
ಬೆಂಗಳೂರು: ಕರಾಟೆ ಕಿಂಗ್ ಶಂಕರ್ ನಾಗ್ ಸಿನಿಮಾಗಳ ಜೊತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದಿದ ಮೇರುನಟ. ಚಿಕ್ಕ ವಯಸ್ಸಿನಲ್ಲಿಯೇ ಅಗಲಿದ ಶಂಕರ್‌ನಾಗ್, ಇದ್ದಿದ್ರೆ ಚಂದನವನ ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಾ, ದಾಖಲೆಗಳನ್ನು ಬರೆಯುತ್ತಿತ್ತು. ಶಂಕರ್ ನಾಗ್ ಅವರ ಸಿನಿಮಾಗಳು ಉದಯನ್ಮೋಖ ಕಲಾವಿದರಿಗೆ ವಿಶ್ವವಿದ್ಯಾಲಯ ಆಗಿವೆ. ಶಂಕರ್ ನಾಗ್ ಆಲೋಚನೆಗಳನ್ನು ಇಂದಿಗೂ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಶಂಕರ್‌ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಇಡೀ ದೇಶವೇ ಮೆಚ್ಚುಕೊಂಡಿತ್ತು. ಕೋವಿಡ್ ಕಾಲಘಟ್ಟದಲ್ಲಿ ಮರುಪ್ರಸಾರಗೊಂಡಿದ್ದ ಮಾಲ್ಗುಡಿ ಡೇಸ್ ದಾಖಲೆಯಲ್ಲಿ ವೀಕ್ಷಣೆಯಾಗಿತ್ತು. ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ಸರಿಗಮಪ' ರಿಯಾಲಿಟಿ ಶೋನಲ್ಲಿ ಡ್ರಮರ್ ಅರುಣ್ ಕುಮಾರ್, ಕನ್ನಡಿಗರು ಹೆಮ್ಮೆಪಡುವಂತಹ ವಿಷಯವನ್ನು ಹಂಚಿಕೊಂಡಿದ್ದರು.
ಅರುಣ್ ಕುಮಾರ್ ಹೇಳಿದ ವಿಷಯ ಕೇಳಿ, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅಚ್ಚರಿ ವ್ಯಕ್ತಪಡಿಸಿದ್ದರು. ಈ ಹಿಂದಿನ ಸಂಚಿಕೆಯಲ್ಲಿ ಸ್ಪರ್ಧಿ ಶಿವಮೊಗ್ಗದ ಕಾರ್ತಿಕ್ ಎಂಬವರು 'ಗೀತಾ' ಸಿನಿಮಾದ "ಕೇಳದೇ ನಿಮಗೀಗ, ದೂರದಲ್ಲಿ ಯಾರು?" ಹಾಡನ್ನು ಅದ್ಭುತವಾಗಿ ಹಾಡಿದ್ದರು. ಹಾಡಿನ ಜೊತೆಯಲ್ಲಿ ಆ ದೃಶ್ಯವನ್ನು ಸಂಪೂರ್ಣವಾಗಿ ಮರುಸೃಷ್ಟಿಸಲಾಗಿತ್ತು. ಕಾರ್ತಿಕ್ ಹಾಡಿನ ಬಳಿಕ ಮಾತನಾಡಿದ ಅರುಣ್ ಕುಮಾರ್, ಕನ್ನಡಿಗರೆಲ್ಲರೂ ಹೆಮ್ಮಪಡುವಂತಹ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಇದೇ ಹಾಡನ್ನು ತಮಿಳಿನಲ್ಲಿಯೂ ರಿಮೇಕ್ ಮಾಡಲಾಗಿದೆ. ಕಾರ್ಯಕ್ರಮವೊಂದರಲ್ಲಿ ಈ ಹಾಡು ಕೇಳಿದ ಬಳಿಕ ಸಂಗೀತ ವೀಣಾ ವಾದಕ ರಾಜೇಶ್ ವೈದ್ಯ, ಇದು ತಮಿಳಿನ ಮೂಲ ಹಾಡು ಅಲ್ಲವೇ ಎಂದು ಇಳಯರಾಜ ಅವರನ್ನು ಕೇಳಿದ್ದರಂತೆ. ಇದಕ್ಕೆ ನೋ.. ಈ ಹಾಡು ಶಂಕರ್ ನಾಗ್ ಅವರದ್ದು. ಅವರೇ ಇಂತಹ ಸನ್ನಿವೇಶಕ್ಕಾಗಿ ಕಥೆ ಹೇಳಿ ಹಾಡು ಮಾಡಿದ್ದರು. ನಂತರ ಇದು ತಮಿಳಿನಲ್ಲಿ ರಿಮೇಕ್ ಮಾಡಲಾಯ್ತು ಎಂದು ತುಂಬಾ ಹೆಮ್ಮೆಯಿಂದ ಇಳಯರಾಜ ಹೇಳಿದ್ದರು. ಇದನ್ನು ದೂರದಲ್ಲಿ ನಿಂತಿದ್ದ ಅರುಣ್ ಕುಮಾರ್ ಅವರಿಗೆ ತುಂಬಾ ಸಂತೋಷವಾಗಿತ್ತು. ಇಳಯರಾಜ ಅವರಿಂದ ಇಂತಹ ಮಾತುಗಳನ್ನು ಕೇಳಿ ನನಗೆ ತುಂಬಾ ಸಂತೋಷವಾಗಿತ್ತು ಎಂದು ಅರುಣ್ ಕುಮಾರ್ ಹೇಳಿದ್ದರು.
ಇದನ್ನೂ ಓದಿ: ಒಬ್ಬನು ಹೋದ್ರೆ ಮತ್ತೊಬ್ಬನ ಕಥೆ ಮುಗೀತು; ಯಾಕೆ ಹಾಗೆ ಅಂದಿದ್ರು ಶಂಕರ್ ನಾಗ್?
1981ರಲ್ಲಿ ಬಿಡುಗಡೆಯಾದ ಗೀತಾ ಸಿನಿಮಾವನ್ನ ನಿರ್ದೇಶಿಸಿ ಶಂಕರ್ ನಾಗ್ ಅವರೇ ನಾಯಕ ನಟನಾಗಿ ನಟಿಸಿದ್ದರು. ಶಂಕರ್ ನಾಗ್ ಅವರಿಗೆ ಅಕ್ಷತಾ ರಾವ್ ನಾಯಕಿಯಾಗಿ ನಟಿಸಿದ್ದರು. ಚಿತ್ರಕ್ಕೆ ಇಳಯರಾಜ ಅವರು ಸಂಗೀತ ನೀಡಿದ್ದರು. ಗೀತಾ ಸಿನಿಮಾದ ಸಂತೋಷಕ್ಕೆ ಹಾಡು ಸಂತೋಷಕ್ಕೆ, ಗೀತಾ , ಕೇಳದೇ ನಿಮಗೀಗ, ಏನೇ ಕೇಳು, ನನ್ನ ಜೀವ, ಜೊತೆಯಲಿ ಹಾಡುಗಳು ಎವರ್ ಗ್ರೀನ್ ಲಿಸ್ಟ್‌ನಲ್ಲಿವೆ.
ಗಿರೀಶ್ ಕಾರ್ನಡ್ ಅವರ 'ಒಂದಾನೊಂದು ಕಾಲದಲ್ಲಿ' ಸಿನಿಮಾ ಮೂಲಕ ಹಿರಿತೆರೆಗೆ ಶಂಕರ್‌ನಾಗ್ ಎಂಟ್ರಿ ಕೊಟ್ಟಿದ್ದರು. ನಂತರ ಶಂಕರ್ ನಾಗ್ ಅವರ ನಟನೆಯ ಸೀತಾರಾಮು, ಆಟೋ ರಾಜ, ಪ್ರೀತಿ ಮಾಡು ತಮಾಷೆ ನೋಡು, ಸಾಂಗ್ಲಿಯಾನ, ಸಿಬಿಐ ಶಂಕರ್, ನ್ಯಾಯ ಎಲ್ಲಿದೆ, ನ್ಯಾಯ ಗೆದ್ದಿತ್ತು ಎಂಬ ಸೂಪರ್ ಹಿಟ್ ಸಿನಿಮಾಗಳನ್ನು ಶಂಕರ್ ನಾಗ್ ನೀಡಿದ್ದಾರೆ.
ಇದನ್ನೂ ಓದಿ: ಶಂಕರ್ ನಾಗ್ ಗುಟ್ಟು ಬಯಲು ಮಾಡಿದ 'ಸಿಬಿಐ ಶಂಕರ್' ನಟಿ ಸುಮನ್ ರಂಗನಾಥ್!
ಬೆಂಗಳೂರಿನಲ್ಲಿ ಮೆಟ್ರೋ ಕನಸು
ಶಂಕರ್ ನಾಗ್ ಅವರು ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ 1989ರಲ್ಲಿಯೇ ಮೆಟ್ರೋ ರೈಲು ಸೇವೆಯ ಕನಸು ಕಂಡು, ಬರೋಬ್ಬರಿ 9 ಲಕ್ಷ ರೂ. ಹಣವನ್ನು ವೆಚ್ಚ ಮಾಡಿ ಒಂದು ನೀಲನಕ್ಷೆಯನ್ನೂ ರಚಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.