
ಸೋಷಿಯಲ್ ಮೀಡಿಯಾ ಮೂಲಕ ಜನರ ಸಂಪರ್ಕಿಸುವ ಸೆಲೆಬ್ರಿಟಿಗಳಿಗೆ ದಿನೇ ದಿನೇ ಒಂದಲ್ಲಾ ಒಂದು ರೀತಿಯ ತೊಂದರೆ ಎದುರಾಗುತ್ತಿದೆ. ಒಮ್ಮೆ ಖಾತೆ ಹ್ಯಾಕ್ ಆದರೆ ಮತ್ತೊಮ್ಮೆ ಕೆಟ್ಟ ಕಮೆಂಟ್ ಮೂಲಕ ಮನಸ್ಥಿತಿ ಹಾಳು ಮಾಡುತ್ತಾರೆ ಅದೂ ಇಲ್ಲವಾದರೆ ವಾರಗಟ್ಟಲೆ ತಿಂಗಳುಗಟ್ಟಲೆ ಟ್ರೋಲ್ ಮಾಡುತ್ತಾರೆ.
ಪೋಟೋಗೆ ಪೋಸ್ ಕೊಡ್ಬೇಕಂದ್ರೆ ಬಸಣ್ಣಿ ತಾನ್ಯ ತೋರಿಸುತ್ತಾಳೆ ನೋಡಿ!
ಕೆಲ ದಿನಗಳ ಹಿಂದೆ 'ಚಿಂಗಾರಿ' ನಟಿ ದೀಪಿಕಾ ಕಾಮಯ್ಯ ಖಾತೆ, 'ವರದನಾಯಕ' ನಟಿ ವರಲಕ್ಷ್ಮಿ ಖಾತೆ ಹ್ಯಾಕ್ ಮಾಡಲಾಗಿತ್ತು ಈಗ 'ಯಜಮಾನ' ಚಿತ್ರದ ನಟಿ ತಾನ್ಯ ಹೋಪ್ ಇನ್‌ಸ್ಟಾ ಹ್ಯಾಕ್ ಮಾಡಿದ್ದಾರೆ. ಸದ್ಯ ತಾನ್ಯ ಕೆಲವೇ ಗಂಟೆಗಳಲ್ಲಿ ಖಾತೆಯನ್ನು ಹಿಂಪಡೆದಿದ್ದಾರೆ.
ಹ್ಯಾಗ್ ಆಗಿದ್ದು ಹೇಗೆ:
ಸೋಷಿಯಲ್ ಮೀಡಿಯಾದಲ್ಲಿ ಹ್ಯಾಕ್ ಮಾಡುವುದಕ್ಕೆಂದೇ ಕೆಲವರು ಇರುತ್ತಾರೆ. ಮಾಹಿತಿ ಪಡೆದುಕೊಳ್ಳಲು , ತಮಾಷೆಗೆಂದು ಹೀಗೆ ಹ್ಯಾಕ್ ಮಾಡುವುದುನ್ನು ತುಂಬಾನೇ ಕಾಮನ್ ಮಾಡಿಕೊಂಡಿದ್ದಾರೆ. ಡಿಸೆಂಬರ್ 11 ಸಂಜೆ ತಾನ್ಯಾ ಇನ್‌ಸ್ಟಾಗ್ರಾಂ ಹ್ಯಾಕ್ ಆಗಿದ್ದು ರಾತ್ರಿ ವಿದೇಶಿಯರು ಆಂಗ್ಲ ಭಾಷೆಯಲ್ಲಿ ಲೈವ್ ಚಾಟ್ ಮಾಡುತ್ತಿದ್ದರು. ತಾನ್ಯ ಅಭಿಮಾನಿಗಳು ಮಾಡುತ್ತಿದ್ದ ಕಮೆಂಟ್ ಲೈವ್‌ನಲ್ಲಿ ತೋರಿಸುತ್ತಿರಲಿಲ್ಲ. ಇನ್‌ಸ್ಟಾಗ್ರಾ ಟೆಕ್ನಿಕಲ್ ಟೀಂ ಸಂಪರ್ಕಿಸಿ ತಾನ್ಯ ಖಾತೆ ಹಿಂಪಡೆದಿದ್ದಾರೆ. ಆದರೆ ಅಭಿಮಾನಿಗಳು ಗಮನಿಸಿರುವ ಪ್ರಕಾರ ಕೆಲವೊಂದು ಫೋಟೊ ಹಾಗೂ ವಿಡಿಯೋಗಳು ಡಿಲೀಟ್ ಮಾಡಲಾಗಿದೆಯಂತೆ.
ಥಾಯ್ಲೆಂಡ್‌ನಲ್ಲಿ 'ಬಸಣ್ಣಿ ಬಾ..' ಎಂದು ಸೊಂಟ ತೋರಿಸಿದ್ದಾಳೆ 'ಯಜಮಾನನ' ನಟಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.