ತಂದೆಯೇ ಅದೊಂದು ಪ್ರಶ್ನೆ ಕೇಳಿದ್ದಕ್ಕೆ ಕಣ್ಣೀರು ಹಾಕಿದ್ದ Actor Anant Nag ಮಗಳು ಅದಿತಿ; ಯಾಕೆ?

Published : Jun 25, 2025, 11:13 AM ISTUpdated : Jun 25, 2025, 11:17 AM IST
kannada actor anant nag

ಸಾರಾಂಶ

ನಟ ಅನಂತ್‌ ನಾಗ್‌ ಅವರ ಮಗಳು ಅದಿತಿ ಯಾಕೆ ನಟನೆಗೆ ಬರಲಿಲ್ಲ. ತಂದೆ ಆ ಮಾತು ಹೇಳ್ತಿದ್ದಂತೆ ಕಣ್ಣೀರು ಹಾಕಿದ್ದು ಯಾಕೆ?

ಕನ್ನಡದ ಖ್ಯಾತ ನಟ, ಯಾವುದೇ ಪಾತ್ರ ಕೊಟ್ಟರೂ ಕೂಡ ಜೀವ ತುಂಬುವ ನಟ ಅನಂತ್‌ ನಾಗ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ನೀಡುವಾಗ ಅನಂತ್‌ ನಾಗ್‌ ಅವರ ಮಗಳು, ಅಳಿಯ, ಪತ್ನಿ ಗಾಯಿತ್ರಿ ಅವರು ಎದ್ದು ನಿಂತುಕೊಂಡು ಚಪ್ಪಾಳೆ ತಟ್ಟಿದ್ದಾರೆ. ಈ ವಿಡಿಯೋ ವೈರಲ್‌ ಆಗ್ತಿದೆ. ಈ ಬಗ್ಗೆ Asianet Suvarna News ಜೊತೆ ಅನಂತ್‌ ನಾಗ್‌ ಮಾತನಾಡಿದ್ದಾರೆ.

ಸಿಕ್ಕಾಪಟ್ಟೆ ನಾಚಿಕೆ ಸ್ವಭಾವ ಇದೆ!

“ಪ್ರಶಸ್ತಿ ತಗೊಳ್ಳುವಾಗ ಫ್ಯಾಮಿಲಿಯವರು ಎದ್ದು ನಿಂತುಕೊಳ್ಳಿ ಎಂದು ಹೇಳಿದರು. ಆಗ ಅವರು ಮೂವರು ಎದ್ದು ನಿಂತರು. ಅವರು ನಿಜಕ್ಕೂ ತುಂಬ ನಾಚಿಕೆ ಸ್ವಭಾವದವರು. ನಾಚಿಕೆ ಇದ್ದಿದ್ದಕ್ಕೆ ಅವರೆಲ್ಲ ಎದ್ದು ನಿಂತುಕೊಳ್ಳುವವರೇ ಅಲ್ಲ” ಎಂದು ನಟ ಅನಂತ್‌ ನಾಗ್‌ ಅವರು ಹೇಳಿದ್ದಾರೆ.

ಯಾಕೆ ನಟಿಸಲಿಲ್ಲ?

“ನಾನು ನಟ, ನನ್ನ ಪತ್ನಿಯೂ ನಟಿ, ನೀನು ಬೇಕಿದ್ರು ನಟಿಸು, ರೆಕಾರ್ಡ್‌ಗೆ ಇರಲಿ, ನಟಿಸು ಅಂದಾಗ ನನ್ನ ಮಗಳು ಕಣ್ಣೀರು ಹಾಕಿದಳು. ಶಾಲಾ ಕಾಲೇಜಿನಲ್ಲಿ ನಾಟಕ ಮಾಡಿದ್ದಳು, ಕಥಕ್‌ ಕಲಿತಿದ್ದಳು. ಶೂಟಿಂಗ್‌ನಲ್ಲಿ ಜನರು ಇರೋದು, ಕ್ಯಾಮರಾ ಇದ್ದಾಗ ನನಗೆ ನಟಿಸಲು ಇಷ್ಟವಿಲ್ಲ ಎಂದಳು. ಪ್ರೇಕ್ಷಕರು ದೂರ ಇರೋದಿಕ್ಕೆ ರಂಗಮಂಚ ಮೇಲೆ ನಟಿಸಬಹುದು ಅಂತ ಅವಳು ಹೇಳಿದಳು. ಹೀಗಾಗಿ ನಾನು ಅವಳಿಗೆ ಒತ್ತಾಯ ಮಾಡಲಿಲ್ಲ” ಎಂದು ಹೇಳಿದ್ದಾರೆ.

ಪಬ್ಲಿಕ್‌ನಲ್ಲಿ ಕಾಣಿಸ್ಕೊಳ್ಳಲ್ಲ!

ಒಂದು ಕಂಪೆನಿಯೊಂದರಲ್ಲಿ ಅದಿತಿ ನಾಗ್‌ ಅವರ ಪತಿ ವಿವೇಕ್‌ ಶೆಟ್ಟಿ ಕೆಲಸ ಮಾಡುತ್ತಿದ್ದಾರೆ. ಅನಂತ್‌ ನಾಗ್‌ ಅವರ ಮಗಳು ಕ್ಯಾಮರಾದಿಂದ ತುಂಬ ದೂರ ಇದ್ದಾರೆ. ಸಾರ್ವಜನಿಕ ಜೀವನದಲ್ಲಿ ಅವರು ಕಾಣಿಸಿಕೊಳ್ಳೋದು ಕೂಡ ತುಂಬ ಅಪರೂಪ ಎಂದು ಹೇಳಬಹುದು.

300 ಸಿನಿಮಾಗಳಲ್ಲಿ ಅನಂತ್‌ ನಾಗ್‌ ನಟನೆ!

ಅನಂತ್‌ ನಾಗ್‌ ಅವರು ಕನ್ನಡದಲ್ಲಿಯೇ 250 ಸಿನಿಮಾ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್‌ ಸೇರಿದಂತೆ ಒಟ್ಟೂ 300 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ರಂಗಭೂಮಿ ನಾಟಕಗಳು, ದೂರದರ್ಶನ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗಿದ್ದಾರೆ. 76 ವರ್ಷದ ಅನಂತ್‌ ನಾಗ್‌ ಅವರು ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಆರು ಫಿಲ್ಮ್‌ಫೇರ್‌ ಪ್ರಶಸ್ತಿ, ಐದು ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿದೆ. ಅಮೋಘ ಅಭಿನಯದ ಮೂಲಕ ಹೆಸರು ಮಾಡಿರುವ ಅಪ್ರತಿಮ ಸುಂದರನಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ!

1987ರಲ್ಲಿ ಅನಂತ್‌ ನಾಗ್‌, ಗಾಯಿತ್ರಿ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆ ಬಳಿಕ ಗಾಯಿತ್ರಿ ಅವರು ನಟನೆಯಿಂದ ದೂರ ಆಗಿದ್ದಾರೆ. ಅಂದಹಾಗೆ ಅನಂತ್‌ ನಾಗ್‌ ಅವರ ಸಿನಿಮಾ ಕೆಲಸಗಳಿಗೆ ಅವರು ಬೆಂಬಲವಾಗಿದ್ದು, ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿಯೂ ಪತಿ ಜೊತೆ ಕಾಣಿಸಿಕೊಳ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ