ಪ್ರೇಮ ಲೋಕ-2ಗೆ ಡೇಟ್​ ಫಿಕ್ಸ್​! ಹೊಸಬರಿಗೂ ಭರ್ಜರಿ ಆಫರ್​: ಕ್ರೇಜಿಸ್ಟಾರ್​ ಹೇಳಿದ್ದೇನು?

Published : Mar 05, 2024, 09:33 PM IST
ಪ್ರೇಮ ಲೋಕ-2ಗೆ ಡೇಟ್​ ಫಿಕ್ಸ್​! ಹೊಸಬರಿಗೂ ಭರ್ಜರಿ ಆಫರ್​: ಕ್ರೇಜಿಸ್ಟಾರ್​ ಹೇಳಿದ್ದೇನು?

ಸಾರಾಂಶ

ಪ್ರೇಮ ಲೋಕ ಶೂಟಿಂಗ್​ ಯಾವಾಗ ನಡೆಯಲಿದೆ, ಇದರಲ್ಲಿ ಹೊಸಬರು ನಟಿಸಲು ಏನು ಮಾಡಬೇಕು ಎಂಬಿತ್ಯಾದಿ ಬಗ್ಗೆ ರವಿಚಂದ್ರನ್​ ಹೇಳಿದ್ದೇನು?  

1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ಇಂದಿಗೂ ಪ್ರಸ್ತುತ. ಚಿತ್ರ ಬಿಡುಗಡೆಯಾಗಿ 37 ವರ್ಷ ಆಗುತ್ತಾ ಬಂದರೂ ಇದರ ಹಾಡುಗಳು ಇಂದಿಗೂ ಎಲ್ಲರ ಮನಸ್ಸಿನಲ್ಲಿಯೂ ನೆಲೆಯೂರಿ ನಿಂತಿದೆ. ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ನಿರ್ಮಿಸಿದ ಸಿನಿಮಾಗಳಲ್ಲಿ ಇದೂ ಒಂದು.  ಕ್ರೇಜಿ ಸ್ಟಾರ್​ ರವಿಚಂದ್ರನ್​ ಅವರಿಗೆ ದೊಡ್ಡ ಮಟ್ಟಿನ ಯಶಸ್ಸು ತಂದುಕೊಟ್ಟ ಚಿತ್ರವಿದು. ಇದೀಗ ಪ್ರೇಮಲೋಕ-2 ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟಿದ್ದಾರೆ ರವಿಚಂದ್ರನ್​. ಮೇ 30 ಕ್ಕೆ ಪ್ರೇಮಲೋಕ 2 ಸಿನಿಮಾ ಶೂಟಿಂಗ್​ ಶುರುವಾಗಲಿದೆ ಎಂದು ರವಿಚಂದ್ರನ್ ಹೇಳಿದ್ದಾರೆ. ಈ ಮೊದಲು ಬಿಡುಗಡೆಯಾಗಿದ್ದ ಪ್ರೇಮಲೋಕ ಚಿತ್ರದಲ್ಲಿ ಬರೋಬ್ಬರಿ  11 ಹಾಡುಗಳು ಇದ್ದವು. ಆದರೆ  ಪ್ರೇಮಲೋಕ 2 ನಲ್ಲಿ 20 ರಿಂದ 25 ಹಾಡುಗಳು ಇರಲಿವೆ ಎನ್ನುವ ಮೂಲಕ ಅಚ್ಚರಿ ಹುಟ್ಟುಹಾಕಿದ್ದಾರೆ.
 
ಪ್ರೇಮಲೋಕ-2 ಇನ್ನಷ್ಟು ಸದ್ದು ಮಾಡಲು ಕಾರಣ, ಇದರಲ್ಲಿ ಭರಪೂರ ಕೊಡುಗೆಯನ್ನು ರವಿಚಂದ್ರನ್​ ನೀಡಿದ್ದಾರೆ. ಸಿನಿಮಾದಲ್ಲಿ ನಟಿಸುವ ಕನಸು ಕಾಣುತ್ತಿರುವವರಿಗೆ ದೊಡ್ಡ ಆಫರ್​ ಕೊಟ್ಟಿದ್ದಾರೆ. ಪ್ರೇಮಲೋಕ 2 ರಲ್ಲಿ ಕಥೆ ನಡೆಯುವುದು ಜನರ ಮಧ್ಯೆಯೇ ಎಂದ ಅವರು,   ನಟಿಸುವ ಆಸೆಇರುವವರು ತಮ್ಮ ಇನ್ಸ್ಟಾಗ್ರಾಮ್​ಗೆ ಫ್ಯಾಮಿಲಿ ಫೋಟೋ ಕಳಿಸಿ. ನಾನು ಅವರನ್ನು ಕರೆದು ಅವಕಾಶ ಕೊಡುತ್ತೇನೆ ಎಂದಿದ್ದಾರೆ.  ‘ಪ್ರೇಮಲೋಕದ ಗೆಲುವು ನಿಮ್ಮದು. ಆ ಸಿನಿಮಾ ನಿಮ್ಮದು. ನೀವು ಗೆಲ್ಲಿಸಿರೋದು. ಮತ್ತೆ ಪ್ರೇಮಲೋಕ ಸೃಷ್ಟಿ ಮಾಡಬೇಕು ಎನ್ನುವ ಆಸೆ ನನ್ನದು’ ಎಂದಿದ್ದಾರೆ ರವಿಚಂದ್ರನ್. 

ಅನೇಕ ಮಕ್ಕಳ ಆಸೆ ಹೊಂದಿರೋ ಪರಿಣಿತಿ ಚೋಪ್ರಾ ಗರ್ಭಿಣಿ? ಐದು ತಿಂಗಳಿಗೇ ಕೊಟ್ರಾ ಗುಡ್​ ನ್ಯೂಸ್​?

ಅಂದಹಾಗೆ ರವಿಚಂದ್ರನ್​ ಈ ವಿಷಯ ತಿಳಿದಿರುವುದು ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ. ‘ಮೇ 30ಕ್ಕೆ ಪ್ರೇಮಲೋಕ 2 ಸಿನಿಮಾ ಶುರುವಾಗುತ್ತದೆ. ದೊಡ್ಡ ಮಗ ಮನೋರಂಜನ್ ನಟಿಸುತ್ತಾನೆ. ಚಿಕ್ಕ ಮಗ ಚಿಕ್ಕ ಪಾತ್ರ ಮಾಡುತ್ತಾನೆ. ನಾನು ತಂದೆಯ ಪಾತ್ರ ಮಾಡುತ್ತೇನೆ. 20-25 ಹಾಡುಗಳು ಇರುತ್ತವೆ. ಎಲ್ಲಾ ವಯಸ್ಸಿನವರಿಗೂ ಸಿನಿಮಾ ಇಷ್ಟ ಆಗುತ್ತದೆ. ಸಿನಿಮಾದಲ್ಲಿ ಪ್ರೀತಿ ಮೆಲುಕು ಹಾಕುತ್ತಾ ಹೋಗುತ್ತೀರಾ. ಇಲ್ಲಿ ಜಾತಿ, ರಾಜಕೀಯದ ವಿಚಾರ ಇಲ್ಲ. ಕೇವಲ ಪ್ರೀತಿ ವಿಚಾರ ಇದೆ’ ಎಂದಿದ್ದಾರೆ ಅವರು.

ಇದೇ ಸಂದರ್ಭದಲ್ಲಿ  ಬಾಲ್ಯ ದಿನಗಳನ್ನು ನೆನಪು ಮಾಡಿಕೊಂಡ ಅವರು,  ನಾನು ಶಾಲೆಗೆ ಹೋಗಿಲ್ಲ. 6ನೇ ಕ್ಲಾಸ್ ಗೆ ಫೇಲ್ ಆಗಿದ್ದೇ. ಟೀಚರ್​  ನನಗೇ  ಪ್ರಶ್ನೆ ಕೇಳುತ್ತಿದ್ದರು. ಅನೇಕ ಬಾರಿ ಉತ್ತರ ಕೊಡದೆ ನಾನೇ ಬೆಂಚ್ ಮೇಲೆ ಎದ್ದು ನಿಲ್ಲುತ್ತಿದ್ದೆ. ಒಂದು ದಿನ ಟೀಚರ್ ನನ್ನನ್ನು ಬೈದಾಗ ನಾನು ಶಾಲೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟೆ ಎಂದರು. ಮನುಷ್ಯನಿಗೆ ದುಡ್ಡು ಬೇಕಾಗಿಲ್ಲ, ಪ್ರೀತಿ ಬೇಕಾಗಿದೆ. ಒಂದು ಗಂಟೆ ಮೊಬೈಲ್ ಬಿಟ್ಟು ಡೈನಿಂಗ್ ಟೇಬಲ್ ಮೇಲೆ ಕೂತರೆ. ಪ್ರತಿ ಮನೆಯಲ್ಲೂ ಪ್ರೇಮಲೋಕ ಸೃಷ್ಟಿಯಾಗುತ್ತೆ ಎಂದು ಅವರು ಹೇಳಿದರು. 'ರವಿ ಬೋಪಣ್ಣ' ಬಳಿಕ ರವಿಚಂದ್ರನ್ ಅವರು ಯಾವ ಸಿನಿಮಾವನ್ನು ನಿರ್ದೇಶನ ಮಾಡಿಲ್ಲ. ಇದೀಗ 'ಪ್ರೇಮಲೋಕ 2' ಸಿನಿಮಾ ಮಾಡುವುದಾಗಿ ರವಿಚಂದ್ರನ್ ಹೇಳಿಕೊಂಡಿದ್ದಾರೆ. 'ಪ್ರೇಮಲೋಕ' ತೆರೆಕಂಡು 37 ವರ್ಷಗಳ ಬಳಿಕ ಅದರ ಪಾರ್ಟ್ 2 ಬರುತ್ತಿರುವುದು ವಿಶೇಷ.

ಅನಂತ್‌ ಅಂಬಾನಿ ಮದ್ವೆಯಲ್ಲಿ ರಾಮ್‌ಚರಣ್‌ಗೆ ಶಾರುಖ್‌ ಖಾನ್‌ ಇದೆಂಥ ಇನ್‌ಸಲ್ಟ್‌? ಫ್ಯಾನ್ಸ್‌ ಕಿಡಿಕಿಡಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಭಿಮಾನಿಗಳು ಹೊಡೆದಾಡಬೇಡಿ, ನಿಮ್ಮ ಬದುಕು ಕಟ್ಟಿಕೊಳ್ಳಿ: ನಟ ಡಾಲಿ ಧನಂಜಯ ಮನವಿ
ಕನ್ನಡ ಚಿತ್ರರಂಗದಲ್ಲಿ ‘ಅಪ್ಪ’ ಸ್ಟಾರ್ ಆದ್ರೂ, ಮಕ್ಕಳು ಯಶಸ್ಸು ಕಾಣಲೇ ಇಲ್ಲ