಕೆ ಬಿತ್ತು ತೆರೆ

Published : Jun 20, 2023, 12:33 PM IST
'ನಿಲ್ಲಲೇ ಬೇಕು ಎಲ್ಲ ದಿಮಾಕು' ಎಂದು ಫಹಾದ್ 'ಧೂಮಂ' ಬಗ್ಗೆ ಹೊಂಬಾಳೆ ಟ್ವೀಟ್: ಅನುಮಾಕ್ಕೆ ಬಿತ್ತು ತೆರೆ

ಸಾರಾಂಶ

'ನಿಲ್ಲಲೇ ಬೇಕು ಎಲ್ಲ ದಿಮಾಕು' ಎಂದು ಫಹಾದ್ 'ಧೂಮಂ' ಬಗ್ಗೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ ಈ ಮೂಲಕ ಕನ್ನಡ ಅಭಿಮಾನಿಗಳಲ್ಲಿದ್ದ ಅನುಮಾಕ್ಕೆ ತೆರೆ ಎಳೆದಿದ್ದಾರೆ.  

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಧೂಮಂ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಧೂಮಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಕುತೂಹಲ ಹೆಚ್ಚಿಸಿದೆ. ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ನಟನೆಯ ಧೂಮಂ ಸಿನಿಮಾ ಮಲಾಯಳಂನಲ್ಲಿ ಮಾತ್ರ ತೆರೆಗೆ ಬರುತ್ತೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ರಿವೀಲ್ ಮಾಡಿರಲಿಲ್ಲ. ಇದೀಗ ಧೂಮಂ ಸಿನಿಮಾ ಕನ್ನಡದಲ್ಲೂ ತೆರೆಗೆ ಬರುತ್ತೆ ಎಂದು ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿದೆ. ಟ್ವೀಟ್ ಮೂಲಕ ಕನ್ನಡ ಅಭಿಮಾನಿಗಳ ಅನುಮಾನಕ್ಕೆ ತೆರೆ ಎಳೆದಿದೆ.   

ಧೂಮಂ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಧೂಮಂ ಮೂಲ ಭಾಷೆ ಮಲಯಾಳಂ.ಆದರೆ ಕನ್ನಡದಲ್ಲೂ ಬರ್ತಿದೆ. ಈ ಬಗ್ಗೆ ಹೊಂಬಾಳ್ ಫಿಲ್ಮ್ಸ್ ಸ್ಪಷ್ಟನೆ ನೀಡಿದೆ. ಅಂದಹಾಗೆ ಧೂಮಂ ಸಿನಿಮಾ ಇದೇ ತಿಂಗಳು ಅಂದರೆ ಜೂನ್‌ನಲ್ಲಿ ತೆರೆಗೆ ಬರುತ್ತಿದೆ. ಜೂನ್ 23ಕ್ಕೆ ಧೂಮಂ ಚಿತ್ರ ರಿಲೀಸ್ ಆಗುತ್ತಿದೆ. ಮಲಾಯಳಂ ಜೊತೆಗೆ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿ, 'ನಿಲ್ಲಲೇ ಬೇಕು ಎಲ್ಲ ದಿಮಾಕು. ಕಾಲಪುರುಷನ ಕಾಲಿನ ಕೆಳಗೆ' ಎನ್ನುವ ಸಾಲನ್ನು ಹಂಚಿಕೊಂಡು ಈ ಬಗ್ಗೆ ರಿವೀಲ್ ಮಾಡಿದ್ದಾರೆ. 'ಧೂಮಂ ಕನ್ನಡದಲ್ಲಿ ಜೂನ್ 23 ರಂದು ರಾಜ್ಯದಾದ್ಯಂತ  ಬಿಡುಗಡೆ' ಎಂದು ಟ್ವೀಟ್ ಮಾಡಿದೆ.

 'ಧೂಮಂ' ಫಸ್ಟ್ ಲುಕ್ ರಿಲೀಸ್‌ ಡೇಟ್ ಅನೌನ್ಸ್ ಮಾಡಿದ ಹೊಂಬಾಳೆ: 'ಸಲಾರ್' ಅಪ್‌ಡೇಟ್‌ ಎಲ್ಲಿ ಎಂದ ಫ್ಯಾನ್ಸ್

‘ಧೂಮಂ’ ಸಿನಿಮಾಗೆ ಪವನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್  ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ರಿಲೀಸ್ ಆದ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಟ್ರೇಲರ್ ಮೂಡಿ ಬಂದಿದೆ. ಈ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗೋದು ವಿಳಂಬ ಆಗಲಿದೆ ಎನ್ನಲಾಗಿತ್ತು. ಆದರೆ, ಇದು ಸುಳ್ಳಾಗಿದೆ. ಜೂನ್ 23ರಂದು ಮಲಯಾಳಂ ಹಾಗೂ ಕನ್ನಡದಲ್ಲಿ  ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

ಕನ್ನಡ ಎಲ್ರೋ, ನಾಚಿಕೆ ಆಗ್ಬೇಕು: ಧೂಮಂ ಪೋಸ್ಟರ್‌‌ಗೆ ಕನ್ನಡಿಗರ ಅಸಮಾಧಾನ, ಹೊಂಬಾಳೆ ಫಿಲ್ಮ್ಸ್‌ಗೆ ತರಾಟೆ

ಧೂಮಂ ಸಿನಿಮಾ ಅತೀ ವೇಗವಾಗಿ ಶೂಟಿಂಗ್ ಮುಗಿಸಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಕೆಜಿಎಫ್ ಮತ್ತು ಕಾಂತಾರ ಸಕ್ಸಸ್‌ನಲ್ಲಿದೆ. ಇದೀಗ ಧೂಮಂ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ನೀಡಲು ಸಜ್ಜಾಗಿದ್ದಾರೆ. ಫಹಾದ್ ಕೂಡ ಬ್ಯಾಕು ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇದೀಗ ಧೂಮಂ ಮೂಲಕ ಮತ್ತೊಂದು ಸಕ್ಸಸ್‌ನ ನಿರೀಕ್ಷೆಯಲ್ಲಿದ್ದಾರೆ. ಫಹಾದ್ ಅವರನ್ನು ಕನ್ನಡದಲ್ಲಿ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!