
ಒಟಿಟಿಯಲ್ಲಿ ಸಿನಿಮಾ ನೋಡ್ತಿದ್ದ ಪ್ರೇಕ್ಷಕರನ್ನು ಥಿಯೇಟರ್ ಗೆ ಬರುವಂತೆ ಮಾಡಿದ ಸ್ಯಾಂಡಲ್ವುಡ್ ಸಿನಿಮಾ ಸು ಫ್ರಮ್ ಸೋ (Su from So) ಈಗ ಜಿಯೋ ಹಾಟ್ ಸ್ಟಾರ್ (Jio Hot Star) ನಲ್ಲಿ ಸ್ಟ್ರಿಮಿಂಗ್ ಆಗ್ತಿದೆ. ಥಿಯೇಟರ್ ನಲ್ಲಿ ನಾಲ್ಕೈದು ಬಾರಿ ಸಿನಿಮಾ ನೋಡಿ, ಹೊಟ್ಟೆ ಹುಣ್ಣಾಗುವಂತೆ ನಕ್ಕ ಫ್ಯಾನ್ಸ್, ಮನೆಯಲ್ಲಿ ಕುಳಿತು ಟೀ ಹೀರ್ತಾ ಮತ್ತೆ ಮತ್ತೆ ಸಿನಿಮಾ ನೋಡ್ತಿದ್ದಾರೆ. ಸು ಫ್ರಮ್ ಸೋ ಸಿನಿಮಾ ಶೂಟಿಂಗ್ ಬಗ್ಗೆ ಈಗಾಗಲೇ ನಿರ್ದೇಶಕ ಜೆಪಿ ತೂಮಿನಾಡ್ ಹಾಗೂ ನಟ ರಾಜ್ ಬಿ ಶೆಟ್ಟಿ ಅನೇಕ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಜಿಯೋ ಹಾಟ್ ಸ್ಟಾರ್ ನಲ್ಲಿ ಕೂಡ ಸಿನಿಮಾ ಕಲಾವಿದರು ತಮ್ಮ ಅನುಭವ ಹಂಚಿಕೊಳ್ತಿದ್ದಾರೆ.
ಎಂಜಲಲ್ಲಿ ಬಿದ್ದಿದ್ದ ಭಾವ ಅಲಿಯಾಸ್ ಪುಷ್ಪರಾಜ್ ಬೋಳಾರ್ ಹೇಳಿದ್ದೇನು? : ಸು ಫ್ರಮ್ ಸೋ ಸಿನಿಮಾದಲ್ಲಿ ಹೈಲೈಟ್ ಅಂದ್ರೆ ಭಾವ. ಸಿನಿಮಾದಲ್ಲಿ ಭಾವನ ಎಂಟ್ರಿ ಆಗ್ತಿದ್ದಂತೆ ನಗು ದುಪ್ಪಟ್ಟಾಗುತ್ತೆ. ಭಾವನ ಪಾತ್ರದಲ್ಲಿ ಮಿಂಚಿರುವ ಪುಷ್ಪರಾಜ್ ಬೋಳಾರ್ ನಟನೆಯನ್ನು ಫ್ಯಾನ್ಸ್, ಮನಸ್ಪೂರ್ವಕವಾಗಿ ಮೆಚ್ಚಿಕೊಂಡಿದ್ದಾರೆ. ಭಾವನಿಗೇ ವಿಶೇಷ ಸಾಂಗ್ ಒಂದನ್ನು ಸಿನಿಮಾದಲ್ಲಿ ನೋಡ್ಬಹುದು. ಅದು ರೀಲ್ಸ್ ಪ್ರೇಮಿಗಳ ಫೆವರೆಟ್ ಸಾಂಗ್. ಈ ಸಿನಿಮಾದಲ್ಲಿ ಕುಡಿದು ಮತ್ತಿನಲ್ಲಿ ತೇಲುವ ಭಾವ ಎಂಜಲು ಹಾಕುವ ಜಾಗದಲ್ಲಿ ಬಿದ್ದಿರ್ತಾನೆ. ಮೈಗೆಲ್ಲ ಅನ್ನ, ಸಾಂಬಾರ್ ಬಡಿದುಕೊಂಡು ಹೊರಗೆ ಬರ್ತಾನೆ. ಇದನ್ನು ನೋಡಿ ಪ್ರೇಕ್ಷಕರು ನಗುವಿನಲ್ಲಿ ಹೊಟ್ಟೆ ಹುಣ್ಣು ಮಾಡ್ಕೊಂಡಿದ್ರು. ಎಂಜಲು ಎಲೆ ಮೇಲೆ ಬಿದ್ದಿದ್ದ ಭಾವ ಈಗ ಆ ದೃಶ್ಯದ ಶೂಟಿಂಗ್ ಬಗ್ಗೆ ಹೇಳಿದ್ದಾರೆ. ಶೂಟಿಂಗ್ ಗೆ ಅನ್ನ, ಸಾಂಬಾರ್ ಮೆತ್ತಿರುವ ಬಟ್ಟಲನ್ನು ಅವ್ರ ಮೇಲೆ ಎಸೆಯಲಾಗಿದೆ. ಆದ್ರೆ ಅದು ವರ್ಜಿನಲ್ ಆಗಿರ್ಬೇಕಿತ್ತು. ನಿಜವಾಗ್ಲೂ ಎಂಜಲು ಬಟ್ಟಲನ್ನು ನನ್ನ ಮೇಲೆ ಹಾಕಿದ್ರೆ ಮತ್ತಷ್ಟು ಚೆನ್ನಾಗಿರ್ತಾಯಿತ್ತು ಎಂದಿದ್ದಾರೆ ಪುಷ್ಪರಾಜ್.
'ಪೇಮೆಂಟ್ ಬಂದಿಲ್ಲ, ಪುಷ್ಪ ಅರುಣ್‌ಕುಮಾರ್‌ಗೆ ಹೇಳಿ ಪ್ಲೇಸ್': ಕೊತ್ತಲವಾಡಿ ಸಿನಿಮಾ ನಟ ಮಹೇಶ್ ಗುರು
ಸ್ನಾನ ಮಾಡೋಕೆ ಒಂದು ಗಂಟೆ ಬೇಕಾಯ್ತು : ಶೂಟಿಂಗ್ ವೇಳೆ ತಂಡ ನೀಡಿದ ಬೆಂಬಲವನ್ನು ಇದೇ ವೇಳೆ ಪುಷ್ಪರಾಜ್ ಬೋಳಾರ್ ನೆನಪು ಮಾಡ್ಕೊಂಡಿದ್ದಾರೆ. ಮೈಮೇಲೆಲ್ಲ ಅನ್ನ – ಸಾಂಬಾರ್ ಹಾಕಿಕೊಂಡಿದ್ದ ಬೋಳಾರ್ ಮೈ ಸ್ವಲ್ಪ ಉರಿತಾಯಿತ್ತಂತೆ. ಶೂಟಿಂಗ್ ಮುಗಿದ ತಕ್ಷಣ ಬಿಸಿ ನೀರು ಸಿದ್ಧವಿತ್ತು. ನನ್ನನ್ನು ಸ್ನಾನಕ್ಕೆ ಕಳುಹಿಸಿದ್ರು. ಆದ್ರೆ ಕೊಳೆ ತೆಗೆಯೋಕೆ ಒಂದು ಗಂಟೆ ಬೇಕಾಯ್ತು ಎಂದಿದ್ದಾರೆ ಪುಷ್ಪರಾಜ್ ಬೋಳಾರ್.
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ನಟಿ ಅಮೂಲ್ಯ ಸಂದರ್ಶನ
92ರ ಅಜ್ಜಿ ಸಿಕ್ಕಿತ್ತು ಹೇಗೆ? : ಪುಷ್ಪರಾಜ್ ಬೋಳಾರ್ ಮಾತ್ರವಲ್ಲ ಸಿನಿಮಾದ ಅನೇಕ ಕಲಾವಿರದು ಹಾಟ್ ಸ್ಟಾರ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ನಿರ್ದೇಶಕ ಜೆಪಿ ತೂಮಿನಾಡ್, ಅಜ್ಜಿ ಬಗ್ಗೆ ಹೇಳಿದ್ದಾರೆ. ಆಡಿಷನ್ ನಲ್ಲಿ ತೂಮಿನಾಡ್ ಗೆ ಉಳಿದ ಎಲ್ಲ ಆಕ್ಟರ್ಸ್ ಸಿಕ್ಕಿದ್ರು. ಆದ್ರೆ ಅಜ್ಜಿಗೆ ಹುಡುಕಾಟ ನಡೆದಿತ್ತು. ಹುಡುಗರಿಗೆ ಅಜ್ಜಿ ವೇಷ ಹಾಕ್ಬೇಕು ಎನ್ನುವ ಆಲೋಚನೆಯನ್ನೂ ತೂಮಿನಾಡ್ ಟೀಂ ಮಾಡಿತ್ತು. ಕೊನೆಗೂ ಶೂಟಿಂಗ್ ಸ್ಥಳದಲ್ಲಿಯೇ ತೂಮಿನಾಡ್ ಅವರಿಗೆ 92 ವರ್ಷದ ಅಜ್ಜಿ ಸಿಕ್ಕಿದ್ರು. ಬೆನ್ನು ಬಾಗಿದ್ರೂ ಆಕ್ಟಿವ್ ಆಗಿದ್ದ ಅಜ್ಜಿಗೆ ದೃಶ್ಯಗಳನ್ನು ಹೇಗೆ ವಿವರಿಸೋದು ಎನ್ನುವ ಚಿಂತೆ ತೂಮಿನಾಡ್ ಅವರಿಗಿತ್ತು. ಆದ್ರೆ ಎಲ್ಲ ಸ್ಮೂಥ್ ಆಗಿ ನಡೀತು. ಅದಕ್ಕೆ ಕಾರಣ ಅಜ್ಜಿ. ಇಳಿ ವಯಸ್ಸಿನಲ್ಲೂ ಆಕ್ಟಿವ್ ಆಗಿದ್ದ ಅಜ್ಜಿಗೆ, ದೃಶ್ಯದ ಬಗ್ಗೆ ಮಾಹಿತಿ ನೀಡ್ತಿದ್ದಂತೆ ಕ್ಯಾಮರಾ ಏನು, ಸಿನಿಮಾ ಏನೂ ಅನ್ನೋದು ಗೊತ್ತಿಲ್ಲದ ಅಜ್ಜಿ ಅಧ್ಬುತವಾಗಿ ಆಕ್ಟಿಂಗ್ ಮಾಡಿದ್ರು ಎನ್ನುತ್ತಾರೆ ತೂಮಿನಾಡ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.