ಫ್ಯಾನ್ಸ್‌ ಇರೋತನಕ ಪ್ಯಾನ್ ಇಂಡಿಯಾ ಸಿನಿಮಾ: ಉಪೇಂದ್ರ

By Kannadaprabha NewsFirst Published Dec 11, 2020, 3:10 PM IST
Highlights

ಇದು ರಿಯಲ್ ಸ್ಟಾರ್ ಉಪೇಂದ್ರ ಅವರ ನೇರ ಮಾತು. ಅವರ ಪ್ರಕಾರ ಅಭಿಮಾನಿಗಳು ಇಲ್ಲದೆ ಹೋದರೆ ಯಾವ ಪ್ಯಾನ್ ಇಲ್ಲ. ಸಿನಿಮಾ ಚೆನ್ನಾಗಿದ್ದರೆ, ಅಭಿಮಾನಿಗಳು ನೋಡಿದರೆ, ಪ್ರೇಕ್ಷಕರು ಮೆಚ್ಚಿದರೆ ಅದೇ ಪ್ಯಾನ್ ಇಂಡಿಯಾ ಆಗುತ್ತದೆ ಎನ್ನುವುದು ಉಪ್ಪಿ ಅವರ ಖಡಕ್ ನಿಲುವು. 

‘ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು’ ಎಂದು ಕೇಳಿದಾಗ, ‘ಪ್ಯಾನ್ ಇಂಡಿಯಾ ಎಂಬುದು ಈಗಿನದಲ್ಲ. ಆಗಲೇ ಇತ್ತು. ಆಗ ಒಳ್ಳೆಯ ಸಿನಿಮಾ, ಒಳ್ಳೆಯ ಕತೆ ಎನಿಸಿದರೆ ಅದನ್ನು ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡುತ್ತಿದ್ದರು. ಇಲ್ಲವೇ ರೀಮೇಕ್ ಮಾಡುತ್ತಿದ್ದರು. ಹೀಗೆ ಎಲ್ಲ ಭಾಷೆಯ ಜನರಿಗೆ ಸಿನಿಮಾ ತಲುಪುತ್ತಿತ್ತು. ಆಗ ಅದನ್ನು ಬಹು ಭಾಷೆಯ ಚಿತ್ರ ಎನ್ನುತ್ತಿದ್ದರು. ಈಗ ಅದೇ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಆಗಿದೆ. ಈಗ ಪ್ಯಾನ್ ಇಂಡಿಯಾ ಬದಲಾಗಿದೆ. ಏಕಕಾಲದಲ್ಲಿ ಬಹು ಭಾಷೆಯಲ್ಲಿ ಚಿತ್ರೀಕರಣ ಆಗುತ್ತದೆ, ಬಹು ಭಾಷೆಯಲ್ಲಿ ಬಿಡುಗಡೆ ಆಗುತ್ತದೆ, ಆಯಾ ಭಾಷೆಯಲ್ಲಿ ಆಯಾ ನಟ- ನಟಿಯರ ಪಾತ್ರಗಳಿಗೆ ಡಬ್ ಮಾಡುತ್ತಾರೆ, ಡೈರೆಕ್ಟ್ ರಿಲೀಸ್ ಮಾಡುತ್ತಾರೆ. ಇದು ಈಗಿನ ಪ್ಯಾನ್ ಇಂಡಿಯಾ ತಳಹದಿ. ಆದರೆ ಏನೇ ಮಾಡಿದರೂ ಫ್ಯಾನ್ಸ್ ಇರೋವರೆಗೂ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ’ ಎಂದರು ಉಪೇಂದ್ರ.

ಉಪೇಂದ್ರ ಅವರಿಗೆ ಹೀಗೆ ಈ ಪ್ಯಾನ್ ಇಂಡಿಯಾ ಪ್ರಶ್ನೆ ಎದುರಾಗಿದ್ದು ಅವರ ಅಣ್ಣನ ಮಗ ನಿರಂಜನ್ ನಟನೆಯ ‘ಸೂಪರ್ ಸ್ಟಾರ್’ ಚಿತ್ರದ ಮುಹೂರ್ತದಲ್ಲಿ. ಚಿತ್ರದ ಸಮಾರಂ‘ದ ವೇದಿಕೆಯಲ್ಲೇ ತಮ್ಮ ನಿಲುವು ಹೇಳಿ, ನಂತರ ‘ಸೂಪರ್ ಸ್ಟಾರ್’ ಚಿತ್ರದ ವಿಷಯಕ್ಕೆ ಬಂದರು. ‘ದೊಡ್ಡ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಜವಾಬ್ದಾರಿ ಕೂಡ ದೊಡ್ಡದು.  ನನ್ನ ಪಾಲಿಗೆ ಡಾ ರಾಜ್‌ಕುಮಾರ್, ಸಾಹಸ ಸಿಂಹ ವಿಷ್ಣುವ‘ರ್ನ್ ಅವರು ಸೂಪರ್ ಸ್ಟಾರ್‌ಗಳು’ ಎಂದು ಹೇಳಿಕೊಂಡರು ಉಪೇಂದ್ರ. 

ರವಿಚಂದ್ರನ್ ಖಡಕ್‌ ಮಾತಿಗೆ ನಿರ್ಮಾಪಕರು ಸುಸ್ತು; ಏನ್ ಹೇಳಿದ್ರು ಕೇಳಿಸ್ಕೊಳ್ಳಿ! 

ತಮ್ಮ ಮನೆಯಿಂದ ಹೀರೋ ಆಗಿ ಲಾಂಚ್ ಆಗುತ್ತಿರುವ ನಿರಂಜನ್‌ಗೆ ಸಲಹೆ ಕೊಡುತ್ತೀರಾ ಎಂದರೆ ‘ನೋಡಿ, ಹಿರಿಯರು ಯಾವತ್ತೂ ಯಂಗ್ ಮೈಂಡ್‌ಗಳಿಗೆ ಸಲಹೆ ಕೊಡಬಾರದು. ಮೊದಲು ಈ ಸಲಹೆ ಕೊಡುವುದನ್ನು ನಿಲ್ಲಿಸಬೇಕು. ಯುವ ನಟ- ನಟಿಯರು, ತಂತ್ರಜ್ಞಾರು ಮುಂದಿನ ಚಿತ್ರರಂಗದ ‘ವಿಷ್ಯ. ಅವರಿಗೆ ಎಲ್ಲವೂ ಗೊತ್ತಿದೆ. ನಾವು ಸಲಹೆ ಕೊಡಬಾರದು. ಸಿನಿಮಾ ಜಗತ್ತು ಗೊತ್ತಿರುವ ಯಂಗ್‌ಸ್ಟಾರ್‌ಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ’ ಎಂದು ಹೇಳುವಲ್ಲಿಗೆ ಮಾತು ಮುಗಿಸಿದರು ಉಪೇಂದ್ರ. 

click me!