'ಭೈರತಿ ರಣಗಲ್' ಸಿನಿಮಾ ನೋಡಲು ಫ್ಯಾನ್ಸ್‌ ಜೊತೆ ಕೈ ಜೋಡಿಸಿದ ಧನಂಜಯ್; ಡಾಲಿ ಹೊಸ ಲುಕ್ ಹೇಗಿದೆ?

By Vaishnavi Chandrashekar  |  First Published Nov 16, 2024, 12:27 PM IST

ಅಭಿಮಾನಿಗಳ ಜೊತೆ ಅಭಿಮಾನಿಯಾಗಿ ಹ್ಯಾಟ್ರಿಕ್ ಹೀರೋ ಸಿನಿಮಾ ನೋಡಲು ಹೋದ ಡಾಲಿ ಧನಂಜಯ್. ನಾನು ಒಬ್ಬ ಫ್ಯಾನ್ಸ್‌ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 


ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ತೆಲುಗು ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತಮ್ಮ ಝೀಬ್ರಾ ಸಿನಿಮಾ ರಿಲೀಸ್‌ಗೆ ಸಜ್ಜಾಗಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ ತಮ್ಮ ನೆಚ್ಚಿನ ನಟ ಸಿನಿಮಾ ನೋಡಲು ಬಂದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ಸುಮಾರು 360 ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗಿದೆ. ಮೊದಲ ದಿನವೇ ಸಿಕ್ಕ ಪ್ರತಿಕ್ರಿಯೆ ನೋಡಿದರೆ ಬಾಕ್ಸ್ ಆಫೀಸ್‌ ಕಲೆಕ್ಷನ್‌ನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡುವುದರಲ್ಲಿ ಅನುಮಾನವಿಲ್ಲ. 

ಭೈರತಿ ರಣಗಲ್ ಸಿನಿಮಾದ ಪ್ರಮುಖ ಚಿತ್ರಮಂದಿರ ನರ್ತಕಿ. ಶಿವಣ್ಣನ ಕಟೌಟ್‌ ಮತ್ತು ಪೋಸ್ಟರ್‌ಗಳಿಗೆ ಹಾರ ಹಾಕಿ ಹಾಲಿನ ಅಭಿಷೇಕ್ ಮಾಡಿ ಸಂಭ್ರಮಿಸಿದ್ದಾರೆ. ಶಿವಣ್ಣ ಜೊತೆ ಎರಡು ಸಿನಿಮಾಗಳಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ, ಪ್ರತಿ ಸಲವೂ ನಾನು ಶಿವಣ್ಣ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಹೀಗಾಗಿ ಅಭಿಮಾನಿಗಳ ಜೊತೆ ಅಭಿಮಾನಿಯಂತೆ ಭೈರತಿ ಸಿನಿಮಾ ನೋಡಲು ಶಿವಣ್ಣನ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಕಪ್ಪು ಪಂಚೆ ಕಪ್ಪು ಶರ್ಟ್‌ ಕೈಯಲ್ಲಿ ಒಂದು ವಾಚ್ ಧರಿಸಿ ಧನು ಎಂಟ್ರಿ ಕೊಟ್ಟಿರುವುದು ಅಲ್ಲಿದ ಜನರ ಕ್ರೇಜ್ ಹೆಚ್ಚಿಸಿದೆ. 

Tap to resize

Latest Videos

undefined

ಲಕ್ಷ ದುಡಿದು ಎಣಿಸೋಕೆ ಕಷ್ಟ ಪಡ್ತಿದ್ದೆ ಈಗ ಕೋಟಿ ಕೋಟಿ ಬರ್ತಿದೆ; ಹಿಂದಿ ಬಿಗ್ ಬಾಸ್‌ಗೆ ಲಾಯರ್

ಏನಿದು ಚಪ್ಪಲಿ ವಿಡಿಯೋ?

ನರ್ತಕಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡುವ ಮುನ್ನ ಶಿವಣ್ಣನ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಡಾಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ವೇಳೆ ಚಪ್ಪಲಿ ಧರಿಸುವುದನ್ನು ಮರೆತಿದ್ದಾರೆ..ಚಪ್ಪಲಿ ಎಲ್ಲಿದೆ ಎಂದು ಅತ್ತ ಇತ್ತ ನೋಡುತ್ತಿರುವಾಗ ಆಪ್ತ ಸಹಾಯಕನೊಬ್ಬ ಕವರ್‌ನಲ್ಲಿದ್ದ ಚಪ್ಪಲಿಯನ್ನು ತೆಗೆದು ಡಾಲಿ ಧನಂಜಯ್‌ಗೆ ತೊಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಖತ್ ನೆಗೆಟಿವ್ ಕಾಮೆಂಟ್‌ ಬರುತ್ತಿದೆ ಆದರೆ ಅಸಿಸ್ಟೆಂಟ್‌ ಮಾಡುವ ಕೆಲಸ ಇದೆ ಇದರಲ್ಲಿ ಡಾಲಿ ತಪ್ಪು ಏನಿಲ್ಲ ಎಂದು ಅಭಿಮಾನಿಗಳು ಪರವಾಗಿ ಬ್ಯಾಟ್ ಬೀಸಿದ್ದಾರೆ.

ಸಾಮಾನ್ಯವಾಗಿ ಧನಂಜಯ್ ಕಾಂಟ್ರವರ್ಸಿಗಳಿಂದ ಸಿಕ್ಕಾಪಟ್ಟೆ ದೂರ. ಗೊತ್ತಿದ್ದೋ ಗೊತ್ತಿಲ್ಲದೆನೋ  ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಡಾಲಿ ಜೀವನ ಇದೀಗ ಕಲರ್‌ಫುಲ್ ಆಗುತ್ತಿದೆ ಹೀಗಾಗಿ ಕೆಲವು ಕಿಡಿಗೇಡಿಗಳು ನೆಗೆಟಿವ್ ಕಾಮೆಂಟ್ ನೆಗೆಟಿವ್ ಟ್ರೋಲ್ ಮಾಡುವುದು ತುಂಬಾನೇ ಕಾಮನ್ ಆಗಿಬಿಟ್ಟಿದೆ. ಏನೇ ಎದುರಾಗಲಿ ಡಾಲಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ.

ಮತ್ತೆ ಪ್ರಥಮ್ ಜೊತೆ ದರ್ಶನ್ ಫ್ಯಾನ್ಸ್‌ ಕಿರಿಕ್

click me!