ಶ್ರೇಯಸ್ ಮಂಜುಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ: ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳೋದೇನು?

Published : Oct 16, 2026, 03:35 PM IST
DilDhar movie

ಸಾರಾಂಶ

ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ‘ದಿಲ್‌ದಾರ್’ ಚಿತ್ರದ ‘ಕೂಲ್ ಬ್ರದರ್’ ಡ್ಯಾನ್ಸ್ ಸಾಂಗ್‌ನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ಶ್ರೇಯಸ್ ಮಂಜು ಅವರ ಎನರ್ಜಿಟಿಕ್ ಡ್ಯಾನ್ಸ್‌ಗೆ ಶ್ರೀಮುರಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ‘ದಿಲ್‌ದಾರ್’ ಚಿತ್ರದ ‘ಕೂಲ್ ಬ್ರದರ್’ ಎಂಬ ಹುರುಪಿನ ಡ್ಯಾನ್ಸ್ ಹಾಡನ್ನು ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಚಂದನ್ ಶೆಟ್ಟಿ ಹಾಡಿದ್ದಾರೆ. ಆರ್. ಸಂತೋಷ್ ಕುಮಾರ್ ನಿರ್ಮಿಸಿರುವ, ಮಧು ಗೌಡ ಗಂಗೂರ್ ನಿರ್ದೇಶನದ ಚಿತ್ರವಿದು. ಶ್ರೀಮುರಳಿ, ‘ಶ್ರೇಯಸ್ ಮಂಜುಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ.

ಈ ಡ್ಯಾನ್ಸ್ ನಂಬರ್‌ನಲ್ಲಿ ಶ್ರೇಯಸ್ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾಯಕ ಶ್ರೇಯಸ್ ಮಂಜು, ‘ಇದು ಯಾವುದೇ ಬೋಧನೆ ಇಲ್ಲದೆ ಪ್ರೇಕ್ಷಕರು ಎರಡು ಗಂಟೆಗಳ ಕಾಲ ಆರಾಮವಾಗಿ ಕುಳಿತು ಎಂಜಾಯ್ ಮಾಡುವಂತಹ ಸಿನಿಮಾ’ ಎಂದರು. ನಿರ್ದೇಶಕ ಮಧುಗೌಡ, ‘ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಸಂಬಂಧಗಳಿಗೆ ಬೆಲೆ ಕೊಡದಿದ್ದರೆ ಎದುರಾಗುವ ಪರಿಣಾಮಗಳನ್ನು ಕಥೆಯಲ್ಲಿ ಹೇಳಲಾಗಿದೆ’ ಎಂದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಶರಣ್ ಹಾಗೂ ಶ್ರುತಿ ಅವರ ಸಹೋದರಿಯ ಪುತ್ರಿ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಲೋಕಿ, ಸಾಧು ಕೋಕಿಲ, ಚಂದ್ರಪ್ರಭ, ಕಾರ್ತಿಕ್ ತಾರಾಗಣದಲ್ಲಿದ್ದಾರೆ. ಹರೇಕೃಷ್ಣ ರೆಡ್ಡಿ ಎಸ್. ಕಾರ್ಯಕಾರಿ ನಿರ್ಮಾಪಕರು.

ಭೂಗತ ಲೋಕದ ಕತೆಯುಳ್ಳ ಗ್ರಂಥ ಚಿತ್ರಕ್ಕೆ ಮುಹೂರ್ತ

ರೌಡಿಸಂ ಹಿನ್ನೆಲೆಯ ‘ಗ್ರಂಥ’ ಚಿತ್ರದ ಮುಹೂರ್ತ ನಡೆದಿದೆ. ಗೋಕಾಕ್ ಶೂನ್ಯ ಸಂಪಾದನ ಮಠದ ಶ್ರೀ ಮುರುಗ ರಾಜೇಂದ್ರ ಸ್ವಾಮೀಜಿ ಚಿತ್ರತಂಡಕ್ಕೆ ಆಶೀರ್ವದಿಸಿದರೆ, ಅನಿರುದ್ಧ ಜಟ್ಕರ್ ಆರಂಭಿಕ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ಗೋಕಾಕ್ ಮೂಲದ ಹರಿಪ್ರಿಯಾ ರವಿಕೊಪ್ಪ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಂಜೀವ್ ಗವಂಡಿ ನಿರ್ದೇಶನ ಮಾಡುತ್ತಿದ್ದಾರೆ.

ನಿರ್ದೇಶಕ ಸಂಜೀವ್ ಗವಂಡಿ, ‘ಇದು 90ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳ ಭೂಗತ ಜಗತ್ತಿನ ಕರಾಳ ಮುಖವನ್ನು ನಾಯಕ ತನ್ನದೇ ‘ಗ್ರಂಥ’ದ ಮೂಲಕ ಮುಂದಿನ ಪೀಳಿಗೆಗೆ ದಾಟಿಸುವ ಎಳೆಯಿದು’ ಎಂದರು. ನಾಯಕ ಯುವ, ‘ಮನುಷ್ಯ ಸತ್ತ ಮೇಲೂ ಪೆನ್ನು ಮತ್ತು ಗ್ರಂಥ ನೆನಪಿರುತ್ತದೆ, ಲಾಂಗ್ ಸಾಯುವವರೆಗಷ್ಟೇ. ಇಂಥ ಪ್ರಬಲ ಕಥೆಯಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ’ ಎಂದರು. ನವೀನ್ ಶಂಕರ್ ಹಾಗೂ ನಿರ್ಮಾಪಕಿ ಹರಿಪ್ರಿಯಾ ಶುಭ ಹಾರೈಸಿದರು. ಅಭಿಜಿತ್, ಕಾಕ್ರೋಚ್ ಸುಧಿ, ರವಿಕಾಳೆ, ಶಯ್ಯಾಜಿ ಶಿಂಧೆ ತಾರಬಳಗದಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ramayana: ಸೌಂಡ್ ಮಾಡ್ತಿದೆ 'ರಾಮಾಯಣ' ಅಡ್ವಾನ್ಸ್ ಬುಕ್ಕಿಂಗ್; ಅಮೆರಿಕಾದಲ್ಲಿ ಕಲೆಕ್ಷನ್ ಅಗಿದ್ದು ಅಷ್ಟೊಂದು?!
ಲೈವ್​ನಲ್ಲಿ ಬಂದು ಗುಡ್​ನ್ಯೂಸ್​ ಕೊಟ್ಟ ಚಂದನ್​ ಶೆಟ್ಟಿ: ಎಲ್ಲರಿಗೂ ಆಹ್ವಾನ ಇತ್ತ ರ‍್ಯಾಪರ್​