‘ಹೆಜ್ಜಾರು’ ಚಿತ್ರಕ್ಕೆ ದೊರೆತ ಜನ ಮೆಚ್ಚುಗೆಯಿಂದ ಸಂಭ್ರಮದಲ್ಲಿದ್ದ ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು. ಈ ಸಂದರ್ಭದಲ್ಲಿ ನಿರ್ದೇಶಕ ಹರ್ಷಪ್ರಿಯ, ‘ನಮ್ಮ ಸಿನಿಮಾವನ್ನು ಜನ ಇಷ್ಟ ಪಟ್ಟಿದ್ದಾರೆ.
‘ಹೆಜ್ಜಾರು’ ಚಿತ್ರಕ್ಕೆ ದೊರೆತ ಜನ ಮೆಚ್ಚುಗೆಯಿಂದ ಸಂಭ್ರಮದಲ್ಲಿದ್ದ ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು. ಈ ಸಂದರ್ಭದಲ್ಲಿ ನಿರ್ದೇಶಕ ಹರ್ಷಪ್ರಿಯ, ‘ನಮ್ಮ ಸಿನಿಮಾವನ್ನು ಜನ ಇಷ್ಟ ಪಟ್ಟಿದ್ದಾರೆ. ಹಾಗಾಗಿ ನಾವು ಗೆದ್ದಿದ್ದೇವೆ’ ಎಂದರು. ನಾಯಕ ನಟ ಭಗತ್ ಆಳ್ವ, ‘ನನ್ನಂತಹ ಮಿಡ್ಲ್ ಕ್ಲಾಸ್ ಹುಡುಗನನ್ನು ಹೀರೋ ಆಗಿಸಿದ ನಿರ್ಮಾಪಕರಿಗೆ ಧನ್ಯವಾದಗಳು’ ಎಂದರು. ನಾಯಕಿ ಶ್ವೇತಾ ಲಿಯೋನಿಲ್ಲಾ ಡಿಸೋಜ, ಕಲಾವಿದರಾದ ನವೀನ್ ಕೃಷ್ಣ, ವಿನೋದ್ ಭಾರತಿ, ಮುನಿ, ಕಾರ್ತಿಕ್, ಡಿಓಪಿ ಅಮರ್ ಗೌಡ, ಆರ್ಟ್ ಡೈರೆಕ್ಟರ್ ಗಿರೀಶ್ ಕನಕಪುರ, ಕೊರಿಯೋಗ್ರಾಫರ್ ಮೋಹನ್ ಮಾಸ್ಟರ್, ಸಂಕಲನಕಾರ ಅಜಿತ್ ಡ್ರಾಕುಲಾ ಇದ್ದರು.
ಚಿತ್ರಕಥೆಯ ಕಾರಣಕ್ಕೆ ಸದ್ದು ಮಾಡುತ್ತಿದೆ ಹೆಜ್ಜಾರು: ಸಿನಿಮಾ ಕುರಿತು ನಿರ್ದೇಶಕ ಹರ್ಷಪ್ರಿಯ, ‘ನಮ್ಮ ಸಿನಿಮಾದ ಪ್ರಮುಖ ಆಕರ್ಷಣೆಯೇ ಚಿತ್ರ ಕಥೆ. ನಮ್ಮ ಸಿನಿಮಾ ನೋಡೋರೆಲ್ಲ ಬರಹಗಾರರಾಗೋದು ಗ್ಯಾರಂಟಿ. ಇದೊಂದು ಪ್ಯಾರಲಲ್ ಬದುಕನ್ನು ಕಟ್ಟಿಕೊಡುವ ಸಿನಿಮಾ. ಕಾಮಿಡಿ ಇಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಅಂಶವಿದೆ. ಒಬ್ಬರ ಬದುಕಿನ ಘಟನೆಗಳು ಇನ್ನೊಬ್ಬರ ಬದುಕಿನಲ್ಲೂ ನಡೆಯಬಹುದಾ ಎಂಬುದು ಮುಖ್ಯವಾಗಿ ಬರುತ್ತದೆ. ದಕ್ಷಿಣ ಕನ್ನಡದ ಮಡಂತ್ಯಾರು ಪರಿಸರದಲ್ಲಿ ಮಳೆಯ ಅಬ್ಬರದ ನಡುವೆ ಸಿನಿಮಾದ ಶೂಟಿಂಗ್ ಆಗಿದೆ’ ಎಂದರು.
undefined
ಇದೊಂದು ಪ್ಯಾರಲೈಲ್ ಲೈಫ್ ಸಿನಿಮಾ: ಚಿತ್ರರಂಗಕ್ಕೆ ಬಂದ ಹೊಸ ಹೀರೋ ಭಗತ್ ಆಳ್ವ
ನಿರ್ಮಾಪಕ ರಾಮ್‌ಜೀ, ‘ಸಿನಿಮಾದಲ್ಲಿ ನನ್ನನ್ನು ಸೆಳೆದದ್ದು ಗಟ್ಟಿ ಚಿತ್ರಕಥೆ. ನಿರ್ದೇಶಕ ಹರ್ಷಪ್ರಿಯ ಪೇಂಟರ್ ಆಗಿದ್ದವರು. ಅವರ ಬದುಕನ್ನೇ ಒಂದು ಸಿನಿಮಾ ಮಾಡಬಹುದು’ ಎಂದರು. ನಾಯಕ ಭಗತ್ ಆಳ್ವ, ‘ಕಿರುತೆರೆ ಹಿನ್ನೆಲೆಯಿಂದ ಬಂದ ನನಗೆ ಈ ಸಿನಿಮಾ ಮೂಲಕ ಒಂದೊಳ್ಳೆ ಬ್ರೇಕ್ ಸಿಗುವ ನಿರೀಕ್ಷೆ ಇದೆ’ ಎಂದರು. ನಾಯಕಿ ಶ್ವೇತಾ, ‘ತನ್ನದು ಕಾಡುವ ಪಾತ್ರ’ ಎಂದು ಹೇಳಿದರು.