ನಟ ಡಾಲಿ ಧನಂಜಯ್ ಅವರು ಡೇರ್ ಡೆವಿಲ್ ಮುಸ್ತಫಾ ಸಿನಿಮಾವನ್ನ ನಿರ್ಮಾಣ ಹಾಗೂ ಪ್ರಸ್ತುತಪಡಿಸಿದ್ದರು. ಅದರ ಜೊತೆಗೆ ಸಿನಿಮಾದ ಒಂದಷ್ಟು ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ಈ ಸಾಲುಗಳನ್ನು ಕೂಡ ಖುದ್ದು ಧನಂಜಯ ಅವರೇ ಬರೆದಿದ್ದರು.
ಈ ಬಾರಿಯ ಪ್ರಸಕ್ತ ಬಜೆಟ್ ನಲ್ಲಿ ಕೆಲ ಸಿನಿಮಾಗಳ ಸಾಲುಗಳನ್ನು ಬಳಸಿಕೊಳ್ಳಲಾಗಿದೆ. ಬಜೆಟ್ ಭಾಷಣದ ಆರಂಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಾ ರಾಜಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾದ ಹಾಡಿನ ಸಾಲುಗಳನ್ನ ಹೇಳುತ್ತಾ ಬಜೆಟ್ ಮಂಡನೆಯನ್ನು ಶುರು ಮಾಡಿದರು. 'ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..' ಎಂದು ಹೇಳುತ್ತ ಇಂದು ಬಜೆಟ್ ಮಂಡನೆ ಶುರು ಮಾಡಿದ್ದು ವಿಶೇಷವಾಗಿತ್ತು.
ಬಂಗಾರದ ಮನುಷ್ಯ ಮಾತ್ರವಲ್ಲದೆ ಕಳೆದ ವರ್ಷ ಬಿಡುಗಡೆಯಾದ ಡಾಲಿ ಧನಂಜಯ ನಿರ್ಮಾಣದ ಶಶಾಂಕ್ ಸೋಗಲ್ ನಿರ್ದೇಶನದ 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾದ ಸಾಲುಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಅನುದಾನಗಳನ್ನ ಮಂಡಿಸುವ ಮುನ್ನ ಸಿಎಂ ಸಿದ್ದರಾಮಯ್ಯನವರು 'ಡೇರ್ ಡೆವಿಲ್ ಮುಸ್ತಫಾ' ಚಿತ್ರದ ಎರಡು ಸಾಲುಗಳನ್ನ ಸದನದಲ್ಲಿ ಹೇಳಿದ್ದಾರೆ. 'ಒಂದು ತೋಟದಲ್ಲಿ ನೂರು ಹೂವು ಅರಳಲಿ, ಎಲ್ಲಾ ಕೂಡಿ ಆಡುವಂತ ಗಾಳಿ ಬೀಸಲಿ' ಈ ಸಾಲುಗಳನ್ನ ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟಿರುವ ಅನುದಾನವನ್ನು ಮಂಡಿಸಿದ್ದಾರೆ.
ನವರಸನಾಯಕ ಈಗ ರಂಗನಾಯಕ; ಗುರುಪ್ರಸಾದ್ ಜೊತೆ ಸೇರಿ ಜಗ್ಗೇಶ್ ಆಟ ಶುರು ಗುರೂ!
ನಟ ಡಾಲಿ ಧನಂಜಯ್ ಅವರು ಡೇರ್ ಡೆವಿಲ್ ಮುಸ್ತಫಾ ಸಿನಿಮಾವನ್ನ ನಿರ್ಮಾಣ ಹಾಗೂ ಪ್ರಸ್ತುತಪಡಿಸಿದ್ದರು. ಅದರ ಜೊತೆಗೆ ಸಿನಿಮಾದ ಒಂದಷ್ಟು ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ಈ ಸಾಲುಗಳನ್ನು ಕೂಡ ಖುದ್ದು ಧನಂಜಯ ಅವರೇ ಬರೆದಿದ್ದರು. ಇನ್ನು ವಿಶೇಷವೆಂದರೆ ಇತ್ತೀಚಿಗಷ್ಟೇ ಡಾಲಿ ಧನಂಜಯ್ ಅವರು ಲಿಡ್ಕರ್ ಸಂಸ್ಥೆಗೆ ಬ್ರಾಂಡ್ ಅಂಬಾಸೆಡರ್ ಆಗಿ ಆಯ್ಕೆ ಆಗಿದ್ದರು, ಈ ಬಾರಿಯ ಮುಖ್ಯಮಂತ್ರಿಗಳು ಸೂಟ್ಕೇಸ್ ಬಿಟ್ಟು ಲಿಡ್ಕರ್ ಬ್ಯಾಗ್ ನಲ್ಲಿ ಬಜೆಟ್ ಪ್ರತಿಗಳನ್ನು ತೆಗೆದುಕೊಂಡು ವಿಧಾನಸೌಧ ಪ್ರವೇಶ ಮಾಡಿದರು. ಒಟ್ಟಾರೆ ಈ ಬಾರಿಯ ಬಜೆಟ್ ನಲ್ಲಿ ನಟ ಡಾಲಿ ಧನಂಜಯ್ ಹಾಗೂ ತಂಡ ಪರೋಕ್ಷವಾಗಿ ಭಾಗಿಯಾದರು.
ಗಾಲವ್ ದೇವರ ವರಪ್ರಸಾದ, ಪಾಲಿಗೆ ಬಂದಿದ್ದು ಪಂಚಾಮೃತ; ಮಾಳವಿಕಾ ಅವಿನಾಶ್ ನೋವಿನ ನುಡಿ!
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಡ್ಕರ್ ಸಂಸ್ಥೆಗೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗಿದ್ದು, ನಟ ರಾಕ್ಷಸ ಖ್ಯಾತಿಯ ಡಾಲಿ ಧನಂಜಯ ಅವರು ಲಿಡ್ಕರ್ ಸಂಸ್ಥೆಗೆ ರಾಯಭಾರಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಲಿಡ್ಕರ್ ಸಂಸ್ಥೆಯ ಲೆದರ್ ಬ್ಯಾಗ್ ಬಳಕೆ ಮಾಡುತ್ತಿರುವುದರಿಂದ ಹೆಚ್ಚು ಮುನ್ನೆಲೆಗೆ ಬಂದಿದೆ.
ಜಗ್ಗೇಶ್-ಪುನೀತ್ ಮೊದಲ ಭೇಟಿ ಎಲ್ಲಿ, ಯಾವಾಗ ಆಯ್ತು; ಅಂದು ಡಾ ರಾಜ್‌ಕುಮಾರ್ ಹೇಳಿದ್ದೇನು?