
ಯಶ್ ರಾಧಿಕಾ ಸ್ಯಾಂಡಲ್ ವುಡ್‌ನ ಎವರ್ ಗ್ರೀನ್ ಲವ್ಲೀ ಜೋಡಿ. ಜೊತೆಗೆ ಪ್ರಬುದ್ಧ ಜೋಡಿಯೂ ಹೌದು. ಈ ಜೋಡಿ ಯಾರ ಬಗೆಗಾದ್ರೂ ಹಗುರವಾಗಿ ಮಾತನಾಡಿದ್ದಾಗಲೀ, ಜಗಳ ಮಾಡ್ಕೊಂಡು ಬೀದಿ ರಂಪ ಮಾಡಿದ್ದಾಗಲೀ ಇಲ್ಲ. ಮೀಡಿಯಾಗಳಿಂದ ಸಾಕಷ್ಟು ಡಿಸ್ಟೆನ್ಸ್ ಮೈಂಟೇನ್ ಮಾಡ್ಕೊಂಡು, ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗ್ತಿದ್ದಾರೆ. ಬಾಲಿವುಡ್ನಲ್ಲಿ ಟ್ರೆಂಡಿಯಾಗಿದ್ದ ಸ್ಟಾರ್ ಕಿಡ್ ಹವಾವನ್ನು ಒಂಥರ ಕನ್ನಡಕ್ಕೂ ಎಳೆದು ತಂದವರು ಈ ದಂಪತಿ ಅನ್ನಬಹುದು. ತಮ್ಮ ಮಕ್ಕಳ ಮೊದಲ ಫೊಟೋ ರಿವೀಲ್ ಮಾಡೋ ಮುಂಚೆ ಇರಬಹುದು, ಹೆಸರಿಡುವ ಮೊದಲಿರಬಹುದು.. ಆ ಬಗ್ಗೆ ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡುತ್ತಿದ್ದರು. ಜನರು ಆ ವೀಡಿಯೋಕ್ಕೆ ಕಾಯೋ ಹಾಗೆ ಮಾಡುತ್ತಿದ್ದರು. ಈ ವೀಡಿಯೋ ಬರೋದನ್ನೇ ಕಾಯುವ ಜನ ಬಂದ್ಮೇಲೆ ಲಕ್ಷಾಂತರ ಸಂಖ್ಯೆಯಲ್ಲಿ ನೋಡುತ್ತಿದ್ದರು. ಜೊತೆಗೆ ಹೆಚ್ಚು ಸಂಖ್ಯೆಯಲ್ಲಿ ಶೇರ್ ಮಾಡೋ ಮೂಲಕ ಸ್ಟಾರ್ ಕಿಡ್ ಹವಾ ಕ್ರಿಯೇಟ್ ಮಾಡುತ್ತಿದ್ದರು.
ತಮ್ಮ ಯಥರ್ವ ಹುಟ್ಟಿ, ಅವನ ಹೆಸರು ರಿವೀಲ್ ಆಗೋವರೆಗೂ ಐರಾ ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದ್ದೇ ಮಿಂಚಿದ್ದು. ಫ್ಯಾಮಿಲಿ ಜೊತೆಗೆ ಇವಳ ಮುದ್ದಾದ ಫೋಟೋ, ಅಮ್ಮ ರಾಧಿಕಾ ಉಗುರು ಕಟ್ ಮಾಡುವಾಗ ಆಕೆ ಕಚಗುಳಿ ಇಟ್ಟ ಹಾಗೆ ನಗೋದು, ಅಪ್ಪ ಯಶ್‌ಗೆ ಒತ್ತಾಯ ಮಾಡಿ, ಜೋರು ಮಾಡಿ ತಿಂಡಿ ತಿನ್ನಿಸೋದು ಇತ್ಯಾದಿ ವೀಡಿಯೋಗಳೆಲ್ಲ ಭಲೇ ಮಜವಾಗಿದ್ದವು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡವು. ಯಥರ್ವ್ ಹುಟ್ಟಿದ ಮೇಲೆ ಐರಾ ಜೊತೆಗೆ ಅವನೂ ಸೇರಿಕೊಂಡ. ಯಾವಾಗ ತಮ್ಮ ಮಗನ ಫಸ್ಟ್ ಫೋಟೋ, ನಾಮಕರಣದ ಫೋಟೋ ರಿವೀಲ್ ಮಾಡಲಾರಂಭಿಸಿದರೋ ಆಮೇಲಿಂದ ಯಥರ್ವಗೂ ಅಭಿಮಾನಿಗಳು ಬೆಳೆಯಲಾರಂಭಿಸಿದರು. ಈ ಮಗುವನ್ನು ಯಶ್ ಸ್ಥಾನದಲ್ಲಿ ನಿಲ್ಲಿಸಿ ನೋಡೋರ ಸಂಖ್ಯೆಯೂ ಬೆಳೆಯುತ್ತಾ ಹೋಯ್ತು. ಯಥರ್ವ ಜ್ಯೂನಿಯರ್ ಯಶ್ ಅಂತಲೇ ಫೇಮಸ್ ಆಗ್ತಿದ್ದಾನೆ.
ಯಥರ್ವ್ ಯಶ್ ಸ್ಟೈಲ್‌ನಲ್ಲಿ 'Yes Papa' ಹೇಗೆ ಹೇಳೋದು ಗೊತ್ತಾ?
ಇದರ ನಡುವೆ ಯಶ್- ರಾಧಿಕಾ ತಮ್ಮ ಫೋಟೋ ವಿಡಿಯೋಗಳನ್ನು ಹಾಕಿಕೊಳ್ತಿಲ್ಲ ಅಂತ ಗಮನಿಸಿದೋರು ಹೇಳ್ತಿದ್ದಾರೆ. ಯಶ್ ತಮ್ಮ ಹೊಸ ಫಿಲಂ ಪ್ರಮೋಶನ್ ಮಾಡುವುದೂ ಕಡಿಮೆಯಾಗಿದೆ. ಬದಲಾಗಿ ಯಥರ್ವನ ಜೊತೆ ವಿಡಿಯೋದಲ್ಲಿ ಆಗೀಗ ಕಾಣಿಸಿಕೊಳ್ಳುವುದು ಎಷ್ಟೋ ಅಷ್ಟೇ. ಯಥರ್ವನ ಹವಾದ ಮುಂದೆ ಯಶ್ ಕೂಡ ಮಂಕು. ಯಾಕಂದ್ರೆ ಯಥರ್ವನನ್ನು ಯಶ್‌ಗೆ ಹೋಲಿಸಿ ಜನ ನೋಡಲಾರಂಭಿಸಿದಂದಿನಿಂದ ರಾಧಿಕಾ ಯಥರ್ವನ ಫೋಟೋ, ಆತನ ಚಟುವಟಿಕೆ ಪೋಸ್ಟ್ ಮಾಡೋದು ಹೆಚ್ಚಾಗ್ತಿದೆ.
ಯಶ್ -ಯಥರ್ವ್ ಜಾನಿ ಜಾನಿ ಟೈಮ್; ಐರಾ ಹೇಳಿದ ಸಾಲು ಕೇಳಿ!
ಇಬ್ಬರು ಮಕ್ಕಳೂ ಮುದ್ದಾಗಿದ್ದಾರೆ. ಇಬ್ಬರು ಮಕ್ಕಳ ನಡುವೆ ವಯಸ್ಸಿನ ಅಂತರ ಕಡಿಮೆಯಾಗಿರುವುದರಿಂದಲೂ ಅವರಿಬ್ಬರೂ ಪ್ರೆಂಡ್ಸ್ ಥರಾ ಇರಬಹುದು. ಅಥರ್ವ ಹವಾದ ನಡುವೆಯೂ ಐರಾಳ ತುಂಟಾಟ ಮುದ್ದಾಟಗಳ ವಿಡಿಯೋಗೆ ಕಾಯುವವರು ಇದ್ದಾರೆ. ನಿಜಕ್ಕೂ ಆಕೆ ಮುದ್ದಿನ ಗಣಿ. ಹೆಚ್ಚು ಆಕ್ಟಿವ್. ಆಕೆಯ ತುಂಟಾಟ, ಮುದ್ದಾಟಗಳು ಸಖತ್ ಕ್ಯೂಟ್. ಯಶ್ ಮತ್ತು ರಾಧಿಕಾ ಮಗನ ಜೊತೆಗೆ ಮಗಳ ವಿಡಿಯೋಗಳನ್ನೂ ಹೆಚ್ಚೆಚ್ಚು ಪ್ರಸಾರ ಮಾಡಲಿ ಅಂತಾರೆ ಅಭಿಮಾನಿಗಳು.
ನನ್ನ ರಾಜಕುಮಾರನಿಗೆ 11 ತಿಂಗಳು ಎಂದ ರಾಧಿಕಾ..! ಮಮ್ಮ ಫುಲ್ ಹ್ಯಾಪಿ
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.