ಡಬಲ್ ಮರ್ಡರರ್ ಸುರೇಶ್‌ಗೂ, ದುನಿಯಾ ವಿಜಿಯ್‌ಗೂ ಸಂಬಂಧವೇ ಇಲ್ಲ; ಆದ್ರೂ ಬೇಲ್ ಕೊಟ್ಟಿದ್ಯಾಕೆ?

By Sathish Kumar KH  |  First Published Nov 16, 2024, 12:28 PM IST

ನಟ ದುನಿಯಾ ವಿಜಯ್ ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಿಸಿದ್ದ ವ್ಯಕ್ತಿಯೊಬ್ಬ ಡಬಲ್ ಮರ್ಡರ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ದುನಿಯಾ ವಿಜಯ್ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.


ಬೆಂಗಳೂರು (ನ.16): ಸ್ಯಾಂಡಲ್‌ವುಟ್ ನಟ ದುನಿಯಾ ವಿಜಯ್ ಅವರು ಕಳೆದ ಜನವರಿಯಲ್ಲಿ ಜೈಲಿನಲ್ಲಿದ್ದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಅಪರಾಧಿ ಸುರೇಶ್ ಸೇರಿದಂತೆ 10 ಮಂದಿಗೆ ಜಾಮೀನಿಗೆ ಶ್ಯೂರಿಟಿ ನೀಡಿ, ಅವರನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬಂದಿದ್ದನು. ಆದರೆ, ಇದೀಗ ಅದೇ ಸುರೇಶ್ ಜಲೈನಿಂದ ಹೊರಬಂದು 10 ತಿಂಗಳಾಗುವಷ್ಟರಲ್ಲಿ ಬಾಗಲೂರಿನಲ್ಲಿ ಡಬಲ್ ಮರ್ಡರ್ ಮಾಡಿದ್ದಾನೆ. ಇದೀಗ ದುನಿಯಾ ವಿಜಯ್‌ಗೆ ಮಾನವೀಯತೆಯೇ ಮುಳುವಾಗಿದ್ದು, ಪೊಲೀಸರು ವಿಚಾರಣೆಗೆ ಕರೆಯಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಸೋಮವಾರ (ನ.11ರಂದು) ಬೆಂಗಳೂರು ಹೊರಹೊಲಯದ ಬಾಗಲೂರಿನ ಬಸ್‌ ಸರ್ವಿಸ್ ಸ್ಟೇಷನ್‌ನಲ್ಲಿ ಡಬಲ್ ಮರ್ಡರ್ ನಡೆದಿತ್ತು. ಇಬ್ಬರನ್ನು ಕೊಲೆ ಮಾಡಿ ಪರಾರಿ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಕೊಲೆ ಆರೋಪಿ ಯಾರೆಂದು ಪರಿಶೀಲನೆ ಮಾಡಿದಾಗ ಈತ ನಟ ದುನಿಯಾ ವಿಜಯ್ ಅವರು ಜಾಮೀನು ಶ್ಯೂರಿಟಿ ಕೊಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ್ದ ಸುರೇಶ್ ಎಂಬುವ ವ್ಯಕ್ತಿ ಎನ್ನುವುದು ತಿಳಿದುಬಂದಿದೆ. ಇನ್ನು ಕೊಲೆಯಾದವರು ನಾಗೇಶ್ (55) ಮತ್ತು ಮಂಜುನಾಥ್ (50) ಆಗಿದ್ದಾರೆ. ಇನ್ನು ಮಾನವೀಯತೆ ಆಧಾರದಲ್ಲಿ ನಟ ದುನಿಯಾ ವಿಜಯ್ ಜಾಮೀನು ಕೊಟ್ಟು ಬಿಡಿಸಿದ್ದ ಸುರೇಶ್ ಕೊಲೆ ಮಾಡಿದ್ದರಿಂದ ಈಗ ನಟನಿಗೂ ಸಂಕಷ್ಟ ಎದುರಾಗಿದೆ.

Tap to resize

Latest Videos

undefined

ಬೆಂಗಳೂರು ಉತ್ತರ ತಾಲ್ಲೂಕಿನ ಸಿಂಗಹಳ್ಳಿ ಗ್ರಾಮದ ಎಸ್ ಆರ್ ಎಸ್ ಟ್ರಾವೆಲ್ಸ್ ನ ಪಾರ್ಕಿಂಗ್  ಶೆಡ್‌ನಲ್ಲಿ ಸುರೇಶ್ ಸೇರಿದಂತೆ ಕೊಲೆಯಾದ ನಾಗೇಶ್, ಮಂಜುನಾಥ್ ಸೇರಿ ಮೂವರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆದರೆ, ಇವರಿಬ್ಬರೂ ಜೈಲಿಗೆ ಹೋಗಿ ಬಂದಿದ್ದ ಸುರೇಶ್‌ಗೆ ಹೀಯಾಳಿಸಿ ಬೈಯುತ್ತಿದ್ದರು. ಕಳೆದ ಶುಕ್ರವಾರ ಕೂಡ ಕೆಲಸ ಮಾಡುವ ಸ್ಥಳದಲ್ಲಿ ನಾಗೇಶ್ ಮತ್ತು ಮಂಜುನಾಥ್ ಕುಡಿದ ಬಂದು ಸುರೇಶನಿಗೆ ಬೈದಿದ್ದಾರೆ. ನೀನು ಕಳ್ಳ, ನೀನು ಕೊಲೆಗಡುಕ, ನಿನ್ನ ಮೇಲೆ ಹಲವು ಕೇಸುಗಳಿವೆ ಎಂದು ಹೀಯಾಳಿಸಿ ಬೈಯುತ್ತಿದ್ದರು. ಇದರಿಂದ ತೀವ್ರ ಕೋಪಗೊಂಡ ಸುರೇಶ್ ತನ್ನನ್ನು ಬೈಯುತ್ತಿದ್ದ ಇಬ್ಬರನ್ನೂ ಅಲ್ಲಿಯೇ ಇದ್ದ ರಾಡ್‌ನಿಂದ ಹೊಡೆದು ಕೊಲೆ ಮಾಡಿ ಪರಾರಿ ಆಗಿದ್ದನು. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ: ಬಿಗ್‌ಬಾಸ್‌ ಕನ್ನಡ 11: ಧನರಾಜ್‌ನನ್ನು ಜೈಲಿಗೆ ಕಳಿಸಿದ ಮೋಕ್ಷಿತಾ ವಿರುದ್ಧ ತಿರುಗಿಬಿದ್ದ ವೀಕ್ಷಕರು

ನಟ ದುನಿಯಾ ವಿಜಯ್ ಗೊತ್ತೇ ಇಲ್ಲವೆಂದ ಆರೋಪಿ ಸುರೇಶ್: ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸಿಗೆ ಸಂಬಂಧಪಟ್ಟಂತೆ ವಿಚಾರಣೆ ಮಾಡುವಾಗ ನಟ ದುನಿಯಾ ವಿಜಯ್ ಆರೋಪಿ ಸುರೇಶನನ್ನು ಯಾಕೆ ಜೈಲಿನಿಂದ ಬಿಡಿಸಿದ್ದರು ಎಂಬುದನ್ನೂ ವಿಚಾರಣೆ ಮಾಡಿದ್ದಾರೆ. ಆಗ ಆರೋಪಿಗೆ ನಟ ದುನಿಯಾ ವಿಜಯ್ ಬಗ್ಗೆ ಕೇಳಿದಾಗ ನನಗೆ ನಟ ವಿಜಯ್ ಬಗ್ಗೆ ಗೊತ್ತೇ ಇಲ್ಲ, ನನ್ನನ್ನ ಯಾರ್ ಬಿಡಿಸಿದ್ರೋ ಗೊತ್ತೇ ಇಲ್ಲ ಎಂದು ಹೇಳಿದ್ದಾನೆ. ಇಲ್ಲಿ ತನ್ನನ್ನು ಯಾರು ಬಿಡಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳದೇ ನಟ ದುನಿಯಾ ವಿಜಿ ಬಗ್ಗೆ ಕೃತಜ್ಞತೆ ಇಲ್ಲದೆ, ಪಶ್ಚಾತ್ತಾಪ ವಿಲ್ಲದ ಹೇಳಿಕೆ ನೀಡಿದ್ದಾನೆ. ಇದೀಗ ಈ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಹೇಳಿಕೆ ಪಡೆಯುವ ಬಗ್ಗೆ ಪೊಲೀಸರಲ್ಲಿ ಚರ್ಚೆ ನಡೆಯುತ್ತಿದೆ. ಬಾಗಲೂರು ಠಾಣೆ ಪೊಲೀಸರು ಹಿರಿಯ ಅಧಿಕಾರಿಗಳ ಬಳಿ ಚರ್ಚೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮೆಜೆಸ್ಟಿಕ್ ಬಸ್‌ಸ್ಟಾಂಡಿನಲ್ಲಿ ಮಲಗಿದ ಆ ರಾತ್ರಿ ಆದ ಘಟನೆಯಿಂದ ಯಶ್ ಇಷ್ಟೆಲ್ಲ ಸಾಧಿಸೋದಕ್ಕಾಯ್ತು! ಆ ಘಟನೆ ಏನು?

click me!