ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!

Published : Feb 18, 2024, 04:52 PM ISTUpdated : Feb 18, 2024, 05:17 PM IST
ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!

ಸಾರಾಂಶ

ನಟರಾದ ಅಂಬರೀಷ್ ಹಾಗು ವಿಷ್ಣುವರ್ಧನ್ ಸ್ನೇಹ ಅಂತಿಂಥದ್ದಲ್ಲ. ವಿಷ್ಣುವರ್ಧನ್-ಭಾರತಿ ಮದುವೆ ವೇಳೆ ನಡೆದ ಗಲಾಟೆ ಇರಬಹುದು ಅಥವಾ ಬೇರೆ ಸಮಯದಲ್ಲಿ ವಿಷ್ಣು ಸಿನಿಮಾರಂಗದಲ್ಲಿ ಒಬ್ಬಂಟಿ ಎನಿಸಿದಾಗಲೆಲ್ಲ ಅವರಿಗೆ ಸಂಪೂರ್ಣ ಸಾಥ್ ಕೊಟ್ಟಿದ್ದು ಅಂಬರೀಷ್.

ಕನ್ನಡ ಚಿತ್ರರಂಗದ ಸಾಹಸಸಿಂಹ ಖ್ಯಾತಿಯ ನಟ ಡಾ ವಿಷ್ಣುವರ್ಧನ್ (Vishnuvardhan) ಹಾಗು ರೆಬೆಲ್ ಸ್ಟಾರ್ ಖ್ಯಾತಿಯ ನಟ ಅಂಬರೀಷ್ (Ambareesh)ಅವರು ಕ್ಲೋಸ್ ಫ್ರೆಂಡ್ಸ್ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು.. ಅವರಿಬ್ಬರೂ ತಮ್ಮ ಸ್ನೇಹದ ಸಂಕೇತವನ್ನು ಪ್ರತಿನಿಧಿಸುವಂತೆ 'ದಿಗ್ಗಜರು' ಸಿನಿಮಾವನ್ನು ಮಾಡಿ ಚಿತ್ರವು ಸೂಪರ್ ಹಿಟ್ ಆಗುವುದರ ಜೊತೆಗೆ ಅವರಿಬ್ಬರ ಸ್ನೇಹ ಸಿನಿಮಾದಂತೆ, ಅದಕ್ಕಿಂತಲೂ ಸ್ವಲ್ಪ ಹೆಚ್ಚೇ ಎನ್ನುವಷ್ಟು ಅಮೋಘ ಎಂಬ ಮೆಚ್ಚುಗೆ ವ್ಯಕ್ತವಾಗಿತ್ತು.

ವಿಷ್ಣು-ಅಂಬಿ ಅವರದು ಸಿನಿಮಾ ಸ್ನೇಹವಲ್ಲ, ಸಿನಿಮಾ ಮೀರಿದ ನೈಜ ಜೀವನದ ಸ್ನೇಹ. ಅವರಿಬ್ಬರೂ ಯಾವತ್ತೂ ಬೇರೆ ಬೇರೆ ಯೋಚನೆ ಮಾಡಿದ್ದೇ ಇಲ್ಲ ಎಂಬಷ್ಟರ ಮಟ್ಟಿಗೆ 'ಕುಚಿಕೂ' ಫ್ರೆಂಡ್ಸ್. ನಟ ಅಂಬರೀಷ್ ಒಮ್ಮೆ ವಿಷ್ಣುವರ್ಧನ್  (Dr Vishnuvardhan) ಮನೆಗೆ ಬಂದಾಗ 'ಏನಪ್ಪಾ, ಸೂಪರ್ ಸ್ಟಾರ್ ಮನೆ. ಇದು.. ಆದ್ರೆ ಗುಂಡಿಲ್ಲ ತುಂಡಿಲ್ಲ..' ಅಂತ ತಮಾಷೆ ಮಾಡಿದ್ರಂತೆ. ಅದರ ಮರುದಿನವೇ ವಿಷ್ಣುವರ್ಧನ್ ತಮ್ಮ ಸ್ವಂತ ಮನೆಯಲ್ಲೇ ಅಂಬರೀಷ್ ಅವರಿಗಾಗಿ ಬಾರ್ ಒಂದನ್ನು ತೆರೆದಿದ್ದಾರಂತೆ.

ನಾನು ಯಾವ್ದೇ ವಿಷ್ಯದಲ್ಲಿ ಚೀಟ್ ಮಾಡಲ್ಲ; ರಾಕಿಂಗ್ ಸ್ಟಾರ್ ಯಶ್ ಹೀಗೆ ಹೇಳಿದ್ಯಾಕೆ?

ಅದರೊಳಗೆ ಅಂಬರೀಷ್ (Rebel Star Ambareesh) ಬಿಟ್ಟರೆ ಬೇರೆ ಯಾರಿಗೂ ಪ್ರವೇಶ ಇರಲಿಲ್ಲವಂತೆ. ಈ ಸಂಗತಿ ಮನೆಯವರಿಗೆ ಬಿಟ್ಟರೆ ತುಂಬಾ ಅತ್ಮೀಯರಿಗೂ ಸಂಬಂಧಿಕರಿಗೆ ಕೂಡ ಗೊತ್ತಿರಲಿಲ್ಲ ಎನ್ನಲಾಗಿದೆ. ನಂತರ ಅಂಬಿ ಬಂದಾಗಲೆಲ್ಲ ತಮ್ಮ ಸ್ನೇಹಿತ ವಿಷ್ಣುವಿನ ಸ್ಪೆಷಲ್‌ ಬಾರ್‌ನೊಳಕ್ಕೆ ಕುಳಿತು ಸ್ವಲ್ಪ ಟೈಮ್ ಸ್ಪೆಂಡ್‌ ಮಾಡಿಯೇ ಹೋಗುತ್ತಿದ್ದರಂತೆ. ನಟರಾದ ಅಂಬರೀಷ್ ಹಾಗು ವಿಷ್ಣುವರ್ಧನ್ ಸ್ನೇಹ ಅಂತಿಂಥದ್ದಲ್ಲ.

ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ಲೈನ್‌ಮ್ಯಾನ್; ರಘು ಶಾಸ್ತ್ರಿ ಚಿತ್ರ ಮ್ಯಾಜಿಕ್ ಮಾಡಬಹುದೇ?

ವಿಷ್ಣುವರ್ಧನ್-ಭಾರತಿ ಮದುವೆ ವೇಳೆ ನಡೆದ ಗಲಾಟೆ ಇರಬಹುದು ಅಥವಾ ಬೇರೆ ಸಮಯದಲ್ಲಿ ವಿಷ್ಣು ಸಿನಿಮಾರಂಗದಲ್ಲಿ ಒಬ್ಬಂಟಿ ಎನಿಸಿದಾಗಲೆಲ್ಲ ಅವರಿಗೆ ಸಂಪೂರ್ಣ ಸಾಥ್ ಕೊಟ್ಟಿದ್ದು ಅಂಬರೀಷ್. ವಿಷ್ಣುವರ್ಧನ್ ಕೂಡ ಅಷ್ಟೇ, ಅಂಬಿಗೆ ಬೇಕು ಎನಿಸಿ ಕರೆದಾಗಲ್ಲೆಲ್ಲ ಬಂದು ಅವರ ಜತೆ ಕುಳಿತು ಮಾತುಕತೆಗೆ ಸಿಗುತ್ತಿದ್ದರು. ಅವರಿಬ್ಬರ ಸ್ನೇಹ ಅದ್ಯಾವ ಮಟ್ಟಿಗೆ ಫೇಮಸ್ ಆಗಿತ್ತು ಎಂದರೆ, ರೋಲ್ ಮಾಡೆಲ್ ಎಂಬಂತೆ ಇತ್ತು ಎನ್ನಬಹುದು. ಅವರಿಬ್ಬರು 'ಆಪ್ತಮಿತ್ರ'ರಾಗಿ ಒಬ್ಬರಿಗೊಬ್ಬರು 'ಆಪ್ತರಕ್ಷಕ'ರಂತೆ ಇದ್ದರು.

ಜಗತ್ತು ನಿಮ್ಮನ್ನು ನೆಲಕ್ಕೆ ಹಾಕಿ ನಗಬಹುದು, ಅದಕ್ಕೇನು ಮಾಡ್ಬೇಕು ಅಂತ ಗೊತ್ತಿರಲಿ; ಪ್ರಿಯಾಂಕಾ ಚೋಪ್ರಾ

ಒಟ್ಟಿನಲ್ಲಿ, ಅವರಿಬ್ಬರ ಕುಚಿಕೂ ಸ್ನೇಹಕ್ಕೆ ನಟ ವಿಷ್ಣುವರ್ಧನ್ ಅವರು ಮನೆಯಲ್ಲಿಯೇ ಸ್ಪೆಷಲ್ ಬಾರ್ ಓಪನ್ ಮಾಡಿರುವುದು ಕೂಡ ಒಂದು ದೊಡ್ಡ ಸಾಕ್ಷಿಯೇ ಎನ್ನಬಹುದು. ಅಷ್ಟೇ ಅಲ್ಲ, ನಟ ವಿಷ್ಣುವರ್ಧನ್ ತಮ್ಮ 59ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದಾಗ (30 December 2009) ಅವರ ಅಂತಿಮ ಸಂಸ್ಕಾರದ ಜವಾಬ್ದಾರಿಯನ್ನು ಸ್ವತಃ ತೆಗೆದುಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಸ್ನೇಹದ ಸಾರ್ಥಕತೆ ಮೆರೆದವರು ನಟ ಅಂಬರೀಷ್. ಅಂಬಿ ಅಷ್ಟು ಹತ್ತಿರವಾಗುವಂತೆ, ಅದನ್ನು ಕಾಪಾಡಿಕೊಂಡು ಬರುವಂಥವರು ಆಗಿದ್ದರು ನಟ ವಿಷ್ಣುವರ್ಧನ್. ಈಗಲೂ ಕೂಡ ಸ್ನೇಹಿತರು ಎಂದರೆ ಅದು ವಿಷ್ಣು-ಅಂಬಿ ಎಂತಲೇ ಪ್ರಸಿದ್ಧಿ. 

ಪ್ರತಿ ಅಮಾವಾಸ್ಯೆಗೆ 15 ಮಕ್ಕಳ ನರಬಲಿ; ರವಿಶಂಕರ್ ಗುರೂಜಿ ಬಗ್ಗೆ ಹೇಳಿದ್ರಾ ಅಗ್ನಿ ಶ್ರೀಧರ್!?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೀಮಂತ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ನಟಿ ಸಂಧ್ಯಾ ಅರಕೆರೆ : PHOTOS
Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ