ಮೊನಾಲಿಸಾ ಸಿನಿಮಾ ನಟಿ ಸದಾ ಈಗ ಎಲ್ಲಿದ್ದಾರೆ? ಹೇಗಿದ್ದಾರೆ? 

Published : Jun 08, 2022, 06:45 PM IST
ಮೊನಾಲಿಸಾ ಸಿನಿಮಾ ನಟಿ ಸದಾ ಈಗ ಎಲ್ಲಿದ್ದಾರೆ? ಹೇಗಿದ್ದಾರೆ? 

ಸಾರಾಂಶ

Sandalwood News: ದಕ್ಷಿಣ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿ ಮಿಂಚಿದ್ದ ಸ್ಟಾರ್‌ ನಟಿ ಸದಾ ಈಗ ಎಲ್ಲಿದ್ದಾರೆ. ಚಿತ್ರರಂಗದಿಂದ ದೂರವಾದ ನಂತರ ಏನು ಮಾಡುತ್ತಿದ್ದಾರೆ? ಕನ್ನಡದ ಮೊನಾಲಿಸಾ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದ ನಟಿಯ ಇತ್ತೀಚಿನ ಡಿಟೇಲ್ಸ್‌ ಇಲ್ಲಿದೆ

ಜಯಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಅಪಾರ ಅಭಿಮಾನಿಗಳನ್ನ ಪಡೆದ ನಟಿ ಸದಾ. ಅಭಿನಯಿಸಿದ ಮೊದಲ ಸಿನಿಮಾದಲ್ಲಿ ಸದಾ ತಮ್ಮ ಅಭಿನಯ ಹಾಗೂ ಬ್ಯೂಟಿ ಮೂಲಕ ಚಿತ್ರರಂಗದ ಗಮನವನ್ನೂ ಸೆಳೆದಿದ್ದರು. ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯ ಮಾಡಿದ ಸದಾ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹಾಗೂ ಕನ್ನಡದ ಸಿನಿಮಾಗಳಲ್ಲಿ ನಟಿಸೋದಕ್ಕೆ ಶುರು ಮಾಡಿದ್ರು.

ಮೊನಾಲಿಸ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ:
ಸ್ಯಾಂಡಲ್ ವುಡ್ ಮಂದಿಯೂ ಸದಾ ಬ್ಯೂಟಿಗೆ ಬೆರಗಾಗಿ ಕನ್ನಡ ಚಿತ್ರರಂಗಕ್ಕೂ ಕರೆತಂದ್ರು ಕನ್ನಡದಲ್ಲಿ ಮೊನಾಲಿಸ ಸಿನಿಮಾ ಮಾಡಿ ಸಕ್ಸಸ್ ಕಂಡ್ರು. ಚಿತ್ರದ ಮೊನಾಲಿಸ. ಸಾಂಗ್ ಇಂದಿಗೂ ಎವರ್ ಗ್ರೀನ್ ಸಾಂಗ್ ನ ಲಿಸ್ಟ್ ನಲ್ಲಿದೆ. ಫಸ್ಟ್ ಚಿತ್ರದಲ್ಲಿ ಸದಾ ಡಬಲ್ ಆಕ್ಟಿಂಗ್ ಮಾಡಿ ಪ್ರೇಕ್ಷಕರಿಂದ ಜೈ ಎನ್ನಿಸಿಕೊಂಡ್ರು. ನಂತ್ರ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ್ರು. ಮೋಹಿನಿ. ಹುಡುಗ-ಹುಡುಗಿ, ಮೈಲಾರಿ, ಮಲ್ಲಿಕಾರ್ಜುನ, ಆರಕ್ಷಕ ಸಿನಿಮಾದಲ್ಲಿ ಅಭಿನಯ ಮಾಡಿದ್ರು ಸದಾ.

ಕಿರುತೆರೆಯಲ್ಲಿ ಬ್ಯುಸಿಯಾದ ಸದಾ:
ಸ್ಟಾರ್ ನಟಿಯಾಗಿ ಮಿಂಚಿದ್ದ ಸದಾ ಸುಮಾರು 15 ವರ್ಷಗಳ ಕಾಲ ಪಂಚಭಾಷಾ ತಾರೆಯಾಗಿ ಮಿಂಚಿದ್ರು. ನಂತರ ಸ್ಟಾರ್ ಡಂ ಕಮ್ಮಿ ಆಗ್ತಿದ್ದಂತೆ ಕಿರುತೆರೆಯತ್ತ ಮುಖ ಮಾಡಿದ್ರು. ತೆಲುಗು ಇಂಡಸ್ಟ್ರಿಯಲ್ಲಿ ಡ್ಯಾನ್ಸ್ ಹಾಗೂ ಸಿಂಗಿಂಗ್ ಷೋಗಳಲ್ಲಿ ತೀರ್ಪುಗಾರರಾಗಿ ಸದಾ ಬ್ಯುಸಿ ಆದ್ರು ಅಲ್ಲಿಯೂ ವರ್ಷಗಳ ಕಾಲ ಮಿಂಚಿದ್ರು ಸದಾ. 

ವೈಲ್ಡ್ ಫೋಟೋಗ್ರಫಿ ಮಾಡ್ತಾರೆ ಮೊನಾಲಿಸ ನಟಿ: 
ಇನ್ನು ಚಿತ್ರರಂಗದಲ್ಲಿ ಆಫರ್ ಗಳು ಕಮ್ಮಿ ಆಗ್ತಿದ್ದಂತೆ ಸದಾ ತಮ್ಮ ಹವ್ಯಾಸಗಳತ್ತ ಗಮನ ಹರಿಸುತ್ತಿದ್ದಾರೆ. ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರೋ ಸದಾ ವೀಕೆಂಡ್ ನಲ್ಲಿ ವೈಲ್ಡ್ ಫೋಟೋಗ್ರಫಿ ಮಾಡುತ್ತಾರೆ. ಅದಕ್ಕಾಗಿ ಕಾಡು ಮೇಡು ಸುತ್ತಿ ತಮ್ಮ ಕ್ಯಾಮೆರಾದಲ್ಲಿ ಪ್ರಾಣಿ ಪಕ್ಷಿಯ ಫೋಟೋಗಳನ್ನ ಸೆರೆ ಹಿಡಿಯುತ್ತಾರೆ.

ಇದನ್ನೂ ಓದಿ: 777 ಚಾರ್ಲಿ-2 ಬರುತ್ತಾ? ರಕ್ಷಿತ್ ಶೆಟ್ಟಿ ಕೊಟ್ಟ ಉತ್ತರ ಹೀಗಿತ್ತು

ಮಾರ್ಜಾಲ ಪ್ರೇಮಿ ಸದಾ:
ನಟಿ ಸದಾ ಸದ್ಯ ಮುಂಬೈನಲ್ಲಿ ವಾಸವಾಗಿದ್ದು ಮನೆಯಲ್ಲಿ ಬೆಕ್ಕುಗಳನ್ನ ಸಾಕಿಕೊಂಡಿದ್ದಾರೆ. ಸಾಕುಪ್ರಾಣಿಗಳೆಂದರೆ ಸದಾ ಅವ್ರಿಗೆ ಎಲ್ಲಿಲ್ಲದ ಪ್ರೀತಿ. ಮನೆಯಲ್ಲಿ ಮಾತ್ರವಲ್ಲದೆ ಗೋಶಾಲೆಗಳಿಗೂ ಬೇಟಿಕೊಟ್ಟು ಸಮಯ ಕಳೆಯುತ್ತಾರೆ. ಆ ಸುಮದುರ ಕ್ಷಣಗಳನ್ನ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಮ್ಮ ಲೈಫ್ ಸ್ಟೈಲ್ ಬಗ್ಗೆ ಅಪ್ಡೇಟ್ ಕೊಡ್ತಾರೆ ಈ ನಟಿ.

38ರ ವಯಸ್ಸಿನಲ್ಲಿಯೂ ಸಖತ್ ಬ್ಯೂಟಿ ಈ ನಟಿ:
ನಟಿ ಸದಾ ಅವ್ರಿಗೆ ಸದ್ಯ 38 ವರ್ಷ ವಯಸ್ಸಾಗಿದ್ದು ಇಂದಿಗೂ ಕೂಡ ಸಖತ್ ಯಂಗ್ ಆಗಿ ಕಾಣಿಸಿಕೊಳ್ತಾರೆ. ಸದಾ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರೋ ಫೋಟೋಗಳನ್ನ ನೋಡಿದ್ರೆ ಎಂತವ್ರು ಕೂಡ ಅವ್ರ ಸೌಂದರ್ಯಕ್ಕೆ ಮರಳಾಗದವರಿಲ್ಲ. ಸದಾ ಕೇವಲ ನಟನೆ ಮಾತ್ರವಲ್ಲ ಭರತನಾಟ್ಯ ನೃತ್ಯ ಕಲಾವಿದೆಯೂ ಹೌದು.

ಇದನ್ನೂ ಓದಿ: ವಿಂಡೋ ಸೀಟ್‌ ಟ್ರೇಲರ್‌ ಲಾಂಚ್‌ ಮಾಡಿದ ಸುದೀಪ್‌

ಇನ್ನೂ ಮದುವೆ ಆಗಿಲ್ಲ ಜಯಂ ನಟಿ:
ವಯಸ್ಸು 38 ಆದರೂ ಸದಾಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ಲ. ಅದಕ್ಕೆ ಸದಾ ಅವ್ರಿಗೇನು ಬೇಸರವಿಲ್ಲ. ಮದುವೆ ಯಾಕೆ ಆಗಿಲ್ಲ ಅಂದರೆ ನನಗೆ ಮದುವೆ ಆಗಬೇಕು ಅನ್ನಿಸೋ ಹುಡುಗ ಸಿಕ್ಕಿಲ್ಲ ಅದಕ್ಕೆ ಸಿಂಗಲ್ ಆಗಿಯೇ ಇದ್ದಿನಿ ಅಂತಾರೆ. ಒಟ್ಟಾರೆ ಹದಿನೈದು ವರ್ಷಗಳು ಚಿತ್ರರಂಗದಲ್ಲಿ ಮಿಂಚಿ ಈಗ ತಾನಾಯ್ತು ತನ್ನ ಆಸೆ ಕನಸುಗಳಾಯ್ತು ಅಂತಿದ್ದಾರೆ ಸದಾ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?