ಮೆಹೆಂದಿ ಶಾಸ್ತ್ರದಲ್ಲಿ ನಟಿ ಐಶಾನಿ ಶೆಟ್ಟಿ; ಹುಡುಗನ್ಯಾರು?

By Suvarna NewsFirst Published Dec 12, 2020, 11:26 AM IST
Highlights

'ವಾಸ್ತು ಪ್ರಕಾರ' ನಟಿ ಐಶಾನಿ ಮೆಹೆಂದಿ ಶಾಸ್ತ್ರದ ಫೋಟೋಗಳು ವೈರಲ್. ಯಾರ ಮದುವೆ ಎಂದು ತಿಳಿಯದ ಅಭಿಮಾನಿಗಳು ಕಂಗಾಲು...
 

'ಜೋತಿ ಅಲಿಯಾಸ್ ಕೋತಿ ರಾಜ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಐಶಾನಿ ಶೆಟ್ಟಿ 'ವಾಸ್ತು ಪ್ರಕಾರ' ಚಿತ್ರದ ಮೂಲಕ ಲೈಮ್‌ ಲೈಟ್‌ಗೆ ಬಂದರು. ಆ ನಂತರ ಆಯ್ಕೆ ಮಾಡಿಕೊಂಡ ಪ್ರತಿಯೊಂದು  ಚಿತ್ರವೂ ಸೂಪರ್ ಹಿಟ್ ಆಗಿದೆ. ಈ ನಡುವೆ ಐಶಾನಿ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಕೊಂಚ ಗೊಮದಲವುಂಟು ಮಾಡಿದ್ದಾರೆ.

ಕೊನೆಗೂ ಧೈರ್ಯ ಮಾಡಿ ತಾನೇ ಕೂದಲು ಕಟ್ ಮಾಡಿಕೊಂಡ ನಟಿ ಐಶಾನಿ ಶೆಟ್ಟಿ!

ಏನದು ಫೋಟೋ:

ಐಶಾನಿ ಕೆಲ ದಿನಗಳ ಹಿಂದೆ ಮೆಹೆಂದಿ ಶಾಸ್ತ್ರದಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಐಶಾನಿ ಮದುವೆಯಾಗುತ್ತಿದ್ದಾರೆ ಎಂದು ತಿಳಿದುಕೊಂಡಿದ್ದಾರೆ ಅಲ್ಲದೆ ಹುಡುಗ ಯಾರೆಂದು ಪ್ರಶ್ನಸಿದ್ದಾರೆ. ಆದರೆ ಫೋಟೋಗೆ ಕ್ಯಾಪ್ಶನ್ ಬರೆಯುವ ಮೂಲಕ ನಟಿ ಕ್ಲಾರಿಟಿ ನೀಡಿದ್ದಾರೆ.

 

ಐಶಾನಿ ಆಪ್ತ ಗೆಳತಿಯ ಮದುವೆ ಕಾರ್ಯಕ್ರಮದ ಫೋಟೋಗಳಿವು ಎಂದು ಹೇಳಿದ್ದಾರೆ. ಪ್ರತಿ ಫೋಟೋಗೂ #Bridesmaid ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ. ಪ್ರತಿ ಫೋಟೋದಲ್ಲೂ ಐಶಾನಿ ಸುಂದರವಾಗಿ ಕಂಗೊಳ್ಳಿಸುತ್ತಿದ್ದಾರೆ. 'ಪ್ಲೀಸ್‌ ನೀವು ಬೇಗ ಮದುವೆಯಾಗ ಬೇಡಿ ನೀವು ನಮ್ಮ ಕ್ರಶ್' ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. 

ಹೊಂದಿಸಿ ಬರೆಯಿರಿ ಎಂದ ರಾಕೆಟ್ ಹುಡುಗಿ! 

ಐಶಾನಿ ಸಿನಿಮಾ:

ಸದ್ಯಕ್ಕೆ ಐಶಾನಿ 'ಧರಣಿ ಮಂಡಲ ಮಧ್ಯದೊಳಗೆ' ಹಾಗೂ 'ಹೊಂದಿಸಿ ಬರೆಯಿರಿ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಗಿದ್ದಾರೆ. ಚಿತ್ರ ಹಾಗೂ ಚಿತ್ರೀಕರಣದ ಬಗ್ಗೆ ಅಪ್ಡೇಟ್‌ ನೀಡುತ್ತಲೇ ಇರುತ್ತಾರೆ.

 

click me!