49ರಲ್ಲೂ ಕುಗ್ಗದ ಸೌಂದರ್ಯ, ಇನ್ನೂ ಒಂಟಿಯಾಗಿರುವುದಕ್ಕೆ ಆ ಸ್ಟಾರ್ ನಟನ ಜತೆಗಿನ ಬ್ರೇಕ್‌ ಅಪ್‌ ಕಾರಣವೇ!?

By Gowthami K  |  First Published Aug 5, 2024, 7:09 PM IST

ಬಹುಭಾಷಾ ನಟಿ ನಗ್ಮಾ ಅವರಿಗೆ ಈ 49 ವರ್ಷ ವಯಸ್ಸಾಗಿದೆ. ಆದರೂ ಇನ್ನು  ಮದುವೆಯಾಗದೆ ಅವರು ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ಖ್ಯಾತ ನಟನ ಪ್ರೀತಿಯ ಬಲೆಯಲ್ಲಿ ಬಿದ್ದು ಜೀವನ ಹಾಳು ಮಾಡಿಕೊಂಡ್ರಾ


ಬಹುಭಾಷಾ ನಟಿ ನಗ್ಮಾ ಅವರಿಗೆ ಈ 49 ವರ್ಷ ವಯಸ್ಸಾಗಿದೆ. ಆದರೂ ಇನ್ನು  ಮದುವೆಯಾಗದೆ ಅವರು ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ತನ್ನ ಮಾದಕ ಸೌಂದರ್ಯದಿಂದ ಪಡ್ಡೆ ಹುಡುಗರ ನಿದ್ದೆ ಕದ್ದಾಕೆ. ಕನ್ನಡ, ತೆಲುಗು, ತಮಿಳು ,ಮಲಯಾಳಂ, ಮರಾಠಿ ಹೀಗೆ ಹಲವು ಭಾಷೆಗಳಲ್ಲಿ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿದರೂ ಆಕೆಯ ವೈಯಕ್ತಿಕ ಬದುಕು ಮಾತ್ರ ಒಂಟಿಯಾಗಿಯೇ ಕಳೆಯುವಂತಾಯುಯ್ತು. 

ಖ್ಯಾತ ನಟನ ಪ್ರೀತಿಯ ಬಲೆಯಲ್ಲಿ ಬಿದ್ದ ನಟಿ ನಗ್ಮಾಗೆ ಅವರನ್ನು ಮದುವೆಯಾಗು ಅದೃಷ್ಟ ಕೂಡಿಬರಲಿಲ್ಲ. ಕಾರಣಾಂತರಗಳಿಂದ ಅವರಿಬ್ಬರೂ ದೂರವಾಗಬೇಕಾಯ್ತು. ಆ ನಟ ಯಾರು? ಯಾವ ಭಾಷೆಯ ನಟ ಎಂಬುದನ್ನು ಮುಂದೆ ಓದಿ.

Tap to resize

Latest Videos

ಕನ್ನಡದಲ್ಲಿ ನಟ ಶಿವರಾಜ್ ಕುಮಾರ್ ಅವರೊಂದಿಗೆ ಕುರುಬನ ರಾಣಿ ಚಿತ್ರದಲ್ಲಿ ನಟಿಸಿದ ನಟಿ ಸಖತ್ ಫೇಮಸ್ ಆದರು. ಕನ್ನಡದ ಮೊದಲ ಚಿತ್ರದಲ್ಲೇ ಕನ್ನಡಿಗರಿಗೆ ಹತ್ತಿರವಾದರು. ನಂತರ ರವಿಚಂದ್ರನ್, ವಿಷ್ಣುವರ್ಧನ್ ಅವರೊಂದಿಗೆ ಕೂಡ ನಟಿಸಿದರು.

ಮಾಲಾಶ್ರೀ ಜತೆ ಯಾರು ನಟಿಸಿದ್ರೂ ಸ್ಟಾರ್‌, ಆದ್ರೆ ಈ ಒಬ್ಬ ನಟ ಮಾತ್ರ ಸ್ಟಾರ್ ಆಗಲೇ ಇಲ್ಲ! ಈಗೆಲ್ಲಿದ್ದಾರೆ ಗೊತ್ತಾ?

ಹೀಗೆ ಎಲ್ಲಾ ಚಿತ್ರರಂಗದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದ ನಟಿ ನಗ್ಮಾ ಖ್ಯಾತ ತಮಿಳು ನಟನೊಬ್ಬನ ಪ್ರೀತಿಯಲ್ಲಿ ಬಿದ್ದರು. ಆದರೆ ಕಾರಣಾಂತರಗಳಿಂದ ಪ್ರೀತಿ ಬ್ರೇಕ್ ಅಪ್ ಆಯ್ತು. ಆ ನಟ ಬೇರೆ ಯಾರೂ ಅಲ್ಲ ಶರತ್ ಕುಮಾರ್. ಶರತ್ ಕುಮಾರ್ ಗೆ ಅದಾಗಲೇ ಛಾಯ ಎಂಬವರ ಜತೆಗೆ ಮದುವೆಯಾಗಿರುವುದು ಆಕೆಗೆ ಆಮೇಲೆ ತಿಳಿಯಿತು. ಶರತ್ ಪತ್ನಿ ಛಾಯ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು.  ಬಳಿಕ ನಟ ಶರತ್ ಕುಮಾರ್ ನಿಂದ ನಗ್ಮಾ ದೂರವಾದರು. ನಟ ಶರತ್ ರಾಜಕೀಯದಲ್ಲಿದ್ದರು. ಅವರಿಂದ ಬೆದರಿಕೆ ಕೂಡ ಇತ್ತು ಅದಕ್ಕೆ ದಕ್ಷಿಣದ ಚಿತ್ರರಂಗದಿಂದ ನಗ್ಮಾ ದೂರಾದರು ಎಂದು ಹೇಳಲಾಗುತ್ತದೆ.

ಶರತ್ ಕುಮಾರ್‌ ಜೊತೆಗೆ ಬ್ರೇಕ್ ಅಪ್‌ ಬಳಿಕ   ಕ್ರಿಕೆಟಿಗ ಸೌರವ್ ಗಂಗೂಲಿ ಜೊತೆಗೂ ನಗ್ಮಾ ಹೆಸರು ತಳುಕು ಹಾಕಿಕೊಂಡಿತ್ತು.  2001 ರಲ್ಲಿ ಇದು ಟಾಕ್ ಆಫ್ ದಿ ಟೌನ್ ಆಗಿತ್ತು. ಇವರಿಬ್ಬರೂ ಆಂಧ್ರಪ್ರದೇಶದ ದೇವಸ್ಥಾನದಲ್ಲಿ ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಬಗ್ಗೆಯೂ ಮಾತುಕತೆ ನಡೆದಿತ್ತು ಎಂದು ಹೇಳಲಾಗುತ್ತದೆ. ಗಂಗೂಲಿಗೆ ಅದಾಗಲೇ ಮದುವೆಯಾಗಿತ್ತು. ಬಳಿಕ ಅವರ ಸಂಬಂಧ ಮುರಿದುಬಿತ್ತು. ಶರತ್ ಬಳಿಕ ರಾಧಿಕಾ ಅವರನ್ನು ಮದುವೆಯಾದರು.

ನಾನು ಬದುಕಬೇಕು ದಯವಿಟ್ಟು ನನ್ನನ್ನು ಉಳಿಸಿಕೋ, ಕೊನೆ ಕ್ಷಣ ಆ ನಟನ ಬಳಿ ಆಂಗಲಾಚಿ ಬೇಡಿಕೊಂಡಿದ್ದ ನಟಿ ಮಂಜುಳಾ!

ಅದಾದ ಬಳಿಕ ನಗ್ಮಾ ಅವರ ಹೆಸರ ಬೋಜುಪುರಿ ನಟ ರವಿಕಿಶನ್ ಜೊತೆಗೆ ಕೇಳಿ ಬಂದಿತ್ತು.   ರವಿ ಕಿಶನ್‌ನೊಂದಿಗೆ ದೀರ್ಘಕಾಲ ಡೇಟಿಂಗ್ ಸುದ್ದಿ ಇತ್ತು . ಅದಾದ ಬಳಿಕ ಭೋಜ್‌ಪುರಿ ನಟ ಮನೋಜ್ ತಿವಾರಿ ಅವರೊಂದಿಗೆ ಹೆಸರು ಕೇಳಿ ಬಂತು. ಆದರೆ ಈ ವಿಚಾರವನ್ನು ನಿರಾಕರಿಸಿದರು ನಟಿ ಇಬ್ಬರು ನಟರೊಂದಿಗೆ ಸಂಬಂಧ ಇಲ್ಲ ಅವರಿಬ್ಬರೂ ಮದುವೆಯಾದವರು, ದಯಮಾಡಿ ನನ್ನ ಹೆಸರನ್ನು ಇದರಲ್ಲಿ ತರಬೇಡಿ ಎಂದರು.

ನಗ್ಮಾ ಬಳಿಕ ರಾಜಕೀಯ ಪ್ರವೇಶ ಮಾಡಿ ಸಾಂಸಾರಿಕ ಜೀವನದ ಬಗ್ಗೆ ಯೋಚನೆಯೇ ಮಾಡದೆ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರು ನೀಡಿದ ಸಂದರ್ಶನದಲ್ಲಿ ನನ್ನಲ್ಲಿ ಬಹಳಷ್ಟು ಒಡೆದ ಹೃದಯಗಳಿವೆ. ನನ್ನ ಹೃದಯಕ್ಕೆ ಆಘಾತವಾಗಿದೆ. ಅವುಗಳನ್ನು ನಿಭಾಯಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ನನಗೆ ಯಾವುದೇ ಪುರುಷರ ಬಗ್ಗೆ ಕೆಟ್ಟ ಭಾವನೆ ಇಲ್ಲ ಎಂದಿದ್ದಾರೆ.

click me!