07.08.09 ಕೋಡ್ ವರ್ಡ್ ಇರುವ 'ಉಸಿರು': ಇನ್‌ವೆಸ್ಟಿಗೇಟಿವ್ ಥ್ರಿಲ್ಲರ್‌ನಲ್ಲಿ ತಿಲಕ್ ಶೇಖರ್

Published : Jun 23, 2025, 03:29 PM IST
Usiru

ಸಾರಾಂಶ

ತಿಲಕ್‌ ಶೇಖರ್‌ ಹಾಗೂ ಪ್ರಿಯಾ ಹೆಗ್ಡೆ ನಟನೆಯ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ‘ಉಸಿರು’ ಚಿತ್ರದ ಟೀಸರನ್ನು ಶ್ರೀನಗರ ಕಿಟ್ಟಿ ಹಾಗೂ ನಿರ್ದೇಶಕ ರವಿ ಆರ್‌ ಗರಣಿ ಬಿಡುಗಡೆ ಮಾಡಿದರು.

ತಿಲಕ್‌ ಶೇಖರ್‌ ಹಾಗೂ ಪ್ರಿಯಾ ಹೆಗ್ಡೆ ನಟನೆಯ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ‘ಉಸಿರು’ ಚಿತ್ರದ ಟೀಸರನ್ನು ಶ್ರೀನಗರ ಕಿಟ್ಟಿ ಹಾಗೂ ನಿರ್ದೇಶಕ ರವಿ ಆರ್‌ ಗರಣಿ ಬಿಡುಗಡೆ ಮಾಡಿದರು. ಲಕ್ಷ್ಮೀ ಹರೀಶ್‌ ನಿರ್ಮಿಸುತ್ತಿರುವ ಈ ಚಿತ್ರವನ್ನು ಪ್ರಭಾಕರ್‌ ನಿರ್ದೇಶಿಸಿದ್ದಾರೆ. ಪೊಲೀಸ್‌ ಅಧಿಕಾರಿಯೊಬ್ಬ ಸಂಕಷ್ಟದಲ್ಲಿ ಸಿಲುಕುವ ತನ್ನ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದು ಚಿತ್ರದ ಕತೆ.

ಆರ್‌ಎಸ್‌ಪಿ ಗ್ರೂಪ್ ಆಫ್ ಕಂಪನೀಸ್ ನಡೆಸುತ್ತಿರುವ ಅವರು ತಮ್ಮ ಆರ್‌ಎಸ್‌ಪಿ ಪ್ರೊಡಕ್ಷನ್ ಮೂಲಕ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಭಾಕರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ನ್ನು ನಟ ಶ್ರೀನಗರ ಕಿಟ್ಟಿ ಹಾಗೂ ರವಿ ಆರ್.ಗರಣಿ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಪೊಲೀಸ್ ಅಧಿಕಾರಿಯೊಬ್ಬ ಆತಂಕಕಾರಿ ವ್ಯಕ್ತಿಯಿಂದ ತನ್ನ ಹೆಂಡತಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಚಿತ್ರದ ನಾಯಕ ತಿಲಕ್ ಶೇಖರ್ ಪ್ರತಿಕ್ರಿಯಿಸಿ, ಚಿತ್ರದಲ್ಲಿ ನಾನೊಬ್ಬ ಇನ್ವೆಸ್ಟಿಗೇಶನ್ ಆಫೀಸರ್. ಈ ಥರದ ಕಾನ್ಸೆಪ್ಟ್ ಎಲ್ಲೂ ಕೇಳಿರಲಿಲ್ಲ. 07.08.09 ಎನ್ನುವ ಕೋಡ್ ವರ್ಡ್ ರೀತಿ ಚಿತ್ರದಲ್ಲಿ ತುಂಬಾ ಇಂಟರೆಸ್ಟಿಂಗ್ ಎಲಿಮೆಂಟ್‌ಗಳಿವೆ ಎಂದರು. ನಿರ್ಮಾಪಕಿ ಲಕ್ಷ್ಮಿ ಹರೀಶ್ ಮಾತನಾಡಿ, ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂಬ ಅಂಶವನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಪ್ರಭಾಕರ್ ಅವರು ಈ ಕಥೆಯನ್ನು ನಮಗೆ ಹೇಳಿದಾಗ ಆ ಸ್ಟೋರಿಲೈನ್ ಇಷ್ಟವಾಗಿ ಸಿನಿಮಾ ಪ್ರಾರಂಭಿಸಿದೆವು. ಚಿತ್ರವೀಗ ಕೊನೇ ಹಂತದ ಡಿಐ ಕೆಲಸದಲ್ಲಿದೆ ಎಂದರು.


ನಂತರ ನಿರ್ದೇಶಕ ಪ್ರಭಾಕರ್ ಮಾತನಾಡಿ, ನಿರ್ದೇಶನ ನನ್ನ 12 ವರ್ಷಗಳ ಕನಸು. ಒಂದೆರಡು ತಮಿಳು ಸಿನಿಮಾಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದು, ಇದು ನನ್ನ ನಿರ್ದೇಶನದ ಪ್ರಥಮ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಇರೋ ಚಿತ್ರಕ್ಕೆ ಉಸಿರು ಎಂಬ ಟೈಟಲ್ ಯಾಕಿಟ್ಟಿದ್ದೇವೆ ಅಂತ ಸಿನಿಮಾ ನೋಡಿದಾಗ ತಿಳಿಯುತ್ತೆ. ಒಂದೊಳ್ಳೆ ಟೀಮ್ ಕಟ್ಟಿಕೊಂಡು ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ಎಲ್ಲಾ ರೀತಿಯ ಎಮೋಶನ್ಸ್ ಇದ್ದು, ಚಿತ್ರದ ಪ್ರತಿ ಪಾತ್ರಕ್ಕೂ ಅದರದೇ ಆದ ಐಡೆಂಟಿಟಿ ಇರುತ್ತದೆ. ಯಾವ ಪಾತ್ರವೂ ಹೀಗೆ ಬಂದು ಹೋಗುವುದಲ್ಲ. ಗಂಡನ ಪ್ರೀತಿ, ಸ್ನೇಹಸಂಬಂಧ ಹೀಗೆ ಎಲ್ಲಾ ರೀತಿಯ ಕಂಟೆಂಟ್ ಚಿತ್ರದಲ್ಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie Collection: ಕಿಚ್ಚ ಸುದೀಪ್‌ 'ಮಾರ್ಕ್' ಸಿನಿಮಾದ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು?
ಮೇಕಿಂಗ್‌ನಿಂದ ಕತೆವರೆಗೆ.. ಟಾಕ್ಸಿಕ್’ನಿಂದ ‘ಕ್ರಿಮಿನಲ್’ವರೆಗೆ: 2026ರ ಬಹು ನಿರೀಕ್ಷಿತ ಸಿನಿಮಾಗಳು